ಜಾತಿ ದೌರ್ಜನ್ಯ | ದೇವಾಲಯ ಪ್ರವೇಶಕ್ಕೆ ಯತ್ನಿಸಿದ ದಲಿತರ ಮೇಲೆ ಹಲ್ಲೆ

Date:

Advertisements

ದೇವಾಲಯ ಪ್ರವೇಶಕ್ಕೆ ಮುಂದಾದ ದಲಿತರ ಮೇಲೆ ದುಷ್ಕರ್ಮಿಗಳ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿರುವ ಜಾತಿ ದೌರ್ಜನ್ಯದ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಸದಾಸರ್ ಗ್ರಾಮದಲ್ಲಿ ಧಾರ್ಮಿಕ ಮೆರವಣಿಗೆ ನಡೆಸಲಾಗುತ್ತಿತ್ತು. ಈ ವೇಳೆ, ಗ್ರಾಮದ ದಲಿತ ಸಮುದಾಯದ ಕೆಲವರು ತಮಗೂ ಧಾರ್ಮಿಕ ಸ್ವಾತಂತ್ರ್ಯವಿದೆ. ದೇವಸ್ಥಾನ ಪ್ರವೇಶಿಸಲು ನಮಗೂ ಹಕ್ಕು ಇದೆ ಎಂದು ದೇವಾಲಯ ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ, ಅವರನ್ನು ತಡೆದ ಪ್ರಬಲ ಜಾತಿಯ ದುರುಳರ ಗುಂಪೊಂದು ದಲಿತರ ಮೇಲೆ ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮದ ದಲಿತರು ಸ್ಥಳೀಯ ಪೊಲೀಸ್‌ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಹಲ್ಲೆಗೊಳಗಾದ ದಲಿತ ಸಮುದಾಯದ ಕಾನಾರಾಮ್ ಮೇಘ್ವಾಲ್ ಅವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ನಾಲ್ವರು ಆರೋಪಿಗಳ ವಿರುದ್ಧಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಕೆ.ಆರ್.ಪೇಟೆ | ರಾತ್ರೋರಾತ್ರಿ ಗಣಪತಿ ಇಟ್ಟು ವಿವಾದ ಸೃಷ್ಟಿಸಲು ಯತ್ನ?

“ಗ್ರಾಮದಲ್ಲಿ ಶೋಭಾ ಯಾತ್ರೆ ನಡೆಯುತ್ತಿತ್ತು. ಆ ಸಮಯದಲ್ಲಿ, ದೇವರ ದರ್ಶನ ಪಡೆಯಲು ದಲಿತ ಸಮುದಾಯದ ಮುಖಂಡರು ದೇವಾಲಯ ಪ್ರವೇಶಿಸಲು ಮುಂದಾಗಿದ್ದೆವು. ಈ ವೇಳೆ, ಗ್ರಾಮದ ಪ್ರಬಲ ಜಾತಿಯ ಸೂರ್ದಾಸ್ ಸ್ವಾಮಿ, ಶಂಕರ್ ಲಾಲ್, ಹಿಮ್ಮತ್ ಕುಮಾರ್ ಹಾಗೂ ಅನಿಲ್ ಸೇರಿದಂತೆ ಕೆಲವರು ನಮ್ಮನ್ನು ತಡೆದು, ಹಲ್ಲೆ ನಡೆಸಿದ್ದಾರೆ” ಎಂದು ಮೇಘ್ವಾಲ್ ಆರೋಪಿಸಿದ್ದಾರೆ.

ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸ್‌ ತಂಡಗಳು ಶೋಧ ನಡೆಸುತ್ತಿವೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸತ್ಯನಾರಾಯಣ್ ಗೊದಾರ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

ಕರೂರ್ ದುರಂತ: 41 ಜನರ ಸಾವಿನ ನಂತರ ಟಿವಿಕೆ ರ‍್ಯಾಲಿ ತಾತ್ಕಾಲಿಕ ಸ್ಥಗಿತ

ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ನಾಯಕ ವಿಜಯ್ ಅವರು ಬುಧವಾರ ತಮ್ಮ...

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶೇ. 3 ರಷ್ಟು ತುಟ್ಟಿಭತ್ಯೆ ಹೆಚ್ಚಳ; ಸಚಿವ ಸಂಪುಟ ಅನುಮೋದನೆ

ಕೇಂದ್ರ ಸಂಪುಟ ಬುಧವಾರ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು...

ಭಾರತದ ಅಗ್ರ ಕೋಟ್ಯಾಧಿಪತಿಗಳಲ್ಲಿ ಮಹಿಳೆಗೆ ಸ್ಥಾನ; ಅತೀ ಶ್ರೀಮಂತ ಮಹಿಳೆ ರೋಶ್ನಿ ಮಲ್ಹೋತ್ರಾ!

ಭಾರತದ ಬಿಲಿಯನೇರ್‌ಗಳ ಇತಿಹಾಸದಲ್ಲಿ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದೆ. ಇದೇ ಮೊದಲ ಬಾರಿಗೆ...

Download Eedina App Android / iOS

X