ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳರನ್ನು ಶಾಸಕ ಸ್ಥಾನದಿಂದ ವಜಾ ಗೊಳಿಸುವಂತೆ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ (ಎ ಐ ಡಿ ಆರ್ ಎಂ) ದಾವಣಗೆರೆ ಜಿಲ್ಲಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ದಾವಣಗೆರೆ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
“ಇತ್ತೀಚೆಗೆ ದಾವಣಗೆರೆಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಬಸನಗೌಡ ಪಾಟೀಲ್ ಯತ್ನಾಳ್ ಆಗಮಿಸಿದಾಗ ಮಾಧ್ಯಮದವರ ಜೊತೆಗೆ ಮಾತನಾಡುವಾಗ ನಾಡ ಹಬ್ಬ ದಸರಾ ಉದ್ಘಾಟನೆ ವಿಷಯ ಕುರಿತಂತೆ ಬೂಕರ್ ಪ್ರಶಸ್ತಿ ವಿಜೇತರಾದ ಭಾನು ಮುಸ್ತಾಕ್ ರವರ ಬಗ್ಗೆ ಮಾತನಾಡುವ ಸಮಯದಲ್ಲಿ ಮೈಸೂರು ದಸರಾ ಹಬ್ಬ ಕುರಿತು ದಲಿತ ಮಹಿಳೆಯೂ ಉದ್ಘಾಟನೆ ಮಾಡಲು ಯೋಗ್ಯರಲ್ಲ ಎಂದು ಬಾಯಿಗೆ ಬಂದಂತೆ ಮಾತನಾಡಿ ಇಡೀ ದಲಿತ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದಲಿತರ ಮತಗಳಿಂದಲೇ ಸದಾ ಗೆದ್ದು ಬರುತ್ತಿರುವ ಇಂತಹ ದಲಿತ ಮಹಿಳಾ ವಿರೋಧಿಯಾದ ಬಸನಗೌಡ ಪಾಟೀಲ ಯತ್ನಾಳ್ ರವರನ್ನು ಕರ್ನಾಟಕ ವಿಧಾನಸಭಾ ಸದಸ್ಯತ್ವದಿಂದ ಈ ಕೂಡಲೇ ವಜಾ ಗೊಳಿಸಬೇಕು” ಎಂದು ಒತ್ತಾಯಿಸಿದರು.
ಅಖಿಲ ಭಾರತ ದಲಿತ ಆಂದೋಲನ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ಮಾಡುವ ಮೂಲಕ ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯು ಟಿ ಖಾದರ್ ರವರಿಗೆ ದಾವಣಗೆರೆ ಉಪ ವಿಭಾಗಾಧಿಕಾರಿಗಳ ಮೂಲಕ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ದಲಿತ ಕಾಲೋನಿಯ ಮೂಲಸೌಕರ್ಯ ಅಭಿವೃದ್ಧಿಗೆ ದಸಂಸ ಪ್ರತಿಭಟನೆ
ಈ ಸಂದರ್ಭದಲ್ಲಿ ಎ ಐ ಡಿ ಆರ್ ಎಂ ಜಿಲ್ಲಾಧ್ಯಕ್ಷ ನರೇಗಾ ರಂಗನಾಥ್, ಪ್ರಧಾನ ಕಾರ್ಯದರ್ಶಿ ರಾಜು ಕೆರೆಯಾಗಳಹಳ್ಳಿ, ಖಜಾಂಚಿ ರಮೇಶ್ ಸಿ ದಾಸರ್ ಮತ್ತು ಮುಖಂಡರುಗಳಾದ ನಾಗನೂರು ನಿಂಗಪ್ಪ ಮತ್ತು ಯೋಗೇಶ್ ಹಾಗೂ ಇತರರು ಹಾಜರಿದ್ದರು.