ಮೈಸೂರು ಜಿಲ್ಲೆ, ಹೆಗ್ಗಡದೇವನ ಕೋಟೆಯಲ್ಲಿ ನಡೆದ ಹೆಗ್ಗನೂರು ಅಣ್ಣೆಗೌಡ ಅವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ‘ಹೋರಾಟಗಾರರನ್ನು ಕಳೆದುಕೊಳ್ಳುವುದು ಸಮಾಜಕ್ಕೆ ನಷ್ಟ’ ಎಂದು ಅಭಿಪ್ರಾಯಪಟ್ಟರು.
“ಇಂದಿನ ಯುವ ಪೀಳಿಗೆ ಸಂಘಟನೆ ಕಡೆಗೆ ಮುಖ ಮಾಡದಿರುವ ಹೊತ್ತಿನಲ್ಲಿ ಹಿರಿಯ ಹೋರಾಟಗಾರರನ್ನು
ಕಳೆದುಕೊಳ್ಳುತ್ತಿರುವುದು ಸಮಾಜಕ್ಕೆ ನಷ್ಟ. ಅದೇ ರಾಜಕೀಯ ಕ್ಷೇತ್ರವಾದರೆ ಹಾಗಲ್ಲ, ಮಗದೊಬ್ಬ, ಮತ್ತೊಬ್ಬ ಬರಲು ಅವಕಾಶ. ಯಾವತ್ತಿಗೂ ಹೋರಾಟಗಾರರು ಸಮಾಜದ ಆಸ್ತಿ” ಎಂದರು.
ಹಿರಿಯ ಮುಖಂಡರಾದ ಜೆ ಪಿ ನಾಗರಾಜು ಮಾತನಾಡಿ ಅಣ್ಣೆಗೌಡರು ಸರಳ ಜೀವಿಯಾಗಿದ್ದು, ತಾಲ್ಲೂಕಿನಲ್ಲಿ ಸ್ವತಃ ತಮ್ಮ ಖರ್ಚಿನಿಂದ ಓಡಾಟ ನಡೆಸಿ ಸಂಘಟನೆ ಕಟ್ಟಲು ಶ್ರಮಿಸಿದವರು. ಇಂದು ದೊಡ್ಡ ಮಟ್ಟದಲ್ಲಿ ಸಂಘಟನೆ ಬೆಳೆಯಲು ಕಾರಣರಾದರು ಎಂದು ತಿಳಿಸಿದರು. ಜಿಲ್ಲಾ ಉಪಾಧ್ಯಕ್ಷ ಪಳನಿಸ್ವಾಮಿ ಮಾತನಾಡಿ ಪ್ರೊ. ನಂಜುಂಡಸ್ವಾಮಿ, ದಿವಂಗತ ಕೆ. ಎಸ್. ಪುಟ್ಟಣ್ಣಯ್ಯ ಅವರ ಸಾಂಗತ್ಯದಿಂದ, ಅಂದಿನಿಂದಲೂ ಹೋರಾಟದಲ್ಲಿ ತೊಡಗಿಸಿಕೊಂಡು ಇಂದಿನವರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು. ತಾಲ್ಲೂಕು ಅಧ್ಯಕ್ಷರಾದ ಮಹಾದೇವ ನಾಯಕ ಮಾತನಾಡಿ ತಾಲ್ಲೂಕಿನ ಮಟ್ಟಿಗೆ ಹಿರಿಯರ ಕೊಡುಗೆ ಅಪಾರವಾಗಿದೆ. ತಾಲ್ಲೂಕಿನಲ್ಲಿ ನಡೆದ ಹೋರಾಟಗಳಲ್ಲಿ ಅವರ ಪಾತ್ರ ಎಂದಿಗೂ ಸ್ಮರಣಿಯ ಎಂದರು.
ಕಾರ್ಯಕ್ರಮದ ಲೈವ್ ವೀಕ್ಷಿಸಿ : https://www.youtube.com/live/TZlz_Dcln6E?si=RpgkA8txp2pmUg6D
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ವಿಭಾಗಿಯ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮರಂಕಯ್ಯ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.