ದಾವಣಗೆರೆ ಜಿಲ್ಲೆ ವಕ್ಫ್ ಮಂಡಳಿಯ ದತ್ತಾಂಶ ಸಹಾಯಕ ಜಾಕೀರ್ ಹುಸೇನ್ ಮುಂಬಡ್ತಿಯಾಗಿ ಶಿವಮೊಗ್ಗ ಜಿಲ್ಲೆಯ ವಕ್ಫ್ ಮಂಡಳಿಯ ಪ್ರಥಮ ದರ್ಜೆ ಸಹಾಯಕ ವಕ್ಫ್ ನಿರೀಕ್ಷಕರಾಗಿ ವರ್ಗಾವಣೆಯಾಗಿದ್ದು ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ದಾವಣಗೆರೆ ಜಿಲ್ಲಾ ವಕ್ಫ್ ಮಂಡಳಿಯ ಸೈಯದ್ ಮೋಜಂ ಪಾಷಾ ಅಧ್ಯಕ್ಷತೆ ವಹಿಸಿ ಮಾತನಾಡಿ “ಜಾಕೀರ್ ಹುಸೇನ್ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಯಾವುದೇ ವರ್ಗಗಳ ಜನ ಬಂದರೂ ಆತ್ಮೀಯವಾಗಿ ಮಾತನಾಡಿಸಿ ಕೆಲಸ ನಿರ್ವಹಿಸುತ್ತಿದ್ದರು. ಕಛೇರಿಗೆ ಇಂತಹ ಉತ್ತಮ ಅಧಿಕಾರಿಗಳ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾರ್ಲ್ ಮಾರ್ಕ್ಸ್ ನಗರದ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಠ್; ಪೊಲೀಸ್ ಇಲಾಖೆ ಎಚ್ಚರಿಕೆ
ಸಮಾರಂಭದಲ್ಲಿ ಇಂಡಿಯನ್ ಮುಸ್ಲಿಂ ಲೀಗ್ ಅಧ್ಯಕ್ಷ ಟಿ.ಅತಾವುಲ್ಲಾ ಸಾಬ್, ನಸ್ರುಲ್ಲಾ ಸಾಬ್, ದೇಶನೂರಸಾಬ್, ಸೈಯದ್ ವಜೀರ್ ಸಾಬ್, ರಿಜ್ವಾನ್ ಸಾಬ್, ರಹಮತ್ ಊರ್ ರಹಮಾನ್, ಮಹಮೂದ್ ಖಾನ್, ಹಾಜಿ ಪಟೇಲಿ, ಸಮೀರ್, ವಾಜಿದ್ ಸಾಬ್, ಅಬ್ದುಲ್ ಘನಿ ತಾಹಿರ್, ಸಂತೆಬೆನ್ನೂರು ಅಜಾಜ್ ಸಾಬ್, ಸ್ಮಾರ್ಟ್ ನ್ಯೂಸ್ ಸಂಪಾದಕರಾದ ಅಲ್ಲಾಭಕ್ಷಿ ಹಾಗೂ ದಾವಣಗೆರೆ ವಕ್ಫ್ ಬೋರ್ಡಿನ ಸಿಬ್ಬಂದಿ, ಮುಸ್ಲಿಂ ಎಜುಕೇಶನ್ ಫಂಡ್ ಅಸೋಸಿಯೇಷನ್ ನ ಎಲ್ಲಾ ಸಿಬ್ಬಂದಿ ಮತ್ತು ಆಡಳಿತ ವರ್ಗದವರು ಪಾಲ್ಗೊಂಡಿದ್ದರು.