ಜಾತ್ಯಾತೀತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ, ಸಂವಿಧಾನದ ಅಡಿಯಲ್ಲಿ ಗೆದ್ದು ಬಂದ ಜನಪ್ರತಿಧಿ ಒಂದು ಧರ್ಮ ಮತ್ತು ಚಾಮುಂಡೇಶ್ವರಿ ದೇವಿಯ ಆಚರಣೆಯಲ್ಲಿ ದಲಿತರಿಗೆ ಅವಮಾನ ಮಾಡಿ ಹೇಳಿಕೆ ನೀಡುತ್ತಿರುವುದು ಆತನ ಮೆದುಳಿನಲ್ಲಿ ಹೊಲಸು ತುಂಬಿ ಬುದ್ಧಿ ಭ್ರಮಣೆಯಾಗಿರುವ ಸಂಕೇತ. ತಾವು ಸಂವಿಧಾನದ ಪ್ರಕಾರ ಆಯ್ಕೆಯಾಗಿ ಜನಪ್ರತಿನಿಧಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೀರಿ ಎಂಬುದು ನೆನಪಿರಲಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಚಾಮುಂಡಿ ದೇವಿಗೆ ಹೂ ಹಾಕುವವರು ಸನಾತನ ಧರ್ಮದವರೇ ಆಗಬೇಕು, ಒಬ್ಬ ದಲಿತ ಮಹಿಳೆಗೆ ಹೂ ಹಾಕುವ ಅಧಿಕಾರ ಇಲ್ಲಾ ಅಂತಾ ಯಾವ ಸಂವಿಧಾನದಲ್ಲಿ ಬರೆದಿದೆ ಯತ್ನಾಳ್ ರವರೇ, ಚಾಮುಂಡೇಶ್ವರಿಗೆ ಅವಮಾನ ಅಲ್ಲಾ ದಲಿತರಿಗೆ ಅವಮಾನ ಮಾಡಿದ ತಮ್ಮ ರಾಜಕೀಯ ಅಂತ್ಯ ಆರಂಭವಾಗಿದೆ. ಇದೇ ರೀತಿಯ ವರ್ತನೆ ಮುಂದುವರಿಸಿದರೆ ತಮ್ಮ ರಾಜಕೀಯ ಜೀವನ ನಿರ್ನಾಮ ಆಗುವುದರಲ್ಲಿ ಸಂಶಯವಿಲ್ಲಾ ಎಂದು ಹೇಳಿದ್ದಾರೆ.
ಸಾರ್ವಜನಿಕವಾಗಿ ದಲಿತ ಮಹಿಳೆಯರಿಗೆ ಅವಮಾನ ಮಾಡಿದ ಯತ್ನಾಳ್ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆಯನ್ವಯ ಸುಮೋಟೋ ಕೇಸು ದಾಖಲಿಸಿ ಜೈಲಿಗಟ್ಟಬೇಕು. ಇಲ್ಲವಾದರೆ ಈ ಬಚ್ಚಲು ಬಾಯಿ ಇನ್ನು ಮುಂದೆಯೂ ದಲಿತರಿಗೆ ಅವಮಾನ ಮುಂದುವರಿಸುವ ಅಪಾಯವಿದೆ. ಈ ದೇಶದ ಮೂಲನಿವಾಸಿಗಳ ಸುದ್ದಿಗೆ ಬಂದರೆ ತಕ್ಕ ಪರಿಣಾಮ ಎದುರಿಸಬೇಕಾದೀತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.