ಶಿವಮೊಗ್ಗ ನಗರದ ಜೆ ಎಚ್ ಪಟೇಲ್ ಬಡಾವಣೆಯಲ್ಲಿನ ಹಾಲಿ ಚಾಲನೆಯಲ್ಲಿರುವ ಒಳಚರಂಡಿ ಕೊಳವೆ ಮಾರ್ಗಗಳನ್ನು ನಾರ್ಧನ್ ಔಟ್ ಪಾಲ್ ಗೆ ಲಿಂಕ್ ಮಾಡುವ ಕಾಮಗಾರಿಯನ್ನು ತರಾತುರಿಯಲ್ಲಿ ಪ್ರಾರಂಭ ಮಾಡಿದ್ದು ಅಂದಾಜು ವೆಚ್ಚ 83.70, ಲಕ್ಷದ ಕಾಮಗಾರಿಗೆ ನಿಯಮದ ಪ್ರಕಾರ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಅನುಮತಿಯನ್ನು ತೆಗೆದುಕೊಂಡು ಕಾಮಗಾರಿಯನ್ನು ಪ್ರಾರಂಭಿಸಬೇಕಿತ್ತು,
ಆದರೆ ತರಾತುರಿಯಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ತುಂಗಾ ಮೇಲ್ದಂಡೆ ಯೋಜನಾ ವಿಭಾಗದಿಂದ ಮೇಲ್ಕಂಡ ಕಾಮಗಾರಿಗೆ ಸಂಬಂಧಿಸಿದಂತೆ ನಿರಾಕ್ಷೇಪಣಾ ಪತ್ರ ಪಡೆಯದೆ ಕಾಮಗಾರಿ ಮಾಡಿರುವುದು ಕರ್ತವ್ಯ ಲೋಪವಾಗಿದೆ ಹಾಗೆಯೇ ತುಂಗಾ ಮೇಲ್ದಂಡೆ ಯೋಜನೆ ವಿಭಾಗದಿಂದ ಅನುಮತಿ ಪತ್ರ ಸಿಗುವ ಮುನ್ನವೇ ತಮ್ಮ ಇಲಾಖೆಯ ಅಧಿಕಾರಿಗಳು ಈ ಕಾಮಗಾರಿಗೆ ಸಂಬಂಧಿಸಿದಂತೆ ಕಾರ್ಯ ಆದೇಶ ನೀಡಿದ್ದಾರೆ.
ಇದು ಕೂಡ ಕರ್ತವ್ಯ ಲೋಪವಾಗಿದೆ, ಉದ್ದೇಶ ಒಳ್ಳೆಯದಾಗಿದ್ದರು ಕೂಡ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸುವಾಗ ನಿಯಮಗಳನ್ನು ಪಾಲಿಸದೆ ಕಾಮಗಾರಿಯನ್ನು ಪ್ರಾರಂಭ ಮಾಡುವುದು ಕೂಡ ಕರ್ತವ್ಯ ಲೋಪವಾಗುತ್ತದೆ, ಹಾಗೆಯೇ ತರಾತುರಿಯಲ್ಲಿ ಕಾಮಗಾರಿ ಪ್ರಾರಂಭ ಮಾಡುವುದು ಹಲವು ಅನುಮಾನಗಳನ್ನು ಹುಟ್ಟಿಸುತ್ತದೆ ಆದ್ದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವುಗಳು ಸಂಬಂಧಿಸಿದ ಅನಧಿಕೃತ ಕಾಮಗಾರಿಗಳನ್ನು ತೆಗೆಸಬೇಕು ಅನುಮತಿ ಸಿಗುವವರೆಗೂ ಕೆಲಸ ಮಾಡದಂತೆ ನೋಡಿಕೊಳ್ಳಬೇಕು ತರಾತುರಿಯಲ್ಲಿ ಕಾರ್ಯ ಪ್ರಾರಂಭಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಮಹಾನಗರ ಪಾಲಿಕೆ ಇಂಜಿನಿಯರ್ ಸಹಾಯಕ ಕಾರ್ಯಪಾಲಕ ಅಭಿಯಂತರು ಹಾಗೂ ಮಹಾನಗರ ಪಾಲಿಕೆಯ ಕಾರ್ಯ ಪಾಲಕ ಅಭಿಯಂತರದ ವಿರುದ್ಧ ದೂರು ದಾಖಲಿಸಿ ಕೊಂಡು ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಆಗ್ರಹಿಸುತ್ತದೆ ಎಂದು ಕರವೇ ಸ್ವಾಭಿಮಾನಿ ಬಣ ಅಗ್ರಹಿಸಿ ಆಯುಕ್ತರಿಗೆ ಮನವಿ ನೀಡಿದ್ದಾರೆ.
ಯಾವುದೇ ರೀತಿಯ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟದ ಮುಖಾಂತರ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್ ಎಸ್ ತಿಳಿಸಿದ್ದಾರೆ.

ಈ ಕರ್ತವ್ಯ ಲೋಪ ವಿರುದ್ಧವು ಸಹ ಕಾರ್ಯಪಾಲಕ ಅಭಿಯಂತರು ತುಂಗಾ ಮೇಲ್ದಂಡೆ ಯೋಜನೆಯ ವಿಭಾಗಕ್ಕೂ ಸಹ ತಮ್ಮ ವ್ಯಾಪ್ತಿಗೆ ಒಳಪಡುವ ಜಾಗದಲ್ಲಿ ನಿರಕ್ಷೇಪಣಾ ಪತ್ರವನ್ನು ಪಡೆಯದೆ ಕಾರ್ಯನಿರ್ವಹಿಸಿದವರ ವಿರುದ್ಧ ಮಹಾನಗರ ಪಾಲಿಕೆಯ ಗುತ್ತಿಗೆದಾರ ಇಂಜಿನಿಯರ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಮಹಾನಗರ ಪಾಲಿಕೆಯ ಕಾರ್ಯ ಪಾಲಕ ಅಭಿಯಂತರದ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದರು.
ಅವರಲ್ಲೂ ಸಹ ಒಂದು ಮನವಿಯನ್ನು ಸಲ್ಲಿಸಿದ್ದಾರೆ, ಇಲ್ಲದಿದ್ದಲ್ಲಿ ಮುಂದಿನ ದಿನ ತುಂಗಾ ಮೇಲ್ದಂಡೆ ಯೋಜನೆಯ ಕಚೇರಿಗೆ ಮುತ್ತಿಗೆಯನ್ನು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ನಗರಾಧ್ಯಕ್ಷರಾದ ಜೀವನ್, ಮುಹಮ್ಮದ್ ರಫಿ, ಯುವ ಘಟಕ ಅಧ್ಯಕ್ಷರಾದ ಸಂತೋಷ್, ಪ್ರಚಾರ ಸಮಿತಿಯ ಅಧ್ಯಕ್ಷರಾದ ಎನ್, ಮಾಲತೇಶ್, ಪ್ರವೀಣ್ ಕುಮಾರ್, ಗ್ರಾಮಾಂತರ ಅಧ್ಯಕ್ಷರಾದ ಮಂಜುನಾಥ್ ಹೆಚ್ ಎನ್, ನಾಗರಾಜ್ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.