ಮೈಸೂರು | ಕನ್ನಡ ಇರುವ ತನಕ ಎಸ್. ಎಲ್. ಭೈರಪ್ಪ ಇರುತ್ತಾರೆ : ಜಯಪ್ಪ ಹೊನ್ನಾಳಿ

Date:

Advertisements

ಮೈಸೂರು ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿ ಎದುರು ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಿ.ಬಿ.ರಾಜಶೇಖರ್ ನೇತೃತ್ವದಲ್ಲಿ ಲೇಖಕರಾದ ಎಸ್.ಎಲ್.ಭೈರಪ್ಪ ಅವರ ಭಾವಚಿತ್ರ ಹಿಡಿದು, ಮೋಂಬತ್ತಿ ಹಚ್ಚಿ ಸಂತಾಪ ಸೂಚಿದರು. ಇದೇ ವೇಳೆ ಮಾತನಾಡಿದ ಸಾಹಿತಿ ಜಯಪ್ಪ ಹೊನ್ನಾಳಿ ಕನ್ನಡ ಇರುವ ತನಕ ಎಸ್ ಎಲ್ ಭೈರಪ್ಪ ಇರುತ್ತಾರೆ ಎಂದರು.

ಕನ್ನಡದ ಹಿರಿಯ ಲೇಖಕ, ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಎಸ್.ಎಲ್. ಭೈರಪ್ಪ ನಿಧನ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ರಾಷ್ಟ್ರೀಯವಾದಿಯಾಗಿದ್ದರೂ ಹೊರತು ಕೋಮುವಾದಿ ಆಗಿರಲಿಲ್ಲ. ಅವರನ್ನು ಕೋಮುವಾದಿ ಎಂದು ಬಿಂಬಿಸಲಾಯಿತು ಅಷ್ಟೇ. ಅವರೊಬ್ಬ ರಾಷ್ಟ್ರಮಟ್ಟದ ಚಿಂತಕರು. ಕನ್ನಡಕ್ಕೆ ಕಿರೀಟ ಪ್ರಾಯವಾದ ಲೇಖಕರು.

25ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಕಾದಂಬರಿಯ ಒಂದು ಸಾಲು ಓದಿದರೆ ಇಡೀ ಕಾದಂಬರಿ ಓದಬೇಕೆನ್ನುವ ಹಂಬಲ, ಕುತೂಹಲ ಮೂಡುತ್ತದೆ. ಅವರ ಹೆಸರಾಂತ ಕೃತಿಗಳಾದ ಪರ್ವ, ದಾಟು ಸೇರಿದಂತೆ ಅನೇಕ ಸೃಜನಶೀಲ ಕಾದಂಬರಿಗಳು ಇಂಗ್ಲೀಷ್ ಸೇರಿದಂತೆ ಹಲವು ಭಾಷೆಗಳಲ್ಲಿ ತರ್ಜುಮೆ ಆಗಿದೆ. ಕನ್ನಡ ಸಾಹಿತ್ಯ ಹೆಸರಾಂತ ಕಾದಂಬರಿಕಾರನನ್ನು ಕಳೆದುಕೊಂಡು ತಬ್ಬಲಿಯಾಗಿದೆ ಎಂದರು.

ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಿ.ಬಿ. ರಾಜಶೇಖರ್ ಮಾತನಾಡಿ, ಎಸ್.ಎಲ್.ಭೈರಪ್ಪ ಅವರು, ದೇಶ ಕಂಡ ಶ್ರೇಷ್ಠ ಅಪ್ರತಿಮ ಸೃಜನಶೀಲ ಲೇಖಕರು. ಆಧುನಿಕ ಕನ್ನಡ ಸಾಹಿತ್ಯದ ಜನಪ್ರಿಯತೆ ಮತ್ತು ಚಿಂತನಾಶೀಲತೆ ಕಾಯ್ದುಕೊಂಡ ಅಪೂರ್ವ ಬರಹಗಾರರಾಗಿದ್ದರು. ಅವರಿಗೆ ಪದ್ಮಭೂಷಣ, ಸರಸ್ವತಿ ಸಮ್ಮಾನ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿದ್ದವು. ಎಸ್.ಎಲ್. ಭೈರಪ್ಪರವರ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಕನ್ನಡ ಸಾಹಿತ್ಯದ ದಿಗ್ಗಜರಾಗಿದ್ದ ಎಸ್.ಎಲ್. ಭೈರಪ್ಪರವರ ಕೃತಿಗಳು ಭಾಷೆಯ ಗಡಿಯನ್ನು ದಾಟಿ ಗುಜರಾತಿ, ಹಿಂದಿ, ಸಂಸ್ಕೃತ, ಮಲಯಾಳಂ, ತಮಿಳು, ತೆಲಗು ಹಾಗೂ ಇಂಗ್ಲೀಷ್ ಭಾಷೆಗಳಿಗೂ ಅನುವಾದಗೊಂಡಿವೆ.

‘ಧರ್ಮಶ್ರೀ’ ಯಿಂದ ಹಿಡಿದು ಇತ್ತೀಚಿಗೆ ಪ್ರಕಟವಾದ ‘ಉತ್ತರಕಾಂಡ’ದವರಗೆ 20 ಕ್ಕೂ ಹೆಚ್ಚು ಮಹತ್ವಪೂರ್ಣ ಕಾದಂಬರಿಗಳನ್ನು ಭೈರಪ್ಪರವರ ಬರೆದಿದ್ದಾರೆ. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೇ, ನಾಯಿನೆರಳು, ಮತದಾನ ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರಮಟ್ಟದ ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿವೆ ಎಂದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಪ್ಯಾಲೆಸ್ತೀನ್ ಜನರೊಂದಿಗೆ ಜಾಗತಿಕ ಐಕ್ಯತೆಯ ಸಪ್ತಾಹ; ಪ್ರತಿಭಟನಾ ಪ್ರದರ್ಶನ

ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯ ಖಜಾಂಜಿ ನಂಜುಂಡ, ಮೈಸೂರು ಜಿಲ್ಲಾಧ್ಯಕ್ಷ ಸಂತೋಷ್, ಮೈಸೂರು ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಮಂಜುಳಾ, ಗೌರವ ಕಾರ್ಯದರ್ಶಿ ಸಿಂಧುವಳ್ಳಿ ಶಿವಕುಮಾರ್, ಅನುರಾಜ್ ಗೌಡ, ಮೈಸೂರು ಪ್ರಾಂತ್ಯ ಗೌರವಾಧ್ಯಕ್ಷರು ರವಿ ಗೌಡ, ಮಂಜುನಾಥ್, ಮಹೇಂದ್ರ, ವಿಷ್ಣು ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

Download Eedina App Android / iOS

X