ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಿಂದ ಗುಂಡೂರಾವ ಕರಿಗಾರ ಅವರಿಗೆ ಪಿಎಚ್.ಡಿ ಪದವಿ ಘೋಷಣೆ.
ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಧ್ಯಾಪಕರು ಡಾ. ಅನಿತಾ ಕೆ. ಗುಡಿ ಅವರ ಮಾರ್ಗದರ್ಶನದಲ್ಲಿ “ಪಂಪಭಾರತ ಮತ್ತು ಕುಮಾರವ್ಯಾಸ ಭಾರತಗಳ ವಸ್ತು ವಿನ್ಯಾಸ: ತೌಲನಿಕ ಅಧ್ಯಯನ” ಎಂಬ ಮಹಾ ಪ್ರಬಂಧವನ್ನು ಮಂಡಿಸಿರುವ ಗುಂಡುರಾವ ಕರಿಗಾರ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಯನ್ನು ಘೋಷಣೆ ಮಾಡಿದೆ.
ಶ್ರೀ ಗುಂಡುರಾವ ಕರಿಗಾರ ಸಂಶೋಧನಾ ವಿದ್ಯಾರ್ಥಿ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಡಾ.ಅನಿತಾ ಕೆ. ಗುಡಿ ಅವರ ಮಾರ್ಗದರ್ಶನದಲ್ಲಿ “ಪಂಪಭಾರತ ಮತ್ತು ಕುಮಾರವ್ಯಾಸ ಭಾರತಗಳ ವಸ್ತು ವಿನ್ಯಾಸ: ತೌಲನಿಕ ಅಧ್ಯಯನ” ಎಂಬ ವಿಷಯದ ಕುರಿತು ಪಿಎಚ್.ಡಿ ಮಹಾ ಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರು ಮತ್ತು ಕಲಾ ನಿಖಾಯದ ಡೀನರು ಡಾ.ಮೃತ್ಯುಂಜಯ ಅಗಡಿ, ವಿಭಾಗದ ಸಂಯೋಜಕರು ಡಾ.ನಿಂಗಪ್ಪ ಮುದೇನೂರು, ಬಾಹ್ಯ ಮೌಲ್ಯಮಾಪಕರು ಮಂಗಳೂರು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರು ಡಾ. ಸೋಮಣ್ಣ, ಮಾರ್ಗದರ್ಶಕರು ಡಾ.ಅನಿತಾ ಕೆ. ಗುಡಿ, ವಿಭಾಗದ ವಿಶ್ರಾಂತ ಪ್ರಾಧ್ಯಾಪಕರು ಡಾ.ಧನವಂತ ಹಾಜವಗೋಳ, ಪ್ರಾಧ್ಯಾಪಕರು ಡಾ.ಪಿ.ಕೆ.ರಾಠೋಡ, ಡಾ. ಅನಸೂಯ ಕಾಂಬಳೆ, ಡಾ. ಮಲ್ಲಪ್ಪ ಬಂಡಿ, ಡಾ.ವಾಮದೇವಪ್ಪ ತಳವಾರ, ಡಾ.ಬಿ.ಎಸ್.ಭಜಂತ್ರಿ, ವಿಭಾಗದ ಎಲ್ಲ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಅಲಖನೂರ ಗ್ರಾಮದ ತಾಯಿ ಮಾಯವ್ವ, ತಂದೆ ಮಾರುತಿ ಕರಿಗಾರ ದಂಪತಿಗಳ ಮಗನಾದ ಗುಂಡುರಾವ ಕರಿಗಾರ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ಪ್ರದಾನ ಮಾಡಿದ್ದಕ್ಕೆ ತಂದೆ-ತಾಯಿ, ಸಂಬಂಧಿಕರು, ಗುರುಗಳು, ಸ್ನೇಹಿತರು ಹಾಗೂ ಊರಿನ ಗ್ರಾಮಸ್ಥರೆಲ್ಲರೂ ಹರ್ಷ ವ್ಯಕ್ತಪಡಿಸಿದ್ದಾರೆ.
ಸದ್ಯ ಗುಂಡುರಾವ ಕರಿಗಾರ ಅವರು ಕನ್ನಡ ಭಾಷಾ ಶಿಕ್ಷಕರಾಗಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ತಪಸಿ ಗ್ರಾಮ ಗೋಕಾಕ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.