“ಕಿಶೋರಿಯರು ಸಾಮಾನ್ಯವಾಗಿ 10 ರಿಂದ 19 ವರ್ಷದ ವಯಸ್ಸಿನ ಹೆಣ್ಣುಮಕ್ಕಳು ದೈಹಿಕ ಮಾನಸಿಕ ಹಾಗೂ ಭಾವನಾತ್ಮಕವಾಗಿ ಬಹುಪಾಲು ಬದಲಾವಣೆಗಳನ್ನು ಅನುಭವಿಸುವ ಹಂತದಲ್ಲಿ ಇರುತ್ತಾರೆ. ಈ ಹಂತದಲ್ಲಿ ಹೆಣ್ಣುಮಕ್ಕಳ ಆರೋಗ್ಯದ ಜಾಗೃತಿ ಅಗತ್ಯ. ಏಕೆಂದರೆ ಈ ಹಂತದಲ್ಲಿ ಸ್ವಸ್ತ ಜೀವನ ಶೈಲಿ ರೂಪಗೊಳ್ಳುತ್ತದೆ. ಭವಿಷ್ಯದ ಆರೋಗ್ಯದ ಅಡಿಪಾಯ ಪ್ರಾರಂಭವಾಗುತ್ತದೆ” ಎಂದು ಆಶಾ ಕಾರ್ಯಕರ್ತೆ ಶೋಭಾ ಗಾಜಿಪುರ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಲೊಯೋಲ ವಿಕಾಸ ಕೇಂದ್ರ ಮತ್ತು ಸಮಗ್ರ ಸುಸ್ಥಿರ ಅಭಿವೃದ್ಧಿ ಯೋಜನೆ ವತಿಯಿಂದ ಕಿಶೋರಿಯರಿಗೆ ನಾಯಕತ್ವ ಕೌಶಲ್ಯ ಮತ್ತು ವಯಕ್ತಿಕ ಸ್ವಚ್ಛತೆ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
“ಕಿಶೋರಿಯರಿಗೆ ವಯಕ್ತಿಕ ಸಚ್ಚತೆ ರಕ್ತ ಹೀನತೆ, ಗುಡ್ ಡಚ್ ಮತ್ತು ಬ್ಯಾಡ ಡಚ್ ಅಪರಾದಗಳನ್ನು ಹೇಗೆ ದೂರ ಮಾಡುವದು, ಅತ್ಯಾಚಾರ ಖಂಡಿಸುವುದು. ಪ್ರತಿಯೊಬ್ಬರಲ್ಲಿ ಧೈರ್ಯ ಆತ್ಮ ವಿಶ್ವಾಸ ನಾಯಕತ್ವ ಗುಣಹೊಂದಿರಬೇಕು. ಕಿಶೋರಿಯರು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಕೌಶಲ್ಯಗಳು ಅತಿ ಮುಖ್ಯ ಆದ್ದರಿಂದ ಜೀವನ ಕೌಶಲ್ಯಗಳ ಬಗ್ಗೆ ತಿಳಿದುಕೊಂಡಿರಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ, ಸುಮಾ ಚೊಳಪ್ಪನವರ, ಲೊಯೋಲ ಸಿಬ್ಬಂದಿಗಳು ಹೊನ್ನಮ್ಮಾ ಮತ್ತು ಪಿರಪ್ಪ ಸಿರ್ಸಿ ಸೇರಿದಂತೆ 38 ಕಿಶೋರಿಯರು ಹಾಜರಿದ್ದರು.