ಶಿವಮೊಗ್ಗ ನಗರದ ಸರಕಾರಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದ ಗೃಹಿಣಿಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರ ಕಳ್ಳತನ ಮಾಡಲಾಗಿದೆ.
ವೀಣಾ ಎಂಬುವವರು ತಮ್ಮೂರು ಆನವಟ್ಟಿಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಹಾನಗಲ್ ಮಾರ್ಗ ಬಸ್ ಹತ್ತಿದ್ದರು. ಆದರೆ ರಶ್ ಇದ್ದಿದ್ದರಿಂದ ಸೀಟ್ ಸಿಗದ ಕಾರಣಕ್ಕೆ ಕೆಳಗಿಳಿದು ಮುಖ, ಕೊರಳು ಒರೆಸಿಕೊಂಡಿದ್ದರು.
ಆಗ ಅವರ ಚಿನ್ನದ ಸರ ಕಳ್ಳತನವಾಗಿರುವುದು ಗೊತ್ತಾಗಿದೆ. ೨೨ ಗ್ರಾಂ ತೂಕದ ೧.೨೦ ಲಕ್ಷ ಮೌಲ್ಯದ ಚಿನ್ನದ ಸರ ಕಳುವಾಗಿದೆ ಎಂದು ವೀಣಾ ಅವರು ಆರೋಪಿಸಿದ್ದಾರೆ.
ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.