ಶಿವಮೊಗ್ಗ, ನಾಡ ಹಬ್ಬ ಶಿವಮೊಗ್ಗ ದಸರ ನೋಡುವುದೇ ಒಂದು ಆನಂದ. ಅದರಲ್ಲೂ ಮೈಸೂರಿನಂತೆಯೇ ಶಿವಮೊಗ್ಗದಲ್ಲೂ ಅಂಬಾರಿ ಹೋರುವ ಅರ್ಜುನ ಮೆರವಣಿಗೆಯಲ್ಲಿ ಸಾಗಲು ಬಾಲಣ್ಣ, ಬಹದ್ದೂರ್ ಜೊತೆಗಿರಲು ಎಲ್ಲಾ ರೀರಿಯ ತಾಲೀಮು ನಡೆಸಲಾಗುತ್ತಿದೆ.
ಜೊತೆಗೆ ಮಾಹುತರು ಈ ಮೂವರೊಂದಿಗೆ ಪ್ರತಿದಿನ ಮೆರವಣಿಗೆ ಸಾಗುವ ರಸ್ತೆಯಲ್ಲಿ ಕರೆದೊಯ್ದು ಫ್ರೀಡಂ ಪಾರ್ಕಿನಲ್ಲಿ ಸುಮಾರು ೨ರಿಂದ ಮೂರು ತಾಸು ಆಹಾರ ಕೊಟ್ಟು ನಿಲ್ಲಿಸುತ್ತಾರೆ.
ಅದನ್ನು ನೋಡಲು ಜನರು ತಂಡೋಪ ತಂಡವಾಗಿ ಭಾಗವಹಿಸಿ ಫೋಟೋ ಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.