ಶಿರಸಿ | ಅರಣ್ಯ ಭೂಮಿ ಸ್ವಾಧೀನಕ್ಕೆ ಸುಪ್ರೀಂ ಕೋರ್ಟ್ ಆದೇಶ – ರಾಜ್ಯ ಸರ್ಕಾರದಿಂದ ವಿಶೇಷ ತನಿಖಾ ತಂಡ ರಚನೆ.

Date:

Advertisements

ಸರ್ಕಾರದ ಅಧೀನದಲ್ಲಿರುವ ಅರಣ್ಯ ಭೂಮಿಯನ್ನು ಅನಧಿಕೃತವಾಗಿ ಅರಣ್ಯೇತರ ಚಟುವಟಿಕೆಗೆ ಬಳಸಿಕೊಂಡಿರುವ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಮತ್ತು ವಶಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರವು ವಿವಿಧ ಹಂತದ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಈ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರವು ಒಂದು ವರ್ಷದ ಅವಧಿಯನ್ನು ನಿಗದಿಪಡಿಸಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆಯ ಅಧೀನ ಕಾರ್ಯದರ್ಶಿ ಬಿ. ಶಿವಕುಮಾರ್ ಅವರು, ಸರ್ಕಾರವು ಸೆಪ್ಟೆಂಬರ್ 15 ರಂದು ಪ್ರಕಟಿಸಿದ ಸರ್ಕಾರದ ನಡವಳಿಕೆಯ ಪ್ರತಿಯನ್ನು ಇಂದು ಶಿರಸಿ ಅರಣ್ಯ ಭೂಮಿ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಮಂಡಿಸಿದರು. ಈ ಸಭೆ ಅಕ್ಟೋಬರ್ 4 ರಂದು ಜರುಗಲಿರುವ ಮೇಲ್ಮನವಿ ಅಭಿಯಾನದ ಪೂರ್ವಭಾವಿ ಸಭೆಯಾಗಿತ್ತು.

ಸುಪ್ರೀಂ ಕೋರ್ಟ್ ಮೇ 15 ರಂದು, ಅರಣ್ಯ ಭೂಮಿಯನ್ನು ಹೊಂದಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸರ್ಕಾರದ ಪರವಾನಿಗಿಯಿಲ್ಲದೇ ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಂಡಿರುವ ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳಲು ತನಿಖಾ ತಂಡಕ್ಕೆ ಅಧಿಕಾರ ನೀಡುವಂತೆ ಆದೇಶಿಸಿತ್ತು. ಅಲ್ಲದೆ, ರಾಜ್ಯ ಸರ್ಕಾರವು ಸ್ವಾಧೀನಪಡಿಸಿಕೊಂಡಿರುವ ಭೂಮಿಯ ವೆಚ್ಚವನ್ನು ವಸೂಲಿ ಮಾಡುವ ಪ್ರಕ್ರಿಯೆಯನ್ನೂ ನಡವಳಿಕೆಯಲ್ಲಿ ಪ್ರಸ್ತಾಪಿಸಿದೆ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್‌ನಲ್ಲಿ ಟಿ.ಎನ್. ಗೋಧವರ್ಮನ್ ಅವರು ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ಅರಣ್ಯ ಭೂಮಿಯನ್ನು ಅರಣ್ಯ ಉದ್ದೇಶ ಹೊರತುಪಡಿಸಿ ಮಾನವ ಹಾಗೂ ಸಂಸ್ಥೆಗಳ ಹಸ್ತಕ್ಷೇಪವನ್ನು ನಿಯಂತ್ರಿಸಲು ಆದೇಶ ನೀಡಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು.

ಈ ಸುದ್ದಿ ಓದಿದ್ದೀರಾ? ಮುಂಡಗೋಡ | ತಾಲ್ಲೂಕು ಕೇಂದ್ರದ ಅಂಚಿನಲ್ಲೇ ಮೂಲಸೌಕರ್ಯಗಳಿಲ್ಲದ ಹಳ್ಳಿಗಳು; ಅಭಿವೃದ್ಧಿಗಾಗಿ ಡಿಸಿಗೆ ಮನವಿ

ಈ ಸಂದರ್ಭದಲ್ಲಿ ಕಾನೂನು ಸಲಹೆಗಾರ ಉದಯ ನಾಯ್ಕ ವಕೀಲರು, ಕೃಷ್ಣ ಗೋವಿಂದ ಪೂಜಾರಿ ಉಲ್ಲಾಳ, ಮಹೇಶ್ ಮಂಜುನಾಥ ಮುಕ್ರಿ ಕಡಬಾಳ, ಗಣಪತಿ ತಿಮ್ಮಪ್ಪ ನಾಯ್ಕ ಕಾನಕೊಪ್ಪ, ಶಿಣ್ಣು ಸುಬ್ಬ ಗೌಡ ಕುದರಗೋಡ, ಕಿರಣ ಶಿವು ವಡ್ಡರ್ ಬೆಡಸಗಾಂವ್, ತಿಮ್ಮ ಸಣ್ಣು ಗೋಣಸರ, ವಿಜಯ ವಿಷ್ಣು ದೇವದಾಸ ಕಾರವಾರ, ಶೇಷ ನಾಯ್ಕ ಹುಲೇಕಲ್, ಅರವಿಂದ ನಾಗೆಕರ್ ಹಣಕೋಣ, ಪ್ರದೀಪ್ ಬಿ ನಾಯ್ಕ, ದೇವು ಗಾಂವಕರ್ ಕಾರವಾರ, ಬಾಬು ಗಾವಂಕರ್ ಕಾರವಾರ, ನಾರಾಯಣ ಗಾಂವಕರ್ ಕಾರವಾರ, ರತ್ನಾಕರ ಅನಂತ ನಾಯ್ಕ, ವೆಂಕಟರಮಣ ಸುಬ್ಬ ಗೌಡ ಕುದ್ರಗೋಡ, ಮಂಜುನಾಥ ಸುಬ್ಬ ಗೌಡ ಶಿರಗುಳಿ, ಅಬ್ದುಲ್ ಹಕ್ ಆರೆಕೊಪ್ಪ ಮುಂತಾದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ಅರಣ್ಯ ಭೂಮಿ ಸ್ವಾಧೀನಕ್ಕೆ ಸುಪ್ರೀಂ ಕೋರ್ಟ್ ಆದೇಶ; ರಾಜ್ಯ ಸರ್ಕಾರದಿಂದ ವಿಶೇಷ ತನಿಖಾ ತಂಡ

ಸರ್ಕಾರದ ಅಧೀನದಲ್ಲಿರುವ ಅರಣ್ಯ ಭೂಮಿಯನ್ನು ಅನಧಿಕೃತವಾಗಿ ಅರಣ್ಯೇತರ ಚಟುವಟಿಕೆಗೆ ಬಳಸಿಕೊಂಡಿರುವ ಭೂಮಿಯನ್ನು...

ಭಟ್ಕಳ | ಮುರುಡೇಶ್ವರದಲ್ಲಿ ಯುವಕನ ಪ್ರಾಮಾಣಿಕತೆ; ಕಳೆದುಹೋದ ಬ್ಯಾಗ್‌ ಹಸ್ತಾಂತರ

ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರದಲ್ಲಿ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡಿದ್ದ ಹೈದರಾಬಾದ್ ಪ್ರವಾಸಿಗರಿಗೆ...

ಉತ್ತರ ಕನ್ನಡ | ಕುಂಟುತ್ತಾ ಸಾಗುತ್ತಿರುವ ಸಮೀಕ್ಷೆ; ಅರ್ಧದಷ್ಟು ಸಮೀಕ್ಷೆದಾರರು ಕೆಲಸಕ್ಕೆ ಗೈರು

ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮೂರನೇ ದಿನವೂ...

ಉತ್ತರ ಕನ್ನಡ | ಮಾದಕ ವಸ್ತು ನಿಯಂತ್ರಣಕ್ಕೆ ಪೊಲೀಸರ ಹೊಸ ಕ್ರಮ; ಕ್ಯೂಆರ್ ಕೋಡ್ ಮೂಲಕ ಸುಲಭ ದೂರು ವ್ಯವಸ್ಥೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ತೀವ್ರವಾಗುತ್ತಿರುವ ಮಾದಕ ವಸ್ತು ಬಳಕೆ...

Download Eedina App Android / iOS

X