ಚಿಕ್ಕಮಗಳೂರು ಜಿಲ್ಲೆ, ಶೃಂಗೇರಿ ತಾಲೂಕು ಲಾಡ್ಜ್ನಲ್ಲಿ ಮಹಿಳೆ ಜೊತೆ ಮುಸ್ಲಿಂ ವ್ಯಕ್ತಿ ಹಿಂದೂ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿ ರೂಮ್ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಬಾಳೆಹೊನ್ನೂರು ಸಮೀಪದ ಮಾಗುಂಡಿಯ ಅಬ್ದುಲ್ ಸಮದ್ ಎಂಬಾತ, ಶೃಂಗೇರಿ ತಾಲ್ಲೂಕಿನ ಹಿಂದೂ ಮಹಿಳೆಯೊಂದಿಗೆ ಪಟ್ಟಣದ ಲಾಡ್ಜ್ ಒಂದಕ್ಕೆ ತೆರಳಿ, ಗಂಡ-ಹೆಂಡತಿ ಎಂದು ಹೇಳಿ ರೂಮ್ ಪಡೆದ್ದಿದ್ದಾನೆ. ಲಾಡ್ಜ್ ಸಿಬ್ಬಂದಿಗೆ ಅನುಮಾನ ಬಂದು, ಗುರುತಿನ ಚೀಟಿ ಪರಿಶೀಲಿಸಿದಾಗ ಅದು ನಕಲಿ ಎಂಬುದು ಪತ್ತೆಯಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಭಾರತದಲ್ಲಿ ಕಾಫಿ ಉತ್ಪಾದನೆ ಶೇಕಡಾ 70ರಷ್ಟು ದೇಶ ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ
ಅಬ್ದುಲ್ ಸಮದ್ ತನ್ನ ಮೂಲ ಹೆಸರನ್ನು ಬದಲಿಸಿ ರಮೇಶ್ ಎಂಬ ಹೆಸರಿನಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಶೃಂಗೇರಿ ಠಾಣೆಯ ಪೊಲೀಸರು ಅಬ್ದುಲ್ ಸಮದ್ ಹಾಗೂ ಆತನ ಜೊತೆಗಿದ್ದ ಮಹಿಳೆಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.