ಶಿವಮೊಗ್ಗ ತಾಲೂಕಿನ ಕೋಟೆಗಂಗೂರು ಗ್ರಾಮಕ್ಕೆ ಕೆಎಸ್ಸ್ಸಾರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಇಲ್ಲಿನ ಸ್ತ್ರೀ ಶಕ್ತಿ ಸ್ವಹಾಯ ಸಂಘದವರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಗ್ರಾಮಕ್ಕೆ ಬೆಳಗ್ಗೆ ೮:೪೫ ಮತ್ತು ಸಂಜೆ ೫:೧೫ಕ್ಕ್ಕೆ ಮಾತ್ರ ಬಸ್ ಬರುತ್ತಿದೆ. ಉಳಿದ ಸಮಯದಲ್ಲಿ ಬಸ್ ವ್ಯವಸ್ಥೆ ಇಲ್ಲ. ಇದರಿಂದ ನಗರಕ್ಕೆ ವಿವಿಧ ಕೆಲಸಕ್ಕ್ಕೆ ಬರುವವರಿಗೆ ತೀವ್ರ ತೊಂದರೆಯಾಗಿದೆ.
ಆಸ್ಪತ್ರೆಗೆ ಬರುವವರು ಬಸ್ ಸೌಕರ್ಯ ಇಲ್ಲದೆ ಪರದಾಡುವಂತಾಗಿದೆ. ಖಾಸಗಿ ವಾಹನದಲ್ಲಿ ಬಂದರೆ ಹೆಚ್ಚು ಹಣ ತೆರಬೇಕಾಗಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಗ್ರ್ರಾಮದಲ್ಲಿ ಕೂಲಿಕಾರರೇ ಅಧಿಕವಿದ್ದು, ಕೂಲಿ ಕೆಲಸಕ್ಕೆ ಶಿವಮೊಗ್ಗಕ್ಕೆ ಬರುತ್ತಾರೆ. ಆದರೆ ಇವರಿಗೆ ಬಸ್ ವ್ಯವಸ್ಥೆ ಇಲ್ಲದೆ ನಡೆದುಕೊಂಡೇ ಬರುವಂತಾಗಿದೆ.
ಶಾಲಾ- ಕಾಲೇಜನ್ನು ದಿನದ ಮಧ್ಯದಲ್ಲೇ ಬಿಟ್ಟರೆ ಮಕ್ಕಳು ಸಹ ನಡೆದೇ ಬರುವ ಸ್ಥಿತಿ ಇದೆ. ಈ ಬಗ್ಗೆ ಹಲವಾರು ಬಾರಿ ಕೆಎಸ್ಸಾರ್ಟಿಸಿಗೆ ಮತ್ತು ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಇನ್ನಾದರೂ ಮನವಿಯನ್ನು ಪರಿಗಣಿಸಿ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.