ದಿನಾಂಕವು ೨೪.೯/೨೦೨೫ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಗದಗ ಇಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಅಂಗವಾಗಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಎ.ಎಸ್.ಎಸ್. ಮಹಾವಿದ್ಯಾಲದ ಶ್ರೀ ಯುತ. ಬಾಹುಬಲಿ ಜೈನರವರು ಆಗಮಸಿ, “ಸ್ವಯಂ ಸೇವಕರು ನಾಯಕತ್ವ, ಸಂಘಟನೆ, ಸೃಜನಶೀಲ ಪ್ರತಿಬೆ ಆರಳುವ ವೇದಿಕೆ ಆಗಿದ್ದು, ಹಾಗಾಗಿ ಎನ್.ಎಸ್.ಎಸ್. ಸ್ವಯಂ ಸೇವಕರು ಸದುಪಯೋಗವನ್ನು ಮಾಡಿಕೋಳ್ಳಬೇಕು” ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ. ಕಲಿಲ್ ಅಹಮ್ಮದ್ ಚಿಕ್ಕೇರೂರು ಸ್ವಯಂ ಸೇವಕರಿಗೆ ಪಠ್ಯ ಮತ್ತು ಪಠ್ಯತರ ಚಟುವಟಿಕೆಗಳು ನಿಮ್ಮ ವ್ಯಕ್ತಿತ್ವ ವಿಕಾಸನಕ್ಕೆ ರಂಗಭೂಮಿಕೆ” ಎಂದು ಹೇಳುದರು.
ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಕಸ್ತೂರಿ ದಳವಾಯಿ ಸಂಸ್ಥೆಪನಾ ದಿನಾಚರಣೆ ಕುರಿತು ಪ್ರಸ್ತಾವಿಕವಾಗಿ ಮಾತನಾಡುತ್ತಾ “ಯೌವನ ವಿವೇಕಗಳ ಸಂಗಮ. ವ್ಯಕ್ತಿಯ ವಿಕಸನಕ್ಕೆ ಹೆಜ್ಜೆ ಗುರುತುಗಳೆ ಏಳ್ಗೆಯೇ ಕೇಂದ್ರ ಶಕ್ತಿ” ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥರು ಡಾ. ಶಿವಪ್ಪ ಎಂ ಕುರಿ ಅವರು ವಿದ್ಯಾರ್ಥಿಗಳಿಗೆ ನಿಮ್ಮ ಕ್ರಿಯಾಶೀಲ ಬದುಕಿಗೆ ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ಎನ್ ಎಸ್ ಎಸ್ ವೇದಿಕೆ ತುಂಬಾ ಮಹತ್ವದ್ದು. ಅದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ” ಎಂದು ಹೇಳಿದರು.
ಇದನ್ನೂ ಓದಿ: ಗದಗ | ಧಾರ್ಮಿಕ ಸಾಮರಸ್ಯದ ಬದುಕಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರ: ಪ್ರೊ ಎಸ್. ಯು. ಸಜ್ಜನಶೆಟ್ಟರ್
ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಪಕರಾದ ಶ್ರೀಮತಿ ಉಮಾದೇವಿ ಕಣವಿ ಮತ್ತು ಪ್ರೊ. ತಿಪ್ಪಣ್ಣ ಕೋಲಕರ, ಪ್ರೊ. ಕೇಶವ ಪಿ, ಡಾ. ಕೆ ಬಿ ತಿಪ್ಪೆಸ್ವಾಮಿ, ಶ್ರೀಯುತ ಮಹಾಂತೇಶ ಮುದೋಳ, ಡಾ. ರೇಖಾ ನೀರಲಗಿ, ಶ್ರೀಮತಿ ಜ್ಯೋತಿ ಬೋಳನ್ನವರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಪ್ರಭುರಾಜ ಕ್ಯಾರಾಕೊಪ್ಪ ಎಲ್ಲರನ್ನು ಸ್ವಾಗತಿದರು. ಶ್ರೀಮತಿ ಕವಿತಾ ಜಂಗವಾಡ ಪ್ರಾರ್ಥನೆ ಸಲ್ಲಿಸಿದರು. ಕುಮಾರಿ ಅಶ್ವಿನಿ ಎಲ್ಲರನ್ನು ಒಂದಿಸಿದರು. ಕುಮಾರ ಹರ್ಷ ಯತ್ನಟ್ಟಿ ಕಾರ್ಯಕ್ರಮ ನಿರೂಪಿಸಿದರು.