ಲಿಂಗಸೂಗೂರು ತಾಲ್ಲೂಕಿನ ಈಚನಾಳ ಗ್ರಾಮ ಪಂಚಾಯತಿಯಲ್ಲಿ ಪಿಡಿಓ ಹಾಗೂ ಪ್ರಭಾವಿ ವ್ಯಕ್ತಿಗಳ ಅವ್ಯವಹಾರ ಬೆಳಕಿಗೆ ಬಂದಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮ ನಡೆದಿದ್ದು, ಅರ್ಹ ಫಲಾನುಭವಿಗಳನ್ನು ಬಿಟ್ಟು ಅನರ್ಹರಿಗೆ ಮನೆ ಹಂಚಿಕೆ ಮಾಡಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯವರು ಪ್ರತಿಭಟನೆ ನಡೆಸಿದರು.
ಮೂರು ವರ್ಷಗಳಿಂದ ಒಂದೇ ಮನೆಗೆ ಮೂರು ಬಾರಿ ಜಿಪಿಎಸ್ ನಡೆಸಿ, ಮೂವರಿಗೆ ತಲಾ ₹30,000 ಮೊತ್ತ ಪಾವತಿಸಲಾಗಿದೆ. ಲಕ್ಷ್ಮೀ (ಗಂಡ ಬಸವರಾಜ), ಯಶೋದಾ (ಗಂಡ ಶಿವಪ್ಪ) ಹಾಗೂ ವಿಶಾಲಾಕ್ಷಿ (ಗಂಡ ಶರಣಬಸವ) ಎಂಬವರ ಖಾತೆಗಳಿಗೆ ಸರ್ಕಾರದ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ರೈತ ಸಂಘಟನೆಯವರು ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರದ ಹಣವನ್ನು ಲೂಟಿ ಮಾಡಲಾಗಿದೆ. ಪಿಡಿಓ ಹಾಗೂ ಪ್ರಭಾವಿ ವ್ಯಕ್ತಿಗಳಿಂದ ಈ ಅವ್ಯವಹಾರ ನಡೆದಿದೆ. ತಕ್ಷಣ ತನಿಖೆ ನಡೆಸಿ ಜವಾಬ್ದಾರರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಸರ್ಕಾರಕ್ಕೆ ನಷ್ಟವಾದ ಹಣವನ್ನು ವಾಪಸ್ ಪಡೆಯಬೇಕು,” ಎಂದು ರೈತ ಸಂಘಟನೆಯ ನಾಯಕರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಳೆಯಿಂದ ಬೆಳೆ ಹಾನಿ : ಪರಿಹಾರಕ್ಕೆ ರೈತರ ಪ್ರತಿಭಟನೆ
ಈ ಬಗ್ಗೆ ರೈತ ಸಂಘದ ಮುಖಂಡ ಶಿವಪುತ್ರಪ್ಪ ಮಾತನಾಡಿ, “ಮೂರು ವರ್ಷಗಳಿಂದ ಒಂದೇ ಮನೆಗೆ ಮೂರು ಬಾರಿ ಜಿಪಿಎಸ್ ಮಾಡಿ ಹಣ ಕಳವು ಮಾಡಿದ ವಿಚಾರವನ್ನು ತಾಲ್ಲೂಕು ಪಂಚಾಯತ್‌ಗೆ ತಿಳಿಸಿದ್ದರೂ ಯಾವುದೇ ಸ್ಪಂದನೆ ಲಭಿಸಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಚಿತ್ತಾಪುರಕ್ಕೆ ಭೇಟಿ ನೀಡಿದಾಗ ಲೋಪದೋಷಗಳ ಬಗ್ಗೆ ಮನವಿ ಸಲ್ಲಿಸಲಾಯಿತು ” ಎಂದು ತಿಳಿಸಿದರು.

