ʼಅಡ್ಡಗೋಡೆ ಮೇಲೆ ದೀಪ ಇಟ್ಟರೆ ಏನೂ ಪ್ರಯೋಜನವಿಲ್ಲ’: ಕೃಷಿ ಇಲಾಖೆಗೆ ಕೃಷ್ಣ ಬೈರೇಗೌಡರ ಖಡಕ್ ಕ್ಲಾಸ್

Date:

Advertisements

ಕೇವಲ ಲೆಕ್ಕಾಚಾರಗಳು ಮತ್ತು ಅಂಕಿ-ಅಂಶಗಳ ವರದಿ ಮಂಡಿಸಿದ ಅಧಿಕಾರಿಯ ವಿರುದ್ಧ, ‘ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ’ ವರದಿ ಕೊಟ್ಟರೆ ಯಾವುದೇ ಪ್ರಯೋಜನವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಗುಡುಗಿದರು.

ಹಾಸನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೃಷಿ ಇಲಾಖೆಯ ಅಧಿಕಾರಿಯೊಬ್ಬರಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದು, ಅವರ ಆಳವಾದ ಕೃಷಿ ಜ್ಞಾನ ಮತ್ತು ಕಾರ್ಯಕ್ಷಮತೆಯ ಮೇಲಿನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತಾಗಿದೆ. ಅಲ್ಲದೆ ಅವರ ಈ ನೇರ ಮತ್ತು ಆಕ್ರಮಣಕಾರಿ ಶೈಲಿಯು ಸಭೆಯಲ್ಲಿ ಗಮನ ಸೆಳೆಯಿತು.

ಬಿಳಿಸುಳಿ ರೋಗದ ನಿಜವಾದ ಸವಾಲು:

5655 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದುನಿಂತಿದೆ. ಆದರೆ ಬಿಳಿಸುಳಿ ರೋಗ(white whorl disease) ರೈತರ ಬದುಕನ್ನೇ ಬೆಂಕಿ ಹಚ್ಚಿದಂತೆ ಹರಡುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು, ಕೃಷಿ ಅಧಿಕಾರಿ ಕೇವಲ ರೋಗ ಹರಡಿರುವ ವಿಸ್ತೀರ್ಣದ ಬಗ್ಗೆ ಮಾಹಿತಿ ನೀಡಿ ಕೈತೊಳೆದುಕೊಂಡರು. ಇದಕ್ಕೆ ಸಚಿವ ಬೈರೇಗೌಡರ ಪ್ರತಿಕ್ರಿಯೆ ತೀಕ್ಷ್ಣವಾಗಿತ್ತು.

“ಇಷ್ಟು ಕೃಷಿ ವಿಶ್ವವಿದ್ಯಾಲಯಗಳು, ತಂತ್ರಜ್ಞಾನಗಳು ಇವೆ. ಆದರೂ ಬಿಳಿಸುಳಿ ರೋಗಕ್ಕೆ ನಿಖರ ಕಾರಣ ತಿಳಿದಿಲ್ಲವೆಂದರೆ ಏನು ಪ್ರಯೋಜನ?” ಎಂದು ಅವರು ನೇರವಾಗಿ ಪ್ರಶ್ನಿಸಿದರು. ಇದು ಕೃಷಿ ಕ್ಷೇತ್ರದ ಮೂಲಭೂತ ಸಮಸ್ಯೆಗಳ ಬಗ್ಗೆ ಅವರ ಸ್ಪಷ್ಟ ಕಲ್ಪನೆಯನ್ನು ತೋರಿಸುತ್ತದೆ.

ʼಬ್ಯಾನರ್ ಪ್ರಚಾರ ಬೇಡ, ಪ್ರಾಕ್ಟಿಕಲ್ ಆಗಿ ಕೆಲಸ ಮಾಡಿʼ

ಕೃಷಿ ಅಧಿಕಾರಿಗಳು ಕೇವಲ ನಗರದಲ್ಲಿ ಕುಳಿತು, ಬ್ಯಾನರ್‌ ಹಿಡಿದು ಫೋಟೋ ತೆಗೆಸಿಕೊಳ್ಳುವುದನ್ನೇ ‘ಅರಿವು’ ಎಂದುಕೊಳ್ಳುತ್ತಾರೆ. ಇದು ರೈತರಿಗೆ ಯಾವುದೇ ಸಹಾಯ ಮಾಡುವುದಿಲ್ಲ. ಬ್ಯಾನರ್ ಹಿಡ್ಕೊಂಡು ಫೋಟೋ ತೆಗಿಸೋ ಅವೇರ್‌ನೆಸ್ ಬೇಡ… ರೈತರ ಬಳಿ ನೇರವಾಗಿ ಹೋಗಿ ಮಾಹಿತಿ ನೀಡಿ” ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಜತೆಗೆ, ಬೀಜೋಪಚಾರ(seed treatment) ಮತ್ತು ಬೆಳೆ ಪರಿವರ್ತನೆ(crop rotation) ಬಗ್ಗೆ ರೈತರಿಗೆ ವೈಜ್ಞಾನಿಕ ಮಾಹಿತಿ ನೀಡುವಂತೆ ತಾಕೀತು ಮಾಡಿದ್ದು, “ಕೃಷಿ ಇಲಾಖೆಯ ಕಾರ್ಯಗಳು ಕೇವಲ ಕಡತಗಳಲ್ಲಿ ಉಳಿಯಬಾರದು. ಬದಲಾಗಿ ರೈತರ ಜಮೀನುಗಳಲ್ಲಿ ಕಾರ್ಯರೂಪಕ್ಕೆ ಬರಬೇಕು” ಎಂಬುದು ಅವರ ಮುಖ್ಯ ಆಶಯವಾಗಿತ್ತು.

ಕಂದಾಯ ಇಲಾಖೆಯನ್ನು ನಿರ್ವಹಿಸುವ ಬೈರೇಗೌಡರು, ಕೃಷಿ ಇಲಾಖೆಯ ಸಮಸ್ಯೆಗಳ ಬಗ್ಗೆ ತೋರಿಸಿದ ಅಪಾರ ಜ್ಞಾನ ಅಚ್ಚರಿ ಮೂಡಿಸಿದೆ. ಮೆಕ್ಕೆಜೋಳ ಒಂದೇ ಬೆಳೆಯತ್ತ ರೈತರ ಅವಲಂಬನೆ, ಬೀಜಗಳ ಕಲುಷಿತದ ಬಗ್ಗೆ(seed contamination) ವೈಜ್ಞಾನಿಕ ಪ್ರಶ್ನೆಗಳು ಮತ್ತು ಎಐಸಿಆರ್‌ಟಿ(AICRT)ಯಂತಹ ಸಂಶೋಧನಾ ಸಂಸ್ಥೆಗಳ ಕಾರ್ಯವೈಖರಿ ಕುರಿತು ಅವರ ನಿಖರವಾದ ಟೀಕೆಗಳು ಕೃಷಿ ವಿಷಯಗಳ ಮೇಲೆ ಅವರಿಗಿರುವ ಹಿಡಿತವನ್ನು ತೋರಿಸುತ್ತದೆ.

ಈ ಸುದ್ದಿ ಓದಿದ್ದೀರಾ? ತುಮಕೂರು | ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ; ಜಿಲ್ಲೆಯಲ್ಲಿಯೂ ಪ್ರಾರಂಭ : ಜಿಲ್ಲಾಧಿಕಾರಿ

ಕೃಷಿಯನ್ನು ಕೇವಲ ಆರ್ಥಿಕ ದೃಷ್ಟಿಕೋನದಿಂದ ಅಳೆಯಲು ಸಾಧ್ಯವಿಲ್ಲ. ಅದು ರೈತರ ಬದುಕು, ಅವರ ಶ್ರಮ ಮತ್ತು ಸಂಕಷ್ಟಗಳೊಂದಿಗೆ ನೇರವಾಗಿ ಬೆಸೆದುಕೊಂಡಿದೆ” ಎಂದು ಸಚಿವರು ಪ್ರತಿಪಾದಿಸಿದರು.

ಒಟ್ಟಾರೆಯಾಗಿ, ಕೃಷ್ಣ ಬೈರೇಗೌಡರ ಈ ನಡೆ ಕೇವಲ ಒಬ್ಬ ಮಂತ್ರಿಯ ತರಾಟೆಯಾಗಿರದೆ, ವ್ಯವಸ್ಥೆಯೊಳಗಿನ ಬೇಜವಾಬ್ದಾರಿತನ ಮತ್ತು ತಾಂತ್ರಿಕ ಕುರುಡುತನದ ವಿರುದ್ಧದ ಧ್ವನಿಯಾಗಿತ್ತು. ಕೃಷಿ ಕ್ಷೇತ್ರಕ್ಕೆ ಹಣಕಾಸು ಮತ್ತು ಯೋಜನೆಗಳು ಎಷ್ಟೇ ಬಂದರೂ, ಅದನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರುವ ಕಾರ್ಯತಂತ್ರ ಮತ್ತು ಬದ್ಧತೆ ಇಲ್ಲದೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂಬುದು ಅವರ ಕಠಿಣ ಮಾತುಗಳ ಅಂತರಾರ್ಥ. ಅವರ ಈ ನಿಲುವು ಇಲಾಖೆಯ ಅಧಿಕಾರಿಗಳಿಗೆ ಪಾಠವಾಗಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

Download Eedina App Android / iOS

X