ಶಿವಮೊಗ್ಗ ನ್ಯಾಯಾಲಯ ಮತ್ತೊಂದು ಅಪ್ರಾಪ್ತ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಹತ್ವದ ಶಿಕ್ಷೆ ನೀಡಿದೆ. ಆರೋಪಿಯೊಬ್ಬನಿಗೆ 20 ವರ್ಷ ಸೆರೆವಾಸ ವಿಧಿಸಿದೆ.
2022ರಲ್ಲಿ ಜಿಲ್ಲೆಯ ತಾಲ್ಲೂಕು ಒಂದರಲ್ಲಿ 19 ವರ್ಷದ ಯುವಕನೊಬ್ಬ 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಕೇಳಿ ಬಂದಿತ್ತು.
ಈ ಪ್ರಕರಣದಲ್ಲಿ ಆರೋಪಿ ಸಂತ್ರಸ್ತ ಬಾಲಕಿಯನ್ನು ಮದುವೆಯಾಗಿದ್ದ. ಈ ಕುರಿತಾಗಿ ಸಂತ್ರಸ್ತ ಬಾಲಕಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗದ ಪೊಲೀಸ್ ಠಾಣೆ ಒಂದರಲ್ಲಿ ಪೋಕ್ಸೋ (POCSO) ಮತ್ತು ಪಿಸಿಎಂ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆಯನ್ನು ಅಂದಿನ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್ ಅವರು ಪೂರ್ಣಗೊಳಿಸಿದ್ದಷ್ಟೆ ಅಲ್ಲದೆ ಆರೋಪಿ ವಿರುದ್ದ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದರು.
ಶಿವಮೊಗ್ಗದ FTSC-1 ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರಾಧ ಶ್ರೀಧರ್ ಹೆಚ್.ಆರ್ ವಾದ ಮಂಡಿಸಿದ್ದರು.
ನ್ಯಾಯಾಧೀಶರಾದ ನಿಂಗನಗೌಡಾ ಭ. ಪಾಟೀಲ್ ಅವರು ದಿನಾಂಕ: 23-09-2025 ರಂದು ಆರೋಪಿಗೆ ಕಲಂ 6 ಪೋಕ್ಸೋ ಕಾಯ್ದೆಯಡಿ 20 ವರ್ಷಗಳ ಕಠಿಣ ಕಾರಾಗೃಹ ವಾಸ ಮತ್ತು 50,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.