ಏಷ್ಯಾ ಕಪ್ | ಒಮಾನ್ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು

Date:

Advertisements

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಮ್ ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಒಮಾನ್ ವಿರುದ್ಧದ ಪಂದ್ಯದಲ್ಲಿ ಶುಕ್ರವಾರ ಭಾರತ ತಂಡವು 21 ರನ್‌ಗಳ ಜಯ ಪ್ರಯಾಸದ ಗೆಲುವು ಸಾಧಿಸಿತು.

ವಿಶ್ವದ ನಂಬರ್ ಒನ್ ಟಿ20 ತಂಡವಾಗಿರುವ ಭಾರತದ ವಿರುದ್ಧ ದಿಟ್ಟ ಆಟ ಪ್ರದರ್ಶಿಸಿದ ಕ್ರಿಕೆಟ್ ಶಿಶುಗಳಾದ ಒಮಾನ್ ತಂಡ ಪಂದ್ಯ ಸೋತರೂ ಎಲ್ಲರ ಮನಸ್ಸು ಗೆದ್ದಿತು. ಏಕಪಕ್ಷೀಯ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತ ತಂಡಕ್ಕೆ ‘ಅನನುಭವಿ’ ಒಮಾನ್ ಸುಲಭವಾಗಿ ಮಣಿಯಲಿಲ್ಲ.

ಶುಕ್ರವಾರ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಸೂರ್ಯಕುಮಾ‌ರ್ ಯಾದವ್ ಪಡೆ ಕೊನೆಗೆ 21 ರನ್‌ಗಳ ಪ್ರಯಾಸದ ಜಯ ಗಳಿಸಿತು. ಈ ಗೆಲುವಿನ ಮೂಲಕ ಭಾರತ ತಂಡ ಎ ಬಣದಿಂದ ಅಜೇಯವಾಗಿ ಸೂಪರ್ 4ರ ಹಂತವನ್ನು ಪ್ರವೇಶಿಸಿದೆ.

ಅಬುಧಾಬಿಯ ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಎ ಬಣದ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಇದಕ್ಕುತ್ತರವಾಗಿ ಒಮಾನ್ ತಂಡ 20 ಓವರ್ ಗಳು ಮುಗಿದಾಗ 4 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ ಒಂದೊಂದು ವಿಕೆಟ್‌ಗೂ ಭಾರತದ ಬೌಲಿಂಗ್ ಪಡೆಯನ್ನು ಪರದಾಡುವಂತೆ ಮಾಡಿದ ಒಮಾನ್ ಬ್ಯಾಟಿಂಗ್ ಪಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಆಮಿರ್ ಕಲೀಂ ಮತ್ತು ಹಮೀದ್ ಮಿರ್ಝಾ ಜೋಡಿಯು ಭಾರತದ ಪಾಲಿಗೆ ಅಕ್ಷರಶಃ ಸೋಲಿನ ರುಚಿ ತೋರಿಸಲು ಹೊರಟ ಹಾಗಿತ್ತು. ಇವರಿಬ್ಬರು 2ನೇ ವಿಕೆಟ್ ಗೆ 93 ರನ್ ಗಳ ಜೊತೆಯಾಟವಾಡಿದರು. ಕೊನೆಯ 3 ಓವರ್ ಗಳಲ್ಲಿ ಒಮಾನ್ ಗೆ ಬೇಕಿದ್ದುದ್ದು 48 ರನ್ ಗಳು . ಈ ಹಂತದಲ್ಲಿ ಆಮೀಕ್ ಕಲೀಂ ಅವರು ಹರ್ಷಿತ್ ರಾಣಾ ಅವರ ಬೌಲಿಂಗ್ ನಲ್ಲಿ ನಿರಂತರ 2 ಬೌಂಡರಿ ಹೊಡೆದು ಒಮಾನ್ ಪಾಳಯದಲ್ಲಿ ಹರ್ಷ ತುಂಬಿದ್ದರು. ಆದರೆ 4ನೇ ಎಸೆತದಲ್ಲಿ ಕಲೀಂ ಅವರು ಹೊಡೆದ ಚೆಂಡನ್ನು ಲೆಗ್ ಲಾಂಗ್ ನಲ್ಲಿದ್ದ ಹಾರ್ದಿಕ್ ಪಾಂಡ್ಯ ಅವರು ಉತ್ತಮ ಫೀಲ್ಡೀಂಗ್ ಮೂಲಕ ಕ್ಯಾಚ್ ಹಿಡಿದರು. ಅಲ್ಲಿಗೆ ಒಮಾನ್‌ ಗೆಲುವಿನ ನಿರೀಕ್ಷೆಗೆ ಬಲ ಬರಲೇ ಇಲ್ಲ.

ಭಾರತ ತಂಡವು ಈ ಮೊದಲೇ ಸೂಪರ್ ಫೋರ್ ಹಂತಕ್ಕೆ ಸ್ಥಾನ ಕಾಯ್ದಿರಿಸಿತ್ತು. ಹೀಗಾಗಿ ಸೂರ್ಯಕುಮಾ‌ರ್ ಅವರು ಬ್ಯಾಟಿಂಗ್‌ಗೆ ಇಳಿಯದೆ ಉಳಿದ ಆಟಗಾರರಿಗೆ ‘ಅಭ್ಯಾಸ’ಕ್ಕೆ ಅವಕಾಶ ಮಾಡಿಕೊಟ್ಟರು. ವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೆ ವಿಶ್ರಾಂತಿ ನೀಡಿ ಅರ್ಷದೀಪ್ ಸಿಂಗ್‌ ಮತ್ತು ಹರ್ಷಿತ್ ರಾಣಾಗೆ ಅವಕಾಶ ನೀಡಲಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಆಯ್ಕೆ; ಯಾರಿವರು?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ...

ಶೀತಲ್ ದೇವಿಗೆ ಐತಿಹಾಸಿಕ ಚಿನ್ನ; ವಿಶ್ವ ಪ್ಯಾರಾ ಆರ್ಚರಿಯಲ್ಲಿ ಭಾರತದ ಹೆಮ್ಮೆ

ದಕ್ಷಿಣ ಕೊರಿಯಾದ ಗ್ವಾಂಗ್ಜುನಲ್ಲಿ ನಡೆದ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ...

Asia CUP2025 | ‘ಸೂಪರ್ ಓವರ್’ ಪಂದ್ಯದಲ್ಲಿ ಲಂಕಾ ಮಣಿಸಿ, ಫೈನಲ್‌ಗೆ ಭಾರತ ಲಗ್ಗೆ

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಏಷ್ಯಾ ಕಪ್‌ ಕ್ರಿಕೆಟ್‌...

Download Eedina App Android / iOS

X