ಭಾಲ್ಕಿ ತಾಲ್ಲೂಕಿನ ತಳವಾಡ (ಕೆ) ಗಾಪಂ ವ್ಯಾಪ್ತಿಯ ಕರಡ್ಯಾಳ ಗ್ರಾಮದಲ್ಲಿ ಗ್ರಾಮ ಗ್ರಂಥಾಲಯ ಉದ್ಘಾಟಿಸಲಾಯಿತು.
ಭಾಲ್ಕಿ ತಾಪಂ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿ ಗ್ರಂಥಾಲಯಗಳ ಬಳಕೆ ಹಾಗೂ ಅವರಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಸರಕಾರವು ʼಗ್ರಾಮ ಗ್ರಂಥಾಲಯʼ ಯೋಜನೆ ಪರಿಚಯಿಸಿ ಅನುಷ್ಠಾನಕ್ಕೆ ತಂದಿದೆʼ ಎಂದು ಹೇಳಿದರು.
ʼಸರಕಾರವು ಈಗಾಗಲೇ ʼಅರಿವು ಕೇಂದ್ರʼ ಎಂಬ ಹೆಸರಿನಲ್ಲಿ ಪ್ರತಿಯೊಂದು ಗ್ರಾಮ ಪಂಚಾಯತಿಯ ಕೆಂದ್ರ ಸ್ಥಾನದಲ್ಲಿ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿದೆ. ಇದರಂತೆ ಗ್ರಾಪಂ ವ್ಯಾಪ್ತಿಯ ಗ್ರಾಮವೊಂದರಲ್ಲಿ ಗ್ರಾಮ ಗ್ರಂಥಾಲಯವನ್ನು ಸ್ಥಾಪಿಸಿ ಸರಕಾರ ಗ್ರಾಮದಲ್ಲಿರುವ ಮಕ್ಕಳಿಗೆ ಜ್ಞಾನಧಾರೆಯನ್ನು ಎರೆಯುತ್ತಿದೆ. ಸರ್ಕಾರದ ಈ ಕೆಲಸ ಅತ್ಯಂತ ಶ್ಲಾಘನೀಯ. ಗ್ರಾಮದಲ್ಲಿರುವ ಮಕ್ಕಳು ಈ ಗ್ರಂಥಾಲಯದ ಲಾಭ ಪಡೆದುಕೊಳ್ಳಬೇಕುʼ ಎಂದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಅನುಪಮಾ ರಾಚಣ್ಣಾ ಅವರು ಗ್ರಂಥಾಲಯ ವಿಜ್ಞಾನದ ಪಿತಾಮಹ ಎಸ್.ಆರ್.ರಂಗನಾಥನ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ತಳವಾಡ ಕೆ ಗ್ರಾಪಂ ಪಿಡಿಒ ಪ್ರಭುಶೆಟ್ಟಿ ಅವರು ಅತಿಥಿ-ಗಣ್ಯರಿಗೆ ಸ್ವಾಗತಿಸಿ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಇದನ್ನೂ ಓದಿ : ಬೀದರ್ | ಮುಖ್ಯಮಂತ್ರಿ, ಕೃಷಿ ಸಚಿವರು ಖುದ್ದಾಗಿ ಅತಿವೃಷ್ಟಿ ಹಾನಿ ಪರಿಶೀಲಿಸಲಿ : ಶಾಸಕ ಶರಣು ಸಲಗರ
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಮರಾವ ಶೇರಿಕಾರ, ಗ್ರಾಮದ ಪ್ರಮುಖರು ಶಿವಶಂಕರ ಪಾಟೀಲ್, ಎಪಿಎಂಸಿ ಮಾಜಿ ಅಧಕ್ಷ ಬಾಬುರಾವ ವೀರಶಟ್ಟಿ, ಗ್ರಾಪಂ ಸದಸ್ಯರಾದ ಜಗನ್ನಾಥ, ಶಿವಕುಮಾರ, ಟಿಐಇಸಿಸಿ ಗಣಪತಿ, ಗ್ರಾಪಂ ಸಿಬ್ಬಂದಿ, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಇದ್ದರು.