“ಯುವಜನರು ದೇಶದ ಭವಿಷ್ಯ, ನವ ಸಮಾಜವನ್ನು ಕಟ್ಟುವವರು. ಶಕ್ತಿಯುಳ್ಳ ಉತ್ಸಾಹಪೂರ್ಣ ಹಾಗೂ ಹೊಸ ಚಿಂತನೆಗಳನ್ನು ಹೊಂದಿರುವ ಸಮೂಹವಾಗಿದ್ದು, ಪರಿಸರ ಸಂರಕ್ಷಣೆಯ ಮಹತ್ವದ ಕಾರ್ಯದಲ್ಲಿ ಅವರ ಪಾತ್ರ ಬಹಳ ಮುಖ್ಯ” ಎಂದು ನಿರ್ದೇಶಕರು ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕರು ಫಾದರ್ ವಿನೇಂಟ್ ಜೇಸನ್ ಪ್ರಾಸ್ತಾವಿಕ ಮಾತನಾಡಿರು.
ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದ ಲೊಯೋಲ ವಿಕಾಸ ಕೇಂದ್ರದ ವತಿಯಿಂದ ಯುವಜನರಿಗೆ ಒಂದು ದಿನದ ಪ್ರವಾಸ ಅಧ್ಯಯನವನ್ನು ಮಲೆನಾಡು ಪ್ರದೇಶವಾದ ಯಾಣದ ಕಡೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ” ಪರಿಸರ ಸಂರಕ್ಷಣೆ ಅಂದರೆ ಬರಿ ಒಂದು ದಿನದ ಕಾರ್ಯಕ್ರಮ ಅಲ್ಲ. ಅದು ನಾವು ಭೂಮಿಯ ಮೇಲೆ ಇರುವವರೆಗೂ ಹಲವಾರು ರೀತಿಯ ಮಾಲಿನ್ಯಗಳಿಂದ ಪರಿಸರವನ್ನು ಸಂರಕ್ಷಣೆ ಮಾಡುವುದಾಗಿದೆ. ನಮ್ಮ ದಿನ ನಿತ್ಯದ ಪ್ರತಿಯೊಂದು ಚಟುವಟಿಕೆಗಳು ಪರಿಸರ ಸ್ನೇಹಿಯಾಗಿರಬೇಕು. ಪರಿಸರವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವುದು ನಮ್ಮೇಲ್ಲರ ಕರ್ತವ್ಯವಾಗಿದೆ” ಎಂದು ತಿಳಿಸಿದರು.
ಯಾಣದ ಕಡೆ ಯುವಜನರಿಗೆ ಪವಾಸ ಅಧ್ಯಯನವನ್ನು ಕೈಗೊಂಡು ಅಲ್ಲಿನ ಮರಗಿಡಗಳು, ದಟ್ಟವಾದ ಅರಣ್ಯ, ಕಾಡುಗಳ ಮದ್ಯ ಪಶಾಂತವಾಗಿ ಹರಿಯುವ ನೀರಿನ ಮೂಲಗಳು, ಮಣ್ಣಿನ ವಿಧಗಳ ಬಗ್ಗೆ ಯುವಜನರು ಅರಿತುಕೊಂಡರು. ಪ್ರವಾಸ ಅಧ್ಯಯನದಲ್ಲಿ ಒಟ್ಟು 60 ಯುವಜನರು ಭಾಗವಹಿಸಿದರು.