ಮಂಗಳೂರು | ವೆನ್ಲಾಕ್‌ ಆಸ್ಪತ್ರೆಯಲ್ಲಿ ಕರುಣೆಯ ತೊಟ್ಟಿಲು ಉದ್ಘಾಟನೆ

Date:

Advertisements

ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ದೂರದ ಊರುಗಳಿಂದ ಬರುವವರ ಅನುಕೂಲಕ್ಕಾಗಿ ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನಿಂದ ನಿರ್ಮಿಸಿದ ಕರುಣೆಯ ತೊಟ್ಟಿಲು ಕ್ಲೋತ್ ಬ್ಯಾಂಕನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿ, ಶುಭ ಹಾರೈಸಿದರು.

ಎಂ ಫೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಚೈರ್‌ಮ್ಯಾನ್ ಝಕರಿಯಾ ಜೋಕಟ್ಟೆ ಮಾತನಾಡಿ, “ಟ್ರಸ್ಟ್ ಸ್ಥಾಪನೆಯಾಗಿ ಸುಮಾರು 12 ವರ್ಷಗಳಾಗಿದ್ದು, ಎಂಟು ವರ್ಷಗಳಿಂದ ನಿರಂತರ ವೆನ್ಲಾಕ್ ಆಸ್ಪತ್ರೆ ಒಳರೋಗಿಗಳ ಜೊತೆಗಾರರಿಗೆ ರಾತ್ರಿಯ ಊಟ ವಿತರಿಸುತ್ತಿದೆ. ದಾನಿಗಳ ನೆರವು ಮತ್ತು ಟ್ರಸ್ಟಿಗಳ ಸಹಾಯದಿಂದ ನಡೆಯುವ ‘ಕಾರುಣ್ಯ ಯೋಜನೆ’ಯನ್ನು ನವೆಂಬರ್‌ 1ರಿಂದ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಗೂ ವಿಸ್ತರಿಸಲಾಗುತ್ತಿದೆ” ಎಂದರು.

“ಇದೀಗ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊಸ ಕಲ್ಪನೆಯಾಗಿ ಕ್ಲೋತ್ ಬ್ಯಾಂಕ್ ಆರಂಭಿಸಲಾಗಿದೆ. ಸಾರ್ವಜನಿಕರು ಹೊಸದಾಗಿ ಖರೀದಿಸಿದ ಅಥವಾ ಬಳಕೆ ಮಾಡಿದ ಶುಭ್ರ ಬಟ್ಟೆಗಳನ್ನು ಇಲ್ಲಿ ತಂದು ಇಡಬಹುದು. ಇದನ್ನು ಅಗತ್ಯವಿರುವ ರೋಗಿಗಳು ಅಥವಾ ಅವರ ಜತೆಗಾರರು ಕೊಂಡೊಯ್ಯಲಿದ್ದಾರೆ” ಎಂದು ಅವರು ಹೇಳಿದರು.

ಎಂ‌ ಫ್ರೆಂಡ್ಸ್ ಸ್ಥಾಪಕ ರಶೀದ್ ವಿಟ್ಲ ಮಾತನಾಡಿ, “ವೆನ್ಲಾಕ್ ಆಸ್ಪತ್ರೆಯ ಡಿಎಂಒ ಅವರ ಮನವಿ ಮೇರೆಗೆ ಕ್ಲೋತ್ ಬ್ಯಾಂಕ್ ಆರಂಭಿಸಿದ್ದು, ನಮ್ಮ ಟ್ರಸ್ಟಿ ಶರೀಫ್ ವೈಟ್‌ಸ್ಟೋನ್ ಅವರು ಅದರ ಖರ್ಚು ವೆಚ್ಚವನ್ನು ಭರಿಸಿದ್ದಾರೆ. ಜನರು ಉತ್ತಮ ದರ್ಜೆಯ ಬಟ್ಟೆ ತಂದು ಕೊಟ್ಟು ಸಹಕರಿಸಬೇಕು. ಇಲ್ಲಿಯ ಸಿಬ್ಬಂದಿ ಅಗತ್ಯವಿರುವವರಿಗೆ ವಿತರಿಸಲಿಸಲಿದ್ದಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ನವರಾತ್ರಿ ಹಬ್ಬದ ವೇಳೆ ದಲಿತರ ದೇವಾಲಯ ಪ್ರವೇಶ ತಡೆ – ಸ್ಥಳದಲ್ಲೇ ವಾಗ್ವಾದ

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ವೆನ್‌ಲಾಕ್ ಆಸ್ಪತ್ರೆ ಅಧೀಕ್ಷಕ ಡಾ. ಡಿ ಎಸ್ ಶಿವಪ್ರಕಾಶ್, ಆರ್‌ಎಂಒ ಡಾ. ಸುಧಾಕರ್, ಕೆಎಂಸಿ ಆಸ್ಪತ್ರೆ ಡೀನ್ ಡಾ. ಉನ್ನಿಕೃಷ್ಣನ್, ಜಿಪಂ ಮಾಜಿ ಸದಸ್ಯ ಶಾಹುಲ್ ಹಮೀದ್ ಕೆ ಕೆ, ಮಾಜಿ ಕಾರ್ಪೊರೇಟರ್ ಎ ಸಿ ವಿನಯರಾಜ್, ಎಂ ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ, ಟ್ರಸ್ಟಿಗಳಾದ ಮೊಹಮ್ಮದ್ ಹನೀಫ್ ಗೋಳ್ತಮಜಲು, ಅಬೂಬಕರ್ ಕೆ, ಅಬೂಬಕರ್ ಪುತ್ತು, ಅನ್ವರ್ ಹುಸೇನ್, ಇಬ್ರಾಹಿಂ ಮೊಯ್ದಿನಬ್ಬ ನಂದಾವರ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಸಲೀಂ ಮಕ್ಕಾ, ಡಿ ಎಂ ರಶೀದ್ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

Download Eedina App Android / iOS

X