‘ಚಾಮುಂಡಿ ದೇವಿಗೆ ಹೂ ಹಾಕುವವರು ಸನಾತನ ಧರ್ಮದವರೇ ಆಗಿರಬೇಕು. ಸಾಮಾನ್ಯ ದಲಿತ ಮಹಿಳೆಗೂ ಅಧಿಕಾರವಿಲ್ಲ’ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಖಂಡಿಸಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಕೆಡಿಎಸ್ಎಸ್ ತಾಲ್ಲೂಕು ಅಧ್ಯಕ್ಷ ಲಕ್ಷ್ಮೇಶ್ವರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಸುರೇಶ ನಂದೆಣ್ಣನವರ ನೇತೃತ್ವದಲ್ಲಿ ಬಸವನಗೌಡ ಪಾಟೀಲ ಯತ್ನಾಳ ಮೇಲೆ ಇಂದು ಸಬ್ ಇನ್ಸಪೆಕ್ಟರಗೆ ದೂರು ನೀಡಿದ್ದಾರೆ.
ನಂತರ ಸುರೇಶ ನಂದೆಣ್ಣನವರ ಮಾತನಾಡಿ, “ಮೈಸೂರು ದಸರಾ ಉದ್ಘಾಟಕರ ವಿಷಯದ ಕುರಿತು ಬಸವನಗೌಡ ಪಾಟೀಲ್ ಯತ್ನಾಳ ಮಾತನಾಡುವಾಗ ‘ಕರ್ನಾಟಕ ರಾಜ್ಯದ ಸಮಸ್ತ ದಲಿತ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿ, ದಲಿತರಿಗೆ ಹಾಗೂ ದಲಿತ ಹೆಣ್ಣು ಮಕ್ಕಳಿಗೆ ಅವಮಾನ ಮಾಡಿ ಜಾತಿ ನಿಂದನೆ ಮಾಡಿದ್ದು, ಖಂಡನೀಯ” ಎಂದು ಹೇಳಿದ್ದಾರೆ.

“ಶಾಸಕ ಬಸವನಗೌಡ ಪಾಟೀಲ ಯತ್ನಾಳ ಮೇಲೆ ಎಸ್ಸಿ ಎಸ್ಟಿ ಪ್ರಕರಣ ದಾಖಲು ಮಾಡಿ, ಕೂಡಲೇ ಅವರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರು ನೀಡಿದ್ದು, ವಿಳಂಬ ಮಾಡದೇ ಪ್ರಕರಣ ದಾಖಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಮುಖಂಡರು ಫಕ್ಕಿರೇಶ ಮ್ಯಾಟನವರ, ಬಸವಣ್ಣೆಪ್ಪ ನಂದೆಣ್ಣವರ, ಕೋಟೆಪ್ಪ ವರ್ದಿ, ದೇವಪ್ಪ ನಂದೆಣ್ಣವರ, ನಾಗಪ್ಪ ನಂದೆಣ್ಣವರ, ಜಗದೀಶ ಹುಲಿಗೆಮ್ಮನವರ, ಮಲ್ಲೇಶ ಬಸವನಾಯ್ಕರ, ಮಾಂತೇಶ ಗುಡಸಲಮನಿ, ರಾಮು ಗಡದವರ, ಬಸರಾಜ ಹಿರೆಮನಿ, ಸದಾನಂದ ನಂದೆಣ್ಣವರ, ನಾಗರಾಜ ಗೋನಾಳ, ನಾಗರಾಜ ಅಮರಾಪೂರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
ವರದಿ : ಮಲ್ಲೇಶ ಮಣ್ಣಮ್ಮನವರ ಸಿಟಿಜನ್ ಜರ್ನಲಿಸ್ಟ್ ಲಕ್ಷ್ಮೇಶ್ವರ