ದಸರಾ ಪ್ರಯುಕ್ತ ಎಂದಿನಂತೆ ಈ ವರ್ಷವೂ ಸೆ.22ರಿಂದ 10 ದಿನಗಳ ಕಾಲ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನವರಾತ್ರಿ ಉತ್ಸವವನ್ನು ಆಯೋಜಿಸಲಾಗಿದೆ.
ಭಾರತೀಯ ವಿದ್ಯಾಭವದ ವತಿಯಿಂದ ಆಯೋಜಿಸಿರುವ ಈ ಉತ್ಸವವು ಸೆ. 22ರಿಂದ ಅ.2ರವರೆಗೆ ನಡೆಯಲಿದ್ದು, ದಸರಾ ಗೊಂಬೆಗಳ ಪ್ರದರ್ಶನವನ್ನು ಏರ್ಪಡಿಸಿದೆ. ಖ್ಯಾತ ಗೊಂಬೆ ಕಲಾವಿದೆ ಅನು ವಿಶ್ವೇಶ್ವರ ಅವರ ನೇತೃತ್ವದಲ್ಲಿ ‘ಸಾ ರಾಮ ಕಲ್ಯಾಣ’ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದೆ. ಸೌಮ್ಯ ಹೇಮಂತ್ ಮತ್ತು ಕೌಶಿಕ್ ಸೂರ್ಯ ಅವರ ನೇತೃತ್ವದಲ್ಲಿ ರಂಗೋಲಿ ಸ್ಪರ್ಧೆ ಇರಲಿದ್ದು, ರಾಮಾಯಣ ಕುರಿತಂತೆ ಗೊಂಬೆ ಪ್ರದರ್ಶನವನ್ನು ವಿದ್ಯಾಭವನದ ಆವರಣದಲ್ಲಿ ಜರುಗಲಿದೆ.
ಹೆಸರಾಂತ ವಿದ್ವಾಂಸಕಿ ಡಾ. ಎಸ್ ಆರ್ ಲೀಲಾ ಅವರು ಸೆ.ರ್ 27ರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಬೆಳಗ್ಗೆ 11.00 ಗಂಟೆಗೆ ‘ಭಾರತೀಯ ಸಂಪ್ರದಾಯದಲ್ಲಿ ಗೊಂಬೆಗಳು’ ವಿಷಯವನ್ನು ಕುರಿತ ವಿಶೇಷ ಉಪನ್ಯಾಸ ನೀಡಲಿದ್ದಾರೆ. ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಕೆ.ಆರ್.ಜಿ. ಸಭಾಂಗಣದಲ್ಲಿ ಸೆ.22ರಿಂದ ಅ.2ರವರೆಗೆ ಗೊಂಬೆಗಳ ಹಾಗೂ ರಂಗೋಲಿ ಪ್ರದರ್ಶನವಿದ್ದು, ಬೆಳಗ್ಗೆ 11.00 ರಿಂದ ಮಧ್ಯಾಹ್ನ 1.00 ರವರೆಗೆ ಮತ್ತು ಮಧ್ಯಾಹ್ನ 3.00 ರಿಂದ 6.00ರವರೆಗೆ ವೀಕ್ಷಣೆಗೆ ತೆರೆದಿರುತ್ತದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ಬಂಗ್ಲೆಗುಡ್ಡೆ ಪ್ರದೇಶದಲ್ಲಿ ವ್ಯಾಪಕ ಶೋಧಕ್ಕೆ ಎಸ್‌ಐಟಿ ಮತ್ತೆ ಸಿದ್ಧತೆ!
ಹೆಚ್ಚಿನ ವಿವರಗಳಿಗಾಗಿ ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮೀ ಕೆ ರಾವ್, ದೂರವಾಣಿ – 9845625899 ಇವರನ್ನು ಸಂಪರ್ಕಿಸಬಹುದಾಗಿ ಎಂದು ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್ ಎನ್ ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.