ಉತ್ತರ ಕನ್ನಡದ ಮುಂಗಾರು ವರದಿ: ಕೋಟ್ಯಂತರ ಮೌಲ್ಯದ ಸಾರ್ವಜನಿಕ ಆಸ್ತಿಗೆ ಹಾನಿ!

Date:

Advertisements

ಈ ವರ್ಷ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ ಸುರಿದರೂ, ಸಾರ್ವಜನಿಕ ಆಸ್ತಿಪಾಸ್ತಿಯ ಹಾನಿ ಹಿಂದಿನ ವರ್ಷಗಳಿಗಿಂತ ತೀರಾ ಕಡಿಮೆಯಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಭೂಕುಸಿತ ಹಾಗೂ ಭೀಕರ ಪ್ರವಾಹದ ಅಪಾಯದಿಂದ ಜಿಲ್ಲೆ ಬಹುತೇಕ ಪಾರಾದರೆ, ಹೊನ್ನಾವರ ತಾಲೂಕಿನ ಕೆಲವೆಡೆ ಮಾತ್ರ ಪ್ರವಾಹದಿಂದ ಸಣ್ಣ ಪ್ರಮಾಣದ ತೊಂದರೆ ಉಂಟಾಗಿದೆ.

ಶಾಲಾ ಕಟ್ಟಡಗಳಿಗೆ ಹಾನಿ: ಜಿಲ್ಲೆಯಲ್ಲಿ 226 ಶಾಲಾ ಕಟ್ಟಡಗಳು ಹಾನಿಗೊಳಗಾಗಿದ್ದು, ಅವುಗಳ ಮರುನಿರ್ಮಾಣಕ್ಕಾಗಿ 38 ಕೋಟಿ ರೂಪಾಯಿಗಳ ಅನುದಾನ ಅಗತ್ಯವಿದೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಜೊತೆಗೆ 65 ಅಂಗನವಾಡಿ ಕಟ್ಟಡಗಳು ಸಹ ಹಾನಿಗೊಳಗಿವೆ.

ಜೂನ್‌ನಿಂದ ಆಗಸ್ಟ್ ವರೆಗೆ 850 ಕಿ.ಮೀ ಉದ್ದದ ವಿವಿಧ ರಸ್ತೆಗಳು ಹಾನಿಗೊಳಗಾಗಿವೆ. ರಾಜ್ಯ ಹೆದ್ದಾರಿ – 175.43 ಕಿ.ಮೀ, ಜಿಲ್ಲೆಯ ಒಳರಸ್ತೆಗಳು – 412.43 ಕಿ.ಮೀ, ಗ್ರಾಮೀಣ ರಸ್ತೆ – 320.88 ಕಿ.ಮೀ… ಇವುಗಳಲ್ಲಿ ಬಹುತೇಕ ಹಾನಿಗೊಂಡಿದ್ದು, ಮರುನಿರ್ಮಾಣಕ್ಕೆ ಕೋಟ್ಯಂತರ ಹಣ ಅಗತ್ಯವಾಗಿದೆ. ಜೊತೆಗೆ 44 ಸೇತುವೆ ಮತ್ತು ಕಲ್ಲರ್ಟ್‌ಗಳು ಸಹ ಹಾನಿಗೊಳಗಿವೆ.

ಕೃಷಿಗೆ ಕ್ಷೇತ್ರಕ್ಕೆ ತೀವ್ರ ಹಾನಿ: ಅತಿಯಾದ ಮಳೆಯಿಂದಾಗಿ ಗೋವಿನ ಜೋಳ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಂಡಿದೆ. ಭತ್ತದ ಬೆಳೆಗೆ ವ್ಯಾಪಕ ಹಾನಿ ಆಗದಿದ್ದರೂ, ಅನೇಕ ಗದ್ದೆಗಳಲ್ಲಿ ನೀರು ನಿಂತು ನಷ್ಟ ಉಂಟಾಗಿದೆ. ಕೃಷಿ ಇಲಾಖೆಯ ಪ್ರಾಥಮಿಕ ವರದಿ ಪ್ರಕಾರ 251.6 ಹೆಕ್ಟೇರ್ ಬೆಳೆ ಹಾನಿಗೊಳಗಾಗಿದೆ.

ಹಿಂದಿನ ವರ್ಷಗಳ ಹೋಲಿಸಿದರೆ, 2021ರಲ್ಲಿ – 600 ಕೋಟಿ, 2024ರಲ್ಲಿ – 200 ಕೋಟಿ, 2025ರಲ್ಲಿ (ಇಲ್ಲಿಯವರೆಗೆ) – 27.66 ಕೋಟಿ ರೂ ಮೌಲ್ಯದ ಬೆಳೆಗಳು ಹಾನಿಗೊಳಗಾಗಿ ರೈತರು ನಷ್ಟ ಅನುಭವಿಸುವಂತಾಗಿದೆ.

ತೀವ್ರ ಹಾನಿಗೊಳಗಾದ ನೂರಾರು ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿ-ಪಾಸ್ತಿ: ಜಿಲ್ಲೆಯಾದ್ಯಂತ ಒಟ್ಟು 226 ಶಾಲಾ ಕಟ್ಟಡಗಳು ಭಾರೀ ಮಳೆಯಿಂದ ಹಾನಿಯಾಗೊಳಗಾಗಿದ್ದು, ಅವುಗಳ ದುರಸ್ತಿ ಹಾಗೂ ಮರು ನಿರ್ಮಾಣಕ್ಕೆ ಒಟ್ಟು 5.22 ಕೋಟಿ ಅನುದಾನ ಅಗತ್ಯವಿದೆ. 65 ಅಂಗನವಾಡಿ ಕಟ್ಟಡಗಳಿಗೆ ಭಾಗಶಃ, ಅಲ್ಪ ಪ್ರಮಾಣದ ಹಾನಿಯಾಗಿದ್ದು, ಅದಕ್ಕಾಗಿ ಸುಮಾರು 1.32 ಕೋಟಿ ಅನುದಾನ ಬೇಕಾಗಿದೆ. ಇನ್ನು 175.43 ಕಿ.ಮೀ ರಾಜ್ಯ ಹೆದ್ದಾರಿ, 412.43 ಕಿ.ಮೀ ಜಿಲ್ಲಾ ರಸ್ತೆ, 320.88 ಕಿ.ಮೀ ಗ್ರಾಮೀಣ ರಸ್ತೆ ತೀವ್ರ ಹಾನಿಗೊಳಗಾಗಿವೆ. ರಸ್ತೆ ದುರಸ್ತಿ ಹಾಗೂ ಮರುನಿರ್ಮಾಣಕ್ಕೆ ಒಟ್ಟು 13.42 ಕೋಟಿ ಅನುದಾನ ಬೇಕಾಗಿದೆ. 44 ಸೇತುವೆ/ಕಲ್ಲರ್ಟ್ಗೆ ಹಾನಿಯಾಗಿದ್ದು, 2.52 ಕೋಟಿ, 3,965 ಹೆಸ್ಕಾಂ ಕಂಬಗಳು ಮುರಿದುಬಿದ್ದಿದ್ದು ಅದಕ್ಕಾಗಿ 2.15 ಕೋಟಿ ಹಾಗೂ 141 ಪರಿವರ್ತಕಗಳ ದುರಸ್ತಿಗೆ ಅನುದಾನದ ಅಗತ್ಯವಿದೆ ಎಂದು ವರದಿ ಹೇಳುತ್ತಿದೆ.

ಇದನ್ನೂ ಓದಿ: ಉತ್ತರ ಕನ್ನಡ | ಭಾರತ-ಪಾಕ್‌ ಪಂದ್ಯದ ವೇಳೆ ‘ಶರಾವತಿ ಉಳಿಸಿ’ ಪೋಸ್ಟರ್: ಹೋರಾಟಕ್ಕೆ ಮತ್ತಷ್ಟು ಬಲ

ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, “ಈಗಾಗಲೇ ಜಿಲ್ಲಾಡಳಿತವು ಮಳೆಯಿಂದ ಹಾನಿಗೊಂಡ ಮನೆಗಳಿಗೆ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ವಿತರಿಸಿದೆ. ಸರ್ಕಾರಿ ಕಟ್ಟಡಗಳು ಹಾಗೂ ಮೂಲಸೌಕರ್ಯಗಳ ಹಾನಿಯ ಸಂಪೂರ್ಣ ವರದಿ ಸರ್ಕಾರಕ್ಕೆ ಕಳುಹಿಸಲಾಗುವುದು. ಜಿಲ್ಲೆಯಲ್ಲಿ ಹಾನಿಗೊಳಗಾಗಿರುವ ಎಲ್ಲಾ ಮೂಲಸೌಕರ್ಯಗಳ ದುರಸ್ತಿ ಹಾಗೂ ಮರುನಿರ್ಮಾಣಕ್ಕೆ ಅನುದಾನ ಪಡೆದು ಕೂಡಲೇ ಕ್ರಮಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

WhatsApp Image 2025 09 23 at 4.45.29 PM

ಹಿಂದಿನ ವರ್ಷಗಳಿಗಿಂತ ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕೊಂಚ ಮಟ್ಟಿಗೆ ಹಾನಿ ಪ್ರಮಾಣ ಕಡಿಮೆಯಾಗಿದೆ ಎನ್ನುತ್ತಿವೆ ವರದಿಗಳು. ಆದರೂ ನೂರಾರು ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿ, ಕೃಷಿ ಕ್ಷೇತ್ರ ತೀವ್ರ ನಷ್ಟಕ್ಕೆ ಒಳಗಾಗಿದೆ. ಅವುಗಳ ಮರುನಿರ್ಮಾಣಕ್ಕೆ ತುರ್ತು ಅನುದಾನ ಅಗತ್ಯವಿದ್ದು, ರೈತರ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸುವುದು ಸರ್ಕಾರದ ಮುಂದಿರುವ ಮುಖ್ಯ ಸವಾಲಾಗಿದೆ.
ಒಟ್ಟಾರೆಯಾಗಿ, ಜಿಲ್ಲೆ ಭೂಕುಸಿತ ಮತ್ತು ಭೀಕರ ಪ್ರವಾಹದ ಆತಂಕದಿಂದ ಪಾರಾದರೂ, ಮುಂಗಾರು ಮಳೆ ತನ್ನ ಪ್ರಭಾವವನ್ನು ತುಸು ಹೆಚ್ಚಾಗೇ ತೋರಿಸಿದೆ. ಈ ಬಾರಿ ಹಾನಿ ಕಡಿಮೆಯಾಗಿದೆಯೆಂದು ಸುಮ್ಮನೆ ಕೂರದೇ ಮುಂದಿನ ವರ್ಷಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ.

987638ca8c89079659d0147ec8165bb4e02be67aff4a7af8f502ae66e86a5a1e?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

ಶಿವಮೊಗ್ಗ | ಪಾಲಿಕೆಗೆ 19 ಗ್ರಾಮಗಳ ಸೇರ್ಪಡೆಗೆ ಸಿದ್ಧತೆ

ಶಿವಮೊಗ್ಗ, ನಿರೀಕ್ಷೆಯಂತೆಯೇ ತುಮಕೂರು ಮತ್ತು ಶಿವಮೊಗ್ಗ ನಗರ ಪಾಲಿಕೆಗಳ ವ್ಯಾಪ್ತಿ ವಿಸ್ತರಣೆಗೆ...

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

Download Eedina App Android / iOS

X