ಮಾದಕ ವ್ಯಸನಗಳಿಂದ ದೂರವಿರುವ ನಿಟ್ಟಿನಲ್ಲಿ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಈ ಮ್ಯಾರಾಥಾನ್ ನಡೆಯುತ್ತಿದ್ದು, ಸ್ವಸ್ಥ ಭಾರತ ನಿರ್ಮಾಣಕ್ಕೆ ಸದೃಢ ಸಮಾಜದ ನಿರ್ಮಾಣಕ್ಕಾಗಿ ನಡೆಯುತ್ತಿರುವ ಈ ಮ್ಯಾರಥಾನ್ನಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಪಟ್ಟಣದ ಶಿವಾನಂದ ವಿದ್ಯಾಪೀಠದಿಂದ ಈ ಬೃಹತ್ ಓಟವು ಆರಂಭವಾಯಿತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ನಾಗನಗೌಡ ಸಾತ್ಮರ, ಯುವ ಮೋರ್ಚಾ ಅಧ್ಯಕ್ಷರಾದ ಚನ್ನಹುಂಬಿ, ಮಾಜಿ ಜಿಲ್ಲಾಧ್ಯಕ್ಷರಾದ ಈರಣ್ಣ ಜಡ್ಡಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಟಿ.ಜಿ.ಬಾಲಣ್ಣವರ್, ನಮೋ ಯುವ ಮ್ಯಾರಥಾನ್ನ ತಾಲ್ಲೂಕು ಸಂಚಾಲಕ ಸಿದ್ದನಗೌಡ ಪಾಟೀಲ್, ಮಾಲತೇಶ್ ಶ್ಯಾಗೋಟಿ ಮತ್ತು ರವಿ ಗೌಡ ಪಾಟೀಲ್, ಸತೀಶ ಪಾಟೀಲ ಭಾಗವಹಿಸಿದ್ದರು.
ಬಿಜೆಪಿ ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಕುಂದಗೋಳ ಪಟ್ಟಣದ ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಮಾದಕ ವಸ್ತುಗಳ ಪಿಡುಗು ಯುವ ಪೀಳಿಗೆಯ ಭವಿಷ್ಯವನ್ನು ಹಾಳು ಮಾಡುತ್ತಿದೆ. ಯುವಕರು ಮತ್ತು ಸಮಾಜವನ್ನು ಈ ದುಶ್ಚಟದಿಂದ ದೂರ ಇರಿಸಲು ಮ್ಯಾರಾಥಾನ್ನಂತಹ ಜಾಗೃತಿ ಕಾರ್ಯಕ್ರಮಗಳು ಬಹಳ ಮುಖ್ಯವಾಗಿವೆ ಎಂದು ಶಾಸಕ ಎಂ.ಆರ್.ಪಾಟೀಲ್ ‘ನಶಾ ಮುಕ್ತ ಭಾರತ’ ಪರಿಕಲ್ಪನೆಯಡಿ ಕುಂದಗೋಳದಲ್ಲಿ ಆಯೋಜಿಸಿದ್ದ ‘ನಮೋ ಯುವ ಓಟ’ ಮ್ಯಾರಥಾನ್ಗೆ ಚಾಲನೆ ನೀಡಿ ಮಾತನಾಡಿದರು.
ಮಾದಕ ವ್ಯಸನಗಳಿಂದ ದೂರವಿರುವ ನಿಟ್ಟಿನಲ್ಲಿ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಈ ಮ್ಯಾರಾಥಾನ್ ನಡೆಯುತ್ತಿದ್ದು, ಸ್ವಸ್ಥ ಭಾರತ ನಿರ್ಮಾಣಕ್ಕೆ ಸದೃಢ ಸಮಾಜದ ನಿರ್ಮಾಣಕ್ಕಾಗಿ ನಡೆಯುತ್ತಿರುವ ಈ ಮ್ಯಾರಥಾನ್ನಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಪಟ್ಟಣದ ಶಿವಾನಂದ ವಿದ್ಯಾಪೀಠದಿಂದ ಈ ಬೃಹತ್ ಓಟವು ಆರಂಭವಾಯಿತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ನಾಗನಗೌಡ ಸಾತ್ಮರ, ಯುವ ಮೋರ್ಚಾ ಅಧ್ಯಕ್ಷರಾದ ಚನ್ನಹುಂಬಿ, ಮಾಜಿ ಜಿಲ್ಲಾಧ್ಯಕ್ಷರಾದ ಈರಣ್ಣ ಜಡ್ಡಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಟಿ.ಜಿ.ಬಾಲಣ್ಣವರ್, ನಮೋ ಯುವ ಮ್ಯಾರಥಾನ್ನ ತಾಲ್ಲೂಕು ಸಂಚಾಲಕ ಸಿದ್ದನಗೌಡ ಪಾಟೀಲ್, ಮಾಲತೇಶ್ ಶ್ಯಾಗೋಟಿ ಮತ್ತು ರವಿ ಗೌಡ ಪಾಟೀಲ್, ಸತೀಶ ಪಾಟೀಲ ಭಾಗವಹಿಸಿದ್ದರು.
ಈ ಸುದ್ಧಿ ಓದಿದ್ದೀರಾ? ಹುಬ್ಬಳ್ಳಿ | ನಶಾಮುಕ್ತ ಭಾರತಕ್ಕಾಗಿ ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿದೆ: ಮಹೇಶ್ ಟೆಂಗಿನಕಾಯಿ