ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಅಪಘಾತಗಳು ಹೆಚ್ಚಾಗುತ್ತಿರುವ ಕಾರಣ ಕಡ್ಡಾಯವಾಗಿ ಚಾಲಕರು ಬಸ್ ಚಾಲನೆ ವೇಳೆ ಮೊಬೈಲ್ ಬಳಸದಂತೆ ಸೂಚನೆ ನೀಡಲಾಗಿದೆ.
ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸಾರಿಗೆ ವಾಹನಗಳ ಚಾಲಕರ ಮೊಬೈಲ್ ಗೀಳು ಸಾಕಷ್ಟು ಅನಾಹುತಕ್ಕೆ ಕಾರಣವಾಗಿದೆ. ಹೀಗಾಗಿ ಎಚ್ಚೆತ್ತಿರೋ ಬಿಎಂಟಿಸಿ ಸಂಸ್ಥೆಯ ಚಾಲಕರಿಗೆ ಖಡಕ್ ಎಚ್ಚರಿಕೆ ರವಾನಿಸಿದೆ.
ಫೋನ್‌ನಲ್ಲಿ ಮಾತಾಡುವುದು, ಹೆಡ್ ಫೋನ್ ಬಳಕೆ ಅಥವಾ ಚಾಟಿಂಗ್ ಮಾಡಿದ್ರೆ ಸಸ್ಪೆಂಡ್ ಅಥವಾ ವರ್ಗಾವಣೆ ಜೊತೆಗೆ ಸಂಬಳದಲ್ಲಿಯೂ ಕಡಿತಗೊಳಿಸುವ ಶಿಕ್ಷೆ ನೀಡಲು ತೀರ್ಮಾನಿಸಲಾಗಿದೆ.
ಚಾಲನೆ ವೇಳೆ ಮೊಬೈಲ್ ಬಳಸುವುದು ಮೊದಲ ಸಲ ಕಂಡು ಬಂದರೆ 15 ದಿನಗಳ ಅಮಾನತ್ತು. ಅಮಾನತ್ತು ತೆರವು ನಂತರ ಬೇರೆ ಘಟಕಕ್ಕೆ ವರ್ಗಾವಣೆ. ವೇತನದಿಂದ ₹5000 ಕಡಿತ.
ಹಾಗೆಯೇ ಎರಡನೇ ಬಾರಿ ಕಂಡು ಬಂದರೆ 15 ದಿನಗಳ ಅಮಾನತ್ತು. ವರ್ಗಾವಣೆ. ವಾರ್ಷಿಕ ಬಡ್ತಿ 1 ವರ್ಷಕ್ಕೆ ತಡೆ ಅಥವಾ ₹5000 ಕಡಿತ.
ಮೂರನೇ ಬಾರಿ: 15 ದಿನಗಳ ಅಮಾನತ್ತು. ಶಿಸ್ತು ಕ್ರಮ, ವರ್ಗಾವಣೆ,ವಾರ್ಷಿಕ ಬಡ್ತಿ 2 ವರ್ಷಕ್ಕೆ ತಡೆ ಅಥವಾ ₹10,000 ಕಡಿತ
ನಾಲ್ಕನೇ ಬಾರಿ: 15 ದಿನಗಳ ಅಮಾನತ್ತು, ಶಿಸ್ತು ಕ್ರಮ, ವರ್ಗಾವಣೆ, ಶಾಶ್ವತ ಬಡ್ತಿ ಇಳಿಕೆ / 2 ವರ್ಷ ತಡೆ ಅಥವಾ ₹20,000 ಕಡಿತ
ಐದನೇ ಬಾರಿ: 15 ದಿನಗಳ ಅಮಾನತ್ತು, ಶಿಸ್ತು ಕ್ರಮ, ವರ್ಗಾವಣೆ, ವಾರ್ಷಿಕ ಬಡ್ತಿಗೆ ಶಾಶ್ವತ ತಡೆ ಅಥವಾ ₹25,000 ಕಡಿತ.
