ಮಹಿಷಾಸುರ ಚಾತುರ್ವರ್ಣ ಧರ್ಮಕ್ಕೆ ಸೇರಿದವನಲ್ಲ. ಮಹಿಷ ಮತ್ತು ಚಾಮುಂಡಿ ಮುಖಾಮುಖಿಯಾಗಿಲ್ಲ. ಭೌಗೋಳಿಕವಾಗಿ ಮಹಿಷಾಸುರ ಬೌದ್ಧ ಧರ್ಮ ಪ್ರಚಾರಕ ಮತ್ತು ಅಸ್ಮಿತೆಯಾಗಿ ನಮ್ಮ ನಡುವೆ ಕಂಗೊಳಿಸುವ ಇತಿಹಾಸ ಪುರುಷರಾಗಿದ್ದಾರೆ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.
ಅವರು ಇಂದು ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ಮಹಿಷಾಸುರನಿಗೆ ಪುಷ್ಪಾರ್ಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಹಿಂದೂ ಪುರಾಣಗಳಲ್ಲಿ
ಅವಾಸ್ತವಿಕ, ಅಮಾನವೀಯ ಮತ್ತು ಅವೈಜ್ಞಾನಿಕ ಸಂಗತಿಗಳನ್ನು ಮಂಡಿಸಿ ವೈದಿಕಶಾಹಿ ಮೂಲನಿವಾಸಿಗಳ ಸ್ವಾತಂತ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾರ್ವಭೌಮತ್ವಗಳನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ಭಾರತದಲ್ಲಿ
ಮನುವಾದಿಗಳು ಪುರಾಣ ಮತ್ತು ಮಹಾಕಾವ್ಯಗಳನ್ನೇ ಇತಿಹಾಸವೆಂದು ಬಣ್ಣಿಸಿ ಇಲ್ಲಿನ ಮೂಲನಿವಾಸಿಗಳನ್ನು ದಾರಿತಪ್ಪಿಸಿದ್ದಾರೆ ಎಂದರು.

ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ಬಲಿ ಚಕ್ರವರ್ತಿ, ರಾವಣ, ನರಕಾಸುರ, ಮಹಿಷಾಸುರ ಮುಂತಾದ ಮಹಾರಾಜರನ್ನು ಹೇಯವಾಗಿ ಚಿತ್ರಿಸುವ ಮೂಲಕ ಬೌದ್ಧ ಧರ್ಮವನ್ನು ನಾಶಮಾಡುವ ಪಿತೂರಿಯನ್ನು ಮನುವಾದಿಗಳು ಮಾಡಿದ್ದಾರೆ.ಎಂದ ಅವರು ಮಹಿಷಾಸುರ ಎಂದರೆ ಪ್ರಾಣವನ್ನು ರಕ್ಷಿಸುವ ಮಹಾರಕ್ಷಕ ಮತ್ತು ಮಹಿಷ ಮಂಡಲವನ್ನು ಕಟ್ಟಿ ಬೆಳೆಸಿದ ದೊರೆ ಎಂದರು.
ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ, ಮಹಿಷಾಸುರನ ಸ್ಮರಣೆ ಯಾವುದೇ ಧರ್ಮ ಅಥವಾ ಸರಕಾರದ ವಿರುದ್ಧವಲ್ಲ. ಇದು ಪುರಾಣ, ಮೌಢ್ಯ ಮತ್ತು ಅವೈಜ್ಞಾನಿಕ ಸಂಪ್ರದಾಯಗಳ ವಿರುದ್ಧ
ಮೂಲನಿವಾಸಿಗಳು ಆಚರಿಸುವ ಹಬ್ಬ. ಭಾರತೀಯ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ಯದ ಹಕ್ಕು ಎಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವಸೇನೆಯ ಮುಖಂಡರುಗಳಾದ ಹರೀಶ್ ಸಲ್ಯಾನ್, ದಯಾಕರ್ ಮಲ್ಪೆ,ಅರುಣ್ ಸಾಲ್ಯಾನ್,ಭಗವಾನ್ ಮಲ್ಪೆ, ಪ್ರಶಾಂತ್‌ಬಿ,ಎನ್, ರವಿರಾಜ್ ಲಕ್ಷಿö್ಮನಗರ,ನವೀನ್ ಬನ್ನಂಜೆ, ಶಶಿಕಾಂತ್ ನೇಜಾರು, ಸಾಧು ಚಿಟ್ಪಾಡಿ, ವಿನಯ ಕೊಡಕೂರು, ರಾಜೇಶ್ ಮಲ್ಪೆ , ಅಶೋಕ್ ನಿಟ್ಟೂರು, ಸುಕೇಶ್ ಪುತ್ತೂರು, ರಾಜೇಶ್ ಸಂತೆಕಟ್ಟೆ, ಜೀವನ್ ಕೊಡವೂರು, ವಿಘ್ನೇಶ್ ಉಡುಪಿ, ಸುಶೀಲ್ ಕೊಡವೂರು, ಶ್ರವಣ್ ಸಂತೆಕಟ್ಟೆ, ಉಡುಪಿ ನಗರಸಭಾ ಸದಸ್ಯ,ಯಾದವ ಕೊಳ, ಸಂಧ್ಯಾ ತಿಲಕ್‌ರಾಜ್, ಪೂರ್ಣಿಮಾ, ವಿನೋದ್, ಪ್ರಮೀಳ, ಸುಜಾತ, ಚಿತ್ರಾಕ್ಷಿ ತೊಟ್ಟಂ, ಶ್ರೀಮತಿ ಜಾನಕಿ ನೆರ್ಗಿ ಮುಂತಾದವರು ಭಾಗವಹಿಸಿದ್ದರು. ಸತೀಶ್ ಕಪ್ಪೆಟ್ಟು ಸ್ವಾಗತಿಸಿ, ಗುಣವಂತ ತೊಟ್ಟಂ ವಂದಿಸಿದರು.