ವೃದ್ಧ ದಂಪತಿಯಿಂದ ಆಸ್ತಿ ಬರೆಸಿಕೊಂಡು ಮಗ ಹೊರಗಡೆ ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕಿನ ಕಾರೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ವೃದ್ಧ ದಂಪತಿ ಹೆಸರು ದಾಕ್ಷಾಯಿಣಿ ಹಾಗೂ ಮಲ್ಲೇಶಪ್ಪ, ಮದುವೆಯಾಗಿ 12 ವರ್ಷದ ಬಳಿಕ ಗಂಡು ಮಗ ಜನಿಸಿದ ಎಂಬ ಸಂತಸದಿಂದ ಸಂತೋಷ್ ಎನ್ನುವ ಹೆಸರಿಟ್ಟು ಪ್ರೀತಿಯಿಂದ ಸಾಕಿ ಸಲಹಿ ಕಷ್ಟ ಪಟ್ಟು ಇಂಜಿನಿಯರಿಂಗ್ ಓದಿಸಿದ್ದರು, ಆ ಮಗನೇ ಈಗ ಪೋಷಕರಿಗೆ ನರಕಾಯಾತನೇ ತೋರಿಸುತ್ತಿದ್ದಾನೆ. ಪೋಷಕರ ಹೆಸರಿನಲ್ಲಿದ್ದ 10 ಎಕರೆ ಜಮೀನು ಸಂತೋಷ್ ತನ್ನ ಹೆಸರಿಗೆ ಮಾಡಿಕೊಂಡು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಇದ್ದರೇ, ಇನ್ನೊಂದು ಕಡೆ ಪೋಷಕರು ಕಣ್ಣೀರಿಡುತ್ತಿದ್ದಾರೆ. ಮಗನಿಂದ ಮೋಸ ಆಗಿದೆ ಎಂದು ಕಡೂರು ಠಾಣೆಗೆ ಪೋಷಕರು ದೂರು ನೀಡಿದ್ದಕ್ಕೆ, ಮಗನಾದ ಸಂತೋಷ್ ಬೆಂಗಳೂರಿನಿಂದ ಬಂದು ಹಲ್ಲೆ ಮಾಡಿದ ಪ್ರಕರಣಕ್ಕೆ
ಇದನ್ನು ಓದಿದ್ದೀರಾ?ಚಿಕ್ಕಮಗಳೂರು l ಬಾನು ಮುಷ್ತಾಕ್ : ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ;ಎಂ.ಪಿ ಕುಮಾರಸ್ವಾಮಿ
ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಪೋಷಕರಿಗೆ ಪ್ರತಿ ತಿಂಗಳು 10 ಸಾವಿರ ಜೀವನಾಂಶವಾಗಿ ನೀಡಬೇಕೆಂದು ಆದೇಶ ಹೋರಡಿಸಿತ್ತು. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ ಸಂತೋಷ್, ಜೀವನಾಂಶದ ಮೊತ್ತವನ್ನು 5 ಸಾವಿರಕ್ಕೆ ಇಳಿಸಿದಾನಂತೆ. ಅಲ್ಲದೇ ಇದ್ದ ಮನೆಯೂ ಕುಸಿದು ಬಿದ್ದಿದ್ದು ಇದೀಗ ವಾಸ ಮಾಡಲು ನೆಲೆ ಇಲ್ಲದಂತಾಗಿದೆ. ಮಲ್ಲೇಶಪ್ಪ ಅವರಿಗೆ ಎರಡು ಕಿವಿ ಕೇಳಿಸದೇ ಇರುವುದರಿಂದ ದಾಕ್ಷಾಯಿಣಿಯವರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಊರಿನವರು ವೃದ್ಧ ದಂಪತಿಯ ಸಹಾಯಕ್ಕೆ ಹೋದರೆ ಅವರಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಾನೆಂದು ಪೋಷಕರು ತಿಳಿಸಿದರು. ಮಕ್ಕಳಿಲ್ಲದೆ ಪರದಾಡಿ ಮಕ್ಕಳು ಪಡೆದ ಪೋಷಕರಿಗೆ ಇಂತಹ ಅನ್ಯಾಯ ಆಗಬಾರದು. ಹಾಗೆಯೇ, ಮೊಮ್ಮಕ್ಕಳ ಜೊತೆ ಕಾಲ ಕಳೆಯಬೇಕಿದ್ದ ಪೋಷಕರು ನ್ಯಾಯಕ್ಕಾಗಿ ಅಲೆಯುವಂತಹ ಪರಿಸ್ಥಿತಿ ಎದುರಾಗಿದೆ