ಶಿವಮೊಗ್ಗ, ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಖ್ಯಾತರು, ಹಿಂದುಳಿದವರು, ದಲಿತರು, ಅಲೆಮಾರಿಗಳು, ಶೋಷಿತರು, ದಮನಿತರೆಲ್ಲರನ್ನೂ ಒಟ್ಟಿಗೆ ಬೆಸೆಯುವಂತಹ ಕೆಲಸ ಮಾಡಲು, ಕೊಂಡಿಗಳನ್ನು ಬೆಸೆಯಲು ಅನ್ಯಾಯದ ವಿರುದ್ಧ ಸ್ವಾಭಿಮಾನದಿಂದ ಸೆಟೆದು ನಿಲ್ಲಲ್ಲು ಕರ್ನಾಟಕ ದಲಿತ ಸಮನ್ವಯ ಸಮಿತಿ ಹೆಸರಿನ ಮಟ್ಟದ ಸಮಿತಿಯನ್ನು ಹುಟ್ಟುಹಾಕಲಾಗಿದೆ ಎಂದು ಸಮಿತೊಯ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿ. ವಿನೋದ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಸೆ. 28ರಂದು ಬೆಳಗ್ಗೆ 10:30ಕ್ಕೆ ಪದಗ್ರಹಣ, ನೂತನ ಕಚೇರಿಯನ್ನು ಶಾಸಕ ಬಿ.ಕೆ. ಸಂಗಮೇಶ್ವರ ಉದ್ಘಾಟನೆ ಮಾಡುವರು.
ಸಿ ಎನ್ ರಸ್ತೆಯ ಗಂಗಾ ಪರಮೇಶ್ವರಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರಾಸ್ತಾವಿಕ ನುಡಿಯನ್ನು ಆರ್ ಟಿ ಓ ಅಧಿಕಾರಿ ಎನ್. ಮಂಜುನಾಥ, ಸಂಸ್ಥಾಪಕ ಅಧ್ಯಕ್ಷ ವಿನೋದ್ ಬಿ ಅಧ್ಯಕ್ಷತೆ ವಹಿಸುವರೆಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ. ರೇವಣಪ್ಪ ಅವರನ್ನು ಗೌರವಿಸಲಾಗುವುದು. ಅತಿಥಿಗಳಾಗಿ ನಗರಸಭೆ ಸದಸ್ಯ ಬಿ ಕೆ ಮೋಹನ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬಿ ಕೆ ಗಣೇಶ, ನಗರಸಭೆ ಉಪಾಧ್ಯಕ್ಷ ಎಂ ಎನ್ ಎಸ್ ಮಣಿ, ಶಿಕ್ಷಕರ ಸಂಘದ ರಾಜ್ಯ ಪದಾಧಿಕಾರಿ ಭಾರತಿ ಮೊದಲಾದವರು ಆಗಮಿಸುವರೆಂದರು.
ನಿವೃತ್ತ ಶಿಕ್ಷಕ ನರಸಿಂಹಮೂರ್ತಿ, ರಾಧಾಬಾಯಿ, ಶಾರದಾ ಪ್ರೇಮ್ ಕುಮಾರ್, ಎಸ್. ಭಾರತಿ ಚನ್ನಪ್ಪ, ಮುಖಂಡರಾದ ಕರಿಯಪ್ಪ ಅವರನ್ನು ಸನ್ಮಾನಿಸಲಾಗುವುದೆಂದರು.
ಶ್ರೀ ಎನ್. ಮಂಜುನಾಥ್ಪ್ರಶಸ್ತಿ ಪ್ರಧಾನ, ದಲಿತ ನೌಕರರ ಮುಖಂಡರು, ಆರ್.ಟಿ.ಓ. ಇಲಾಖೆ, ಮಂಗಳೂರು.ಮುಖ್ಯ ಅತಿಥಿಗಳುಶ್ರೀ ರೇವಣಪ್ಪ ಎಂ.ಆರ್.“ಕರ್ನಾಟಕ ಜಾನಪದ ರತ್ನ” ರಾಜ್ಯ ಪ್ರಶಸ್ತಿ, ಶಿಕ್ಷಕರು, ಜಾನಪದ ಪ. ಅಧ್ಯಕ್ಷರು, ಭದ್ರಾವತಿ, ಶ್ರೀಯುತ ಬಿ.ಕೆ. ಮೋಹನ್ಮಾಜಿ ಅಧ್ಯಕ್ಷರು, ಹಾಲಿ ನಗರ ಸಭಾ ಸದಸ್ಯರು, ಭದ್ರಾವತಿ.ಶ್ರೀಯುತ ಬಿ.ಎಸ್. ಗಣೇಶ್ಸನ್ಮಾನ್ಯ ಅಧ್ಯಕ್ಷರು, ತಾ|| ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಭದ್ರಾವತಿ,ಶ್ರೀಯುತ ಮಣಿ ಎ.ಎನ್.ಎಸ್.ಸರ್ವರಿಗೂ ಅದರದ ಸ್ವಾಗತ, ಮಾಜಿ ಅಧ್ಯಕ್ಷರು, ಹಾಲಿ ಉಪಾಧ್ಯಕ್ಷರು, ನಗರಸಭೆ, ಭದ್ರಾವತಿ.
ಶ್ರೀಮತಿ ಭಾರತಿ ಗೋವಿಂದಸ್ವಾಮಿ ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ನಿ.ಪೂ.ರಾಜ್ಯ ಪದಾಧಿಕಾರಿ, ಬೆಂಗಳೂರು, ಡೊಳ್ಳು ಕುಣಿತ ಗಿರೀಶ್ ಕುಮಾರ್ ಮತ್ತು ಸಂಗಡಿಗರು, ಅಂತರಾಷ್ಟ್ರೀಯ ಜಾನಪದ ಕಲಾವಿದರು (ಡೊಳ್ಳು ಕುಣಿತ, ಸುಗ್ಗಿ ಕುಣಿತ, ಕೋಲಾಟ), ಶ್ರೀ ಶನಿಪರಮೇಶ್ವರ ಯುವಕರ ಸಂಘ (ಅ), ಮಾದಾಪುರ, ಹೊಸನಗರ ತಾ|| ಶಿವಮೊಗ್ಗ ಜಿಲ್ಲೆ ಇವರಿಂದ ನಡೆಯಲಿದೆ.