ಮಂಗಳೂರು | ಕೊಂಕಣಿ ಭಾಷಾ ಮಂಡಳ್‌ನ ರಾಜ್ಯಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ ಆಯ್ಕೆ

Date:

Advertisements

ಕೊಂಕಣಿ ಭಾಷಿಗರ ಸಂಘಟನೆಯಾದ ಕರ್ನಾಟಕ ಕೊಂಕಣಿ ಭಾಷಾ ಮಂಡಳ್‌ನ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ, ಬಹುಭಾಷಾ ಸಾಹಿತಿ ರೇಮಂಡ್ ಡಿಕೂನಾ ತಾಕೊಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜ್ಯ ಕಾರ್ಯದರ್ಶಿಯಾಗಿ ವಕೀಲ ಲಿಸ್ಟನ್ ಡಿಸೋಜ ಆಯ್ಕೆಯಾಗಿದ್ದಾರೆ.

ಕಾನೂನು ವ್ಯಾಸಂಗ, ಪತ್ರಿಕಾ ಮಾಧ್ಯಮ ಉನ್ನತ ವ್ಯಾಸಂಗ ಮಾಡಿರುವ ರೇಮಂಡ್, 1985 ರಿಂದ ‌ಪತ್ರಕರ್ತರು. ಕೊಂಕಣಿ ಪತ್ರಿಕೆಗಳಲ್ಲಿ ಸಹ- ಸಂಪಾದಕ, ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ಆಗಿನಿಂದಲೂ ಕೊಂಕಣಿ ಮಾತೃಭಾಷೆಗೆ ರಾಕ್ಣೊದಲ್ಲಿ ಪ್ರಚಾರಕರಾಗಿ ಕೆಲಸಮಾಡಿದರು. ನಂತರ ಮಿತ್ರ್ ಕೊಂಕಣಿ ಪತ್ರಿಕೆಯ ಸಹ ಸಂಪಾದಕರಾಗಿ ಹನ್ನೆರಡು ವರ್ಷಗಳ ಕಾಲ ಉಚಿತವಾಗಿ ಸೇವೆ ನೀಡಿದರು. ಕೆಥೊಲಿಕ್ ಸಭಾದ ಅಮ್ಚೊ ಸಂದೇಶ್ ಪತ್ರಿಕೆಯ ಸಂಪಾದಕರಾಗಿ ಅದನ್ನು ಲಾಭಕ್ಕೆ ತಂದು ನಂತರ ಕನ್ನಡದ ಜನವಾಹಿಯಲ್ಲಿ ವರದಿಗಾರರಾದರು. ದೈಜಿವರ್ಲ್ಡ್ ನಂತರ ಪಿಂಗಾರ ವಾರ ಪತ್ರಿಕೆ ಆರಂಭಿಸಿದರು. ಕಳೆದ ಇಪ್ಪತ್ತು ವರ್ಷಗಳ ಕಾಲ ಸಂಪಾದಕರಾಗಿ ಏಕೈಕ ಕ್ರೈಸ್ತರ ಪತ್ರಿಕೆ ನಡೆಸುತ್ತಿದ್ದಾರೆ. ಇಲ್ಲಿವರೆಗೆ ರೇಮಂಡ್‌ ಅವರ ನಾಲ್ಕು ನಾಟಕ, ಹದಿನೇಳು ಪುಸ್ತಕಗಳು ಪ್ರಕಟಗೊಂಡಿವೆ.

ಎಂಸಿಸಿ ಬ್ಯಾಂಕ್ ಆರ್ಥಿಕ ಕಷ್ಟದಲ್ಲಿ ಇದ್ದಾಗ ಲಾಭಕ್ಕೆ ತರಲು ತಂಡ ಕಟ್ಟಿ ನಿರ್ದೇಶಕ ಮಂಡಳಿಯ ಸದಸ್ಯರಾಗಿ ಶ್ರಮಿಸಿದರು. ಡಾನ್ ಬಾಸ್ಕೊ ಹಾಲ್ ಪುನರ್ನಿರ್ಮಾಣ ಮಾಡಲು ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ದುಡಿದರು. ಕ್ರಿಸ್ಟೊಫರ್ ಅಸೋಸಿಯೇಷನ್ ಮೆನ್ಸ್ ಹಾಸ್ಟೆಲ್ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಇದ್ದು, ಕಟ್ಟಡದ ಹಾಸ್ಟೆಲಿನ ಕಾಯಕಲ್ಪ ಮಾಡಿ ನಿವಾಸಿಗಳಿಗೆ ನೆಮ್ಮದಿ ನೀಡಿದರು. ಕೆಥೊಲಿಕ್ ಸಭಾದ ಆರಂಭಕ್ಕೆ ಮೊದಲು ನಡೆದ ಒಪಿತ್ಯಾಗಿ ವಿರುದ್ಧದ ಚಳವಳಿಯಲ್ಲಿ ವಿದ್ಯಾರ್ಥಿಯಾಗಿ ಭಾಗವಹಿದರು. ಇಂದು ಕೊಂಕಣಿ ಮಾತೃಭಾಷೆಯ ಯೋಗ್ಯ ರಾಜ್ಯ ಮಟ್ಟದ ಅದ್ಯಕ್ಷರಾಗಿದ್ದಾರೆ.

ಇದನ್ನೂ ಓದಿ: ಮಂಗಳೂರು | ಕೆಲಸ ನಿರಾಕರಣೆ; ಪ್ರತಿಭಟನೆಗಿಳಿದ ಹಳೆ ಬಂದರು ಹಮಾಲಿ ಕಾರ್ಮಿಕರು

ದಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಸದಸ್ಯರು, ಇತರ ಪದಾಧಿಕಾರಿಗಳಾಗಿ; ಕಾರ್ಯದರ್ಶಿಯಾಗಿ ವಕೀಲರು ಮತ್ತು ಕೊಂಕಣಿ ನಾಟಕ ಸಭೆಯ ಡೊನ್ ಬೊಸ್ಕೊ ಹೊಲ್ ಪುನರ್ನಿರ್ಮಾಣದ ರೂವಾರಿ ಲಿಸ್ಟನ್‌‌ ಡಿಸೋಜ, ಖಜಾಂಚಿಯಾಗಿ ಸ್ಕವ್ಟ್ ಮತ್ತು ಗೈಡ್ ದಕ ಜಿಲ್ಲಾ ಉಪಾಧ್ಯಕ್ಷರು ಮತ್ತು ನಿವೃತ್ತ ಬ್ಯಾಂಕ್ ಯೂನಿಯನ್ ಪದಾಧಿಕಾರಿಗಳು ಆದ ಲಯನ್ ಕೆ ವಸಂತ ರಾವ್, ಉಪಾಧ್ಯಕ್ಷರಾಗಿ ಜಿಎಸ್‌ಬಿ ಮಹಿಳಾ ಮಂಡಳ್ ಇದರ ಸಕ್ರಿಯ ಪದಾಧಿಕಾರಿ ಮೀನಾಕ್ಷಿ ಪೈ, ಸಹ ಕಾರ್ಯದರ್ಶಿ ಆಗಿ ಯುವ ಉದ್ಯಮಿ ಪ್ರಸಾದ್ ಶೆಣೈ ಅವಿರೋಧವಾಗಿ ಆಯ್ಕೆಯಾದರು. ಕೆಬಿಎಂಕೆ ಕಾರ್ಯಕಾರಿಣಿಯ ಅಹ್ವಾನಿತ ಸದಸ್ಯರಾದ ಹಿರಿಯರಾದ ಗೀತಾ ಸಿ ಕಿಣಿ ಚುನಾವಣಾ ಅಧಿಕಾರಿಯಾಗಿ ಆಯ್ಕೆಯನ್ನು ನಡೆಸಿ ಹೊಸ ಪದಾಧಿಕಾಗಳ ಘೋಷಣೆ ಮಾಡಿದರು.

ಕಾರ್ಯಕಾರಿ ಸದಸ್ಯರಾದ ಜೂಲಿಯೆಟ್‌ ಫೆರ್ನಾಂಡೀಸ್, ಲಾರೆನ್ಸ್ ಪಿಂಟೊ, ಜೊಸ್ಸಿ ಪಿಂಟೊ, ಸುರೇಶ್ ಶೆಣೈ, ಎಡೊಲ್ಫ್ ಡಿಸೋಜ, ಝಿನಾ ಫೆರ್ನಾಂಡೀಸ್, ಅರವಿಂದ್ ಶಾನ್ ಭಾಗ್ ಮತ್ತು ಶಾಂತಿ ವೆರೊನಿಕಾ ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

ಜನಸ್ಪಂದನ, ಸೌಲಭ್ಯಗಳ ವಿತರಣೆಯ ತಾಣವಾಗಲಿ-ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ:ಕಳೆದ ಹಲವಾರು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಮತ್ತು ಜನಸ್ನೇಹಿಯಾಗಿ ನಡೆಯುತ್ತಿರುವ ಜನಸ್ಪಂಧನ...

ಉಡುಪಿ | ಮೈಸೂರು ದಸರಾ ಮೆರವಣಿಗೆಯಲ್ಲಿ ಬಿರ್ತಿಯ ಅಂಕದಮನೆ ತಂಡದ “ಕಂಗೀಲು ನೃತ್ಯ” ಆಯ್ಕೆ

ಅಕ್ಟೋಬರ್ 2 ರಂದು ನಡೆಯುವ ಕರ್ನಾಟಕದ ನಾಡ ಹಬ್ಬ ವಿಶ್ವವಿಖ್ಯಾತ ಮೈಸೂರು...

Download Eedina App Android / iOS

X