ಮೈಸೂರು | ಪ್ಯಾಲೆಸ್ತೀನ್ ಜನರೊಂದಿಗೆ ಜಾಗತಿಕ ಐಕ್ಯತೆಯ ಸಪ್ತಾಹ; ಪ್ರತಿಭಟನಾ ಪ್ರದರ್ಶನ

Date:

Advertisements

ವಿಶ್ವ ಕಾರ್ಮಿಕ ಸಂಘಗಳ ಒಕ್ಕೂಟ ನೀಡಿದ ಕರೆಯ ಮೇರೆಗೆ, ಪ್ಯಾಲೆಸ್ತೀನಿಯನ್‌ ಜನರೊಂದಿಗೆ ಜಾಗತಿಕ ಐಕ್ಯತೆಯ ಸಪ್ತಾಹದ ಅಂಗವಾಗಿ ಎಐಯುಟಿಯುಸಿ ಮೈಸೂರು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ಹಮ್ಮಿಕೊಳ್ಳಲಾಯಿತು.

ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಮೇಟಿ ಮಾತನಾಡಿ, “ಗಾಜಾದಲ್ಲಿ ಪ್ಯಾಲೆಸ್ತೀನಿಯನ್‌ ಜನರ ಮೇಲೆ ನಡೆಯುತ್ತಿರುವ ನಿರಂತರ ಜನಾಂಗ‌ ಹತ್ಯೆ, ಇಸ್ರೆಲ್‌ನ ಹತ್ಯಾಕಾಂಡ, ಬಲವಂತದ ಹಸಿವನ್ನು ಯುದ್ಧಾಸ್ತ್ರವಾಗಿ ಬಳಸುವುದು, ಪಶ್ಚಿಮ ತೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ವಿಸ್ತರಿಸುತ್ತಿರುವುದು, ನಾಗರಿಕರ ಹತ್ಯೆಗಳು, ಬಂಧನಗಳು ಮತ್ತು ಪ್ಯಾಲೆಸ್ತೀನಿಯನ್‌ ಜನರನ್ನು ಅವರ ಐತಿಹಾಸಿಕ ಭೂಮಿಯಿಂದ ಬಲವಂತವಾಗಿ ಬೇರ್ಪಡಿಸುವ ಕ್ರಿಯೆಗಳು ಮಾನವ ಹಕ್ಕುಗಳ ವಿರುದ್ಧವಾಗಿವೆ. ಜಗತ್ತಿನಾದ್ಯಂತ ಸಾರ್ವಜನಿಕ ಅಭಿಪ್ರಾಯದಲ್ಲಿ ಅಸಹ್ಯ ಉಂಟುಮಾಡುತ್ತಿವೆ” ಎಂದು ಹೇಳಿದರು.

“ಅಮೇರಿಕಾ ಸಾಮ್ರಾಜ್ಯವಾದದ ಬೆಂಬಲದಿಂದ ಇಸ್ರೆಲ್‌ ಗಾಜಾ ಪ್ರದೇಶವನ್ನು ಸಂಪೂರ್ಣವಾಗಿ ಆಕ್ರಮಿಸುವ ತನ್ನ ಘೋಷಿತ ಉದ್ದೇಶದತ್ತ ಮುಂದುವರಿಯುತ್ತಿದೆ. ಅಂತಾರಾಷ್ಟ್ರೀಯ ಕಾನೂನು ಮತ್ತು ಮಾನದಂಡಗಳನ್ನು ಲೆಕ್ಕಿಸದೇ ಕಳೆದ ಎರಡು ವರ್ಷಗಳಲ್ಲಿ ಲಕ್ಷಾಂತರ ಪ್ಯಾಲೆಸ್ತೀನಿಯನ್ನರನ್ನು ಹತ್ಯೆ ಮಾಡಲಾಗಿದೆ. ಹತ್ಯೆಯಾದವರಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ಹೆಚ್ಚು. ಇವು ಮಾನವೀಯತೆಯ ವಿರೋಧಿ ಕಾರ್ಯಗಳಾಗಿವೆ” ಎಂದು ಖಂಡಿಸಿದರು.

ಎಐಯುಟಿಯುಸಿಯ ರಾಜ್ಯ ಉಪಾಧ್ಯಕ್ಷೆ ಎಂ. ಉಮಾದೇವಿ ಮಾತನಾಡಿ‌ “ವಿಶ್ವ ಕಾರ್ಮಿಕ ಸಂಘಟನೆಗಳ ಒಕ್ಕೂಟ ವಿಶ್ವದಾದ್ಯಂತ ಇರುವ ಕಾರ್ಮಿಕ ಸಂಘಟನೆಗಳ ಒಕ್ಕೂಟವಾಗಿದೆ. ಬಂಡವಾಳಶಾಹಿ ‌ಶೋಷಣೆಯ ವಿರುದ್ದ ಶ್ರಮಿಕ ವರ್ಗವನ್ನು ಸಂಘಟಿಸುವ, ದಬ್ಬಾಳಿಕೆಯ ವಿರುದ್ಧ ದನಿ ಎತ್ತುವ ಕೆಲಸವನ್ನು ಮಾಡುತ್ತಿದೆ. ಇಸ್ರೇಲಿ ಪಡೆಗಳು ಗಾಜಾವನ್ನು ಆಕ್ರಮಿಸಲು ಹೊಸ ಸೈನಿಕ ದಾಳಿಯನ್ನು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ 2025ರ ಸೆಪ್ಟೆಂಬರ್‌ 15 ರಿಂದ 22 ರ ವರೆಗೆ ಪ್ಯಾಲೆಸ್ತೀನಿಯನ್‌ ಜನರೊಂದಿಗೆ ಜಾಗತಿಕ ಐಕ್ಯತೆಯ ಸಪ್ತಾಹವನ್ನು ಆಚರಿಸಬೇಕೆಂದು ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಸಂಘಟಿಸಲಾಗಿದೆ” ಎಂದರು.

ಈ ವಿಶೇಷ ಸುದ್ದಿ ಓದಿದ್ದೀರಾ? ಜಾನಪದ ತವರೂರು ಚಾಮರಾಜನಗರದಲ್ಲಿಲ್ಲ ಈ ಬಾರಿಯ ದಸರಾ; ಕಲಾವಿದರ ಮರೆತ ಸರ್ಕಾರ

ಪ್ರತಿಭಟನೆಯಲ್ಲಿ ಎಐಯುಟಿಯುಸಿಯ ಜಿಲ್ಲಾ ಅಧ್ಯಕ್ಷೆ ವಿ.ಯಶೋಧರ, ಜಿಲ್ಲಾ ಸಮಿತಿಯ ಸದಸ್ಯರಾದ ಸಂಧ್ಯಾ ಪಿ.ಎಸ್, ಹರೀಶ್ ಎಸ್.ಎಚ್, ಮುದ್ದುಕೃಷ್ಣ ಸೇರಿದಂತೆ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

Download Eedina App Android / iOS

X