ಗದಗ | ದಸರಾ ಹಬ್ಬ ಭಾನು ಮುಸ್ತಾಕ್ ಉದ್ಘಾಟನೆ ಡಿಎಸ್‌ಎಸ್‌: ಸ್ವಾಗತ 

Date:

Advertisements

“ಕರ್ನಾಟಕದಲ್ಲಿ ನಡೆಯುವ ನಾಡ ದಸರಾ ಹಬ್ಬವನ್ನು ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಲೇಖಕಿ ಬಾನು ಮುಷ್ತಾಕ್ ಅವರನ್ನು ಉದ್ಘಾಟನೆಗೆ ಆಹ್ವಾನ ನೀಡಿದ ಸರ್ಕಾರದ ನಡೆಯನ್ನು ಸ್ವಾಗತಿಸುತ್ತೇನೆ ” ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಗದಗ ಜಿಲ್ಲಾ ಸಂಚಾಲಕ ಬಾಲರಾಜ ಅರಬರ್ ಹೇಳಿದರು.

ಗದಗ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, “ದಸರಾ ನಾಡ ಹಬ್ಬ ಒಂದು ಧರ್ಮ, ಒಂದು ಜಾತಿಯ ಆಚರಣೆ ಅಲ್ಲ. ಸರ್ವ ಜನರು ಸೌಹಾರ್ದತೆಯ ಪ್ರತಿಕವಾಗಿರುವ ದಸರಾ ಹಬ್ಬವನ್ನು ಒಂದು ಧರ್ಮಕ್ಕೆಷ್ಟೇ ಸೀಮಿತಗೊಳಿಸುವುದು ಸರಿಯಲ್ಲ. ನಮ್ಮ ದೇಶ ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಎಲ್ಲಾ ಜಾತಿ ಧರ್ಮದವರು ಕೂಡಿ ದಸರಾ ಹಬ್ಬವನ್ನು ಆಚರಿಸಿದರೇ ಮೆರಗು. ಕುವೆಂಪು ಬಸವಣ್ಣ ಹುಟ್ಟಿದ ಈ ಶ್ರೇಷ್ಠ ನಾಡಿನ ಸರ್ವ ಜನ ಸೇರಿ ಆಚರಿಸಿದರೆ ಕುವೆಂಪು ಮತ್ತು ಬಸವಣ್ಣನವರ ಆಸೆ ಈಡೇರಿದಂತೆ ಆಗುತ್ತದೆ. ಎಂದರು.

“ಈ ದಸರಾ ಹಬ್ಬವನ್ನು ಮೊದಲು ಜಾತಿ ಮತ ಧರ್ಮ ಲಿಂಗ ಭೇದವಿಲ್ಲದೆ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಬರುತ್ತಾರೆ. ತಮ್ಮ ರಾಜಕೀಯ ಲಾಭಕ್ಕೋಸ್ಕರ ವಿವಾದ ಎಬ್ಬಿಸುತ್ತಿರುವ ನಾಚಿಕೆಗೇಡಿನ ಕೆಲಸ ವಿದೇಶಿ ಪ್ರವಾಸಿಗರ ಮುಂದೆ ನಮ್ಮ ನಾಡಿನ ಗೌರವಕ್ಕೆ ಧಕ್ಕೆ ಬರುತ್ತದೆ. ಇಂಥ ಮನಸ್ಥಿತಿ ಹೊಂದಿದವರಿಗೆ ತಕ್ಕ ಪಾಠ ಕಲಿಸಬೇಕಿದೆ. ಬೂಕರ್ ಪ್ರಶಸ್ತಿಗೆ ಭಾಜನರಾದ ಪ್ರಥಮ ಭಾರತೀಯ ಅದರಲ್ಲೂ ವಿಶೇಷವಾಗಿ ಭಾರತೀಯ ಮಹಿಳೆಯಾಗಿದ್ದಾರೆ. ಈ ನಮ್ಮ ರಾಷ್ಟ್ರಕ್ಕೆ ಗೌರವ ತಂದ ಮಹಿಳೆಯನ್ನು ಅಭಿನಂದಿಸುವ ಯೋಗ್ಯತೆ ಇಲ್ಲದ ದೇಶದ ನಾಯಕರ ಮನಸ್ಥಿತಿ ಅಸಹ್ಯ ಹುಟ್ಟಿಸುತ್ತದೆ” ಎಂದರು.

ಕ್ರಿಕೆಟ್ ಆಟಗಾರ ಶತಕ ಹೊಡೆದಾಗ ಅಭಿನಂದಿಸುವ ಸರ್ವೋಚ್ಚ ನಾಯಕ ಟ್ವಿಟ್ ಮಾಡಿ ಅಭಿನಂದಿಸುವ ಈ ದೇಶಕ್ಕೆ ಪ್ರಥಮ ಬೂಕರ್ ಪ್ರಶಸ್ತಿ ತಂದ ಕೊಟ್ಟ ಮಹಿಳೆಯನ್ನು ಧರ್ಮದ ಆಧಾರದಲ್ಲಿ ನೋಡಿದ ನಿಜಕ್ಕೂ ಬುದ್ಧ, ಗಾಂಧಿ ಹುಟ್ಟಿದ ದೇಶದ ದುರಂತವೇ ಸರಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಮಹಿಳೆ ಭಾನು ಮುಸ್ತಾಕ ಈ ಬಾರಿ ನಾಡಹಬ್ಬ ದಸರಾವನ್ನು ಉದ್ಘಾಟಿಸುತ್ತಿರುವುದು ಸಂತಸ. ಈ ದೇಶಕ್ಕೆ ಸಂವಿಧಾನಕ್ಕೆ ಸಮಾನತೆಯನ್ನು ಸಾರುವ ಈ ಭಾರತ ಭೂಮಿಗೆ ಕುವೆಂಪು ಅವರು ಸಾರಿದ ಸರ್ವ ಜನಾಂಗದ ಶಾಂತಿ ತೋಟ ಕಲ್ಪನೆಗೆ ಹೇಳಿದ ಕನ್ನಡಿಯಾಗಿದೆ. ಈ ಮೂಲಕ ಈ ಬಾರಿ ನಾಡ ಹಬ್ಬಕ್ಕೆ ಹೆಚ್ಚು ಮೆರಗು ಬರುತ್ತದೆ” ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಗದಗ ಜಿಲ್ಲಾ ಪ್ರಧಾನ ಸಂಚಾಲಕರಾದ ಬಾಲರಾಜ್ ಅರಬರ ಹೇಳಿದರು..

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

ಶಿವಮೊಗ್ಗ | ಸತ್ಯ – ಅಹಿಂಸೆ ಪ್ರಬಲ ಅಸ್ತ್ರಗಳು : ಡಾ. ಟಿ. ಅವಿನಾಶ್

ಶಿವಮೊಗ್ಗ, ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಮಹಾತ್ಮ ಗಾಂಧೀಜಿಯವರು ಬಳಸಿದ ಅಸ್ತ್ರಗಳೆಂದರೆ...

Download Eedina App Android / iOS

X