ಮುಂಗಾರು ಋತುವಿನಲ್ಲಿ ಬೆಳೆದ ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ, ಕಡಲೆಕಾಳು ಹಾಗೂ ಸೋಯಾಬಿನ್ ಬೆಳೆಗಳನ್ನು ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ಖರೀದಿಸಲು ಅನುಮತಿ ನೀಡಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, “ಕರ್ನಾಟಕದಲ್ಲಿ 2025-26 ರ ಖಾರಿಫ್ ಋತುವಿನಲ್ಲಿ (ಮುಂಗಾರು ಬೆಳೆ) ಬೆಳೆದ ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ, ಕಡಲೆಕಾಳು ಮತ್ತು ಸೋಯಾಬಿನ್ ಬೆಳೆಯನ್ನು ಕರ್ನಾಟಕ ರಾಜ್ಯ ಸರ್ಕಾರದ ಪ್ರಸ್ತಾವನೆಯಂತೆ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಕೃಷಿ ಸಚಿವಾಲಯ ಖರೀದಿಗೆ ಅನುಮತಿ ನೀಡುವಂತೆ ವಿನಂತಿಸಿದ್ದೆ, ಈಗ ಕೇಂದ್ರ ಸಚಿವರು ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಅನುಮತಿ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.
“2025-26 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಿಂದ 38000MT ಹೆಸರು ಕಾಳು, 60,810MT ಉದ್ದು, 15650 MT ಸೂರ್ಯಕಾಂತಿ, 61,148 MT ಕಡಲೆಬೀಜ ಮತ್ತು 1,15,000 ಸೋಯಾಬಿನ್ ಬೆಳೆಯನ್ನು ಖರೀದಿಸಲು ಕೇಂದ್ರ ಸರ್ಕಾರದ ಕೃಷಿ ಇಲಾಖೆ ಅನುಮತಿ ನೀಡಿದೆ. ರಾಜ್ಯ ಸರ್ಕಾರ ಈ ಕೂಡಲೇ ಈಗ ಜಿಲ್ಲಾವಾರು ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ರಾಜ್ಯದ್ಯಂತ ಖರೀದಿ ಕೇಂದ್ರಗಳನ್ನು ಆರಂಭಿಸಿ ಖರೀದಿ ಪ್ರಕ್ರಿಯೇಗೆ ಚಾಲನೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ನಾನು ಕೇಂದ್ರ ಕೃಷಿ ಸಚಿವರಲ್ಲಿ ಕರ್ನಾಟಕದಲ್ಲಿ 2025-26 ರ ಖಾರಿಫ್ ಋತುವಿನಲ್ಲಿ (ಮುಂಗಾರು ಬೆಳೆ) ಬೆಳೆದ ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ, ಕಡಲೆಕಾಳು ಮತ್ತು ಸೋಯಾಬಿನ್ ಬೆಳೆಯನ್ನು ಕರ್ನಾಟಕ ರಾಜ್ಯ ಸರ್ಕಾರದ ಪ್ರಸ್ತಾವನೆಯಂತೆ ಬೆಂಬಲ ಬೆಲೆ ಯೋಜನೆಯಡಿ Price Support Scheme (PSS) ಭಾರತ ಸರ್ಕಾರದ ಕೃಷಿ ಸಚಿವಾಲಯ ಖರೀದಿಗೆ… pic.twitter.com/PXTyRgcNp3
— Pralhad Joshi (@JoshiPralhad) September 20, 2025