ದೇವನಹಳ್ಳಿ:ರೈತರು ಸಹಕಾರ ಸಂಘಗಳಲ್ಲಿ ವ್ಯವಹರಿಸಿ ಸಂಘದ ಉನ್ನತಿಗೆ ಸಹಕರಿಸಿ ಖಾಸಗಿ ಬ್ಯಾಂಕ್ಗಳಲ್ಲಿ ಠೇವಣೆ ಇಡುವ ಬದಲು ಸಹಕಾರಿ ಸಂಘದಲ್ಲೇ ಇಟ್ಟು ಹೆಚ್ಚು ಬಡ್ಡಿ ಗಳಿಸುವುದರೊಂದಿಗೆ ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸಿ ಎಂದು ಜಿಲ್ಲಾ ಬ್ಯಾಂಕ್ ನಿರ್ದೇಶಕ ಎಂ.ರಮೇಶ್ ತಿಳಿಸಿದರು
ದೇವನಹಳ್ಳಿ ಪಟ್ಟಣದ ಕೋಟೆ ಬೀದಿಯಲ್ಲಿರುವ ಕಸಬಾ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಛೇರಿಯಲ್ಲಿ ನಡೆದ 2024-25ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು ಸಹಕಾರಿ ಬ್ಯಾಂಕ್ನಿಂದ ರೈತರಿಗೆ ಕುರಿ, ಹಸು ಕೋಳಿ ಸಕಾಣೆಗೆ ಸಾಲ ಸೌಲಭ್ಯ ದೊರೆಯುತ್ತಿದ್ದು ರೈತರು ಅದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ದೇವನಹಳ್ಳಿ ಟೌನ್ ಕಸಬಾ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಎನ್.ರಘು ಮಾತನಾಡಿ ಸಂಘದಲ್ಲಿ ಪ್ರಸಕ್ತ ಸಾಲಿನಲ್ಲಿ 21 ಕೋಟಿ ವ್ಯವಹಾರ ಮಾಡಲಾಗಿದ್ದು 4 ಕೋಟಿ ಕೆಸಿಸಿ ಸಾಲ ನೀಡಲಾಗಿದೆ. 3 ಕೋಟಿ ಎಂ.ಟಿ.ಆರ್ ಸಾಲ ನೀಡಲಾಗಿದ್ದು ರೈತರು ಇದರ ಸದುಪಯೋಗಪಡೆದುಕೊಂಡಿದ್ದಾರೆ ಸಂಘಕ್ಕೆ 5 ಲಕ್ಷ ನಿವ್ವಳ ಲಾಭ ಬಂದಿದೆ ಎಂದರು.
ದೇವನಹಳ್ಳಿ ಟೌನ್ ಕಸಬಾ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಉಪಾಧ್ಯಕ್ಷ ಸುನಿಲ್ಕುಮಾರ್ ಮಾತನಾಡಿ ಸಂಘದ ಎಲ್ಲಾ ಸದಸ್ಯರ ಶ್ರಮದಿಂದ ಸಂಘ ಲಾಭದಾಯಕವಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ರಿಂದ 10 ಕೋಟಿವರೆಗೆ ರೈತರಿಗೆ ಸಾಲ ನೀಡುವ ಗುರಿ ಹೊಂದಿದ್ದೇವೆ. ಸಹಕಾರ ಸಂಘದಲ್ಲಿ ಯಾವುದೇ ಪಕ್ಷಭೇದವಿಲ್ಲದೆ ಎಲ್ಲರಿಗೂ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ದೇವನಹಳ್ಳಿ ಟೌನ್ ಕಸಬಾ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸಿ.ಇ.ಓ ಎನ್.ವೆಂಕಟೇಶ್ ಮಾತನಾಡಿ ಸಂಘದಲ್ಲಿ ರಸಗೊಬ್ಬರ ಮಳಿಗೆ ಪ್ರಾರಂಭಿಸಲು ಅನುಮತಿ ದೊರೆತಿದ್ದು ಅತಿ ಶೀಘ್ರದಲೇ ರಸಗೊಬ್ಬರ ಮಳೆಗೆ ಪ್ರಾರಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಸದಸ್ಯರು ಹೆಚ್ಚು ಠೇವಣೆಯನ್ನು ಸಂಘದಲ್ಲಿಟ್ಟು ಆ ಹಣವನ್ನು ಅವಶ್ಯಕತೆ ಇರುವ ಸದಸ್ಯರಿಗೆ ಚಿನ್ನಾಬರಣ ಸಾಲ, ಮನೆ ಸಾಲ ನೀಡಿ ಸಂಘಕ್ಕೆ ಆದಾಯ ಬರುವಂತೆ ಮಾಡಲಾಗುವುದು ಎಂದರು.
ಇದನ್ನು ಓದಿದ್ದೀರಾ..?ಶ್ರೀನಿವಾಸಸಾಗರದಲ್ಲಿ ದೋಣಿ ವಿಹಾರಕ್ಕೆ ಚಾಲನೆ ನೀಡಿ ಶುಭ ಕೋರಿದ ಶ್ರೀಮಂಗಳನಾಥಸ್ವಾಮೀಜಿ
ಇದೆ ವೇಳೆ ಕಸಬಾ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ನಿರ್ದೇಶಕರಾದ ಜಿ.ಸಿ.ಮಂಜುನಾಥ್, ಎನ್.ರಾಜು, ಎಸ್.ಗೋಪಾಲ್, ನರಸಿಂಹಮೂರ್ತಿ, ಸೊಸೈಟಿ ರಾಜಣ್ಣ, ಕೆ.ಅನಿಲ್ಕುಮಾರ್, ಪಿ.ಎ.ಗಾಯಿತ್ರಿದೇವಿ, ಮಂಜುಳಾ, ಸಿ.ಮಂಜುನಾಥ್, ಬಿಡಿಸಿಸಿಸಿ ಬ್ಯಾಂಕ್ನ ಮೇಲ್ವಿಚಾರಕ ಸಿ.ಎಂ.ಮಂಜುನಾಥ್, ಲೆಕ್ಕಿಗ ವಿ.ರಾಜೇಶ್, ಸಹಾಯಕ ಸತೀಶ್ ಸದಸ್ಯರು ಇದ್ದರು.