“ನಮ್ಮ ಸಮಾಜದ ಹಿರಿಯರು, ರಾಷ್ಟ್ರೀಯ ಕಾರ್ಮಿಕ ನಾಯಕರು ನೂತನವಾಗಿ ವಿಧಾನ ಪರಿಷತ್ತಿಗೆ ಆಯ್ಕೆಯಾದ ಮಾನ್ಯ ಎಫ್ ಎಚ್ ಜಕ್ಕಪ್ಪನವರ ಅವರಿಗೆ ಜಿಲ್ಲಾ ಛಲವಾದಿ ಮಹಾಸಭಾದಿಂದ ಅಭಿನಂದನಾ ಸಮಾರಂಭ ಏರ್ಫಡಿಸಲಾಗಿದ್ದು, ಇದೇ 28ಕ್ಕೆ ಪೂರ್ವಭಾವಿ ಸಭೆ ಕರೆಯಲಾಗಿದೆ” ಎಂದು ಜಿಲ್ಲಾ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಆನಂದ ಶಿಂಗಾಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಈ ಅಭಿನಂದನಾ ಸಮಾರಂಭವು ದಿನಾಂಕ 12-10-2025 ರಂದು ರವಿವಾರ ಗದಗ ನಗರದ ಭೀಮಸೇನ್ ಜೋಶಿ ರಂಗಮಂದಿರದಲ್ಲಿ ನಡೆಯಲಿದೆ” ಎಂದು ತಿಳಿಸಿದ್ದಾರೆ.
ಈ ಅಭಿನಂದನಾ ಸಮಾರಂಭದ ಕುರಿತು ಚರ್ಚಿಸಲು ಇದೇ ದಿನಾಂಕ 28-09-2025 ರವಿವಾರ ಬೆಳಗ್ಗೆ 10.30ಕ್ಕೆ ಗದಗ ನಗರದ ಐಬಿಯಲ್ಲಿ (ಪರಿವೀಕ್ಷಣಾ ಮಂದಿರ) ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದೆ” ಎಂದು ತಿಳಿಸಿದ್ದಾರೆ.
ಪೂರ್ವಭಾವಿ ಸಭೆಗೆ ಜಿಲ್ಲಾ ಛಲವಾದಿ ಮಹಾಸಭಾ ಗೌರವಾಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು, ತಾಲ್ಲೂಕು ಪಧಾದಿಕಾರಿಗಳು, ಜಿಲ್ಲಾ ಯುವ ಘಟಕದ ಪಧಾದಿಕಾರಿಗಳು ಶಹರ ಘಟಕದ ಪದಾಧಿಕಾರಿಗಳು ಹಾಗೂ ಗ್ರಾಮ ಘಟಕದ ಪದಾಧಿಕಾರಿಗಳು, ಮಹಿಳಾ ಮುಖಂಡರು. ಮತ್ತು ಜಿಲ್ಲೆಯ ಸಮಸ್ತ ಛಲವಾದಿ ಬಂಧುಗಳು ಈ ಸಭೆ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಲು ಕೋರಿದೆ” ಎಂದು ತಿಳಿಸಿದ್ದಾರೆ.