ಸಣ್ಣ ಸಣ್ಣ ಹಂತಗಳನ್ನು ಜಯಿಸಿ ಮುಂದೆ ಸಾಗುವವರೇ ಭವಿಷ್ಯದಲ್ಲಿ ದೊಡ್ಡ ಸಾಧನೆ ಮಾಡುತ್ತಾರೆ. ವಿದ್ಯಾರ್ಥಿಗಳಾಗಲಿ, ಶಿಕ್ಷಕರಾಗಲಿ ಅಥವಾ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವವರಾಗಲಿ ಎಲ್ಲರಿಗೂ ನಿರಂತರ ಪರಿಶ್ರಮವೇ ಯಶಸ್ಸಿನ ಮೂಲಮಂತ್ರ ಎಂದು ಅಂಜುಮನ್ ಮಹಾವಿದ್ಯಾಲಯದಲ್ಲಿ ಎನ್‌ಎಸ್ಎಸ್ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ್ ಮಾತನಾಡಿದರು.
ಸಮಾಜದ ಹಾಗೂ ಶಿಕ್ಷಣ ಕ್ಷೇತ್ರದ ಪ್ರಗತಿಗೆ ನಿರಂತರ ಪ್ರಯತ್ನಗಳು ಅತ್ಯಾವಶ್ಯಕವಾಗಿದೆ. ಯಶಸ್ಸು ತಕ್ಷಣ ಸಿಗುವುದಿಲ್ಲ. ಒಂದು ಕಾರ್ಯವನ್ನು ಆರಂಭಿಸುವುದಷ್ಟೇ ಸಾಕಾಗುವುದಿಲ್ಲ, ಅದನ್ನು ಯಶಸ್ಸಿನ ತುದಿಗೆ ತಲುಪಿಸಲು ಹಠಮಾರಿ ಶ್ರಮ, ಧೈರ್ಯ ಮತ್ತು ದಿಟ್ಟತನ ಬೇಕಾಗುತ್ತದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಐ ಎ ಮುಲ್ಲಾ ಮಾತನಾಡಿ, ಸಮಾಜದಲ್ಲಿ ಶಾಂತಿ, ಅಭಿವೃದ್ಧಿ ಮತ್ತು ಸಮಾನತೆಯನ್ನು ಸಾಧಿಸಲು ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ನಿರಂತರ ಪ್ರಯತ್ನ ನಡೆಸಬೇಕು. ಇಂತಹ ಅಚಲ ಶ್ರಮದಿಂದಲೇ ನಮ್ಮ ಗುರಿಗಳನ್ನು ಸಾಕಾರಗೊಳಿಸಲು ಸಾಧ್ಯ ಎಂದು ಹೇಳಿದರು. ಡೇ ಸೆಲೆಬ್ರೇಶನ್ ಚೇರ್ಮನ್ ಡಾ. ಎಸ್ ಎಸ್ ಆದೋನಿ ಮಾತನಾಡುತ್ತಾ, ಮರವನ್ನು ನೆಡುವುದುರ ಜೊತೆಗೆ ಮರವನ್ನು ಬೆಳೆಸಬೇಕು ಎಂದು ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಭೂಗೋಳ ಶಾಸ್ತ್ರದ ಅಧ್ಯಯನದಿಂದ ಜೀವನಮಟ್ಟ ಉತ್ತಮಗೊಳ್ಳುತ್ತದೆ: ಡಾ. ಅಂಗಡಿ
ಡಾ. ಸೈಯದ್ ತಾಜ್ಜುನಿಸ್ಸಾ, ಸ್ವಾಗತಿಸಿದರು. ನಾಗರಾಜ್ ಕಂಕಣಿ ಪರಿಚಯಿಸಿದರು. ಐಕ್ಯೂಏಸಿಎಸ್‌ಸಿ ಕೋ-ಆರ್ಡಿನೇಟರ್ ಡಾ. ಎನ್. ಬಿ. ನಾಲತವಾಡ ಎನ್ಎಸ್ಎಸ್ ಪ್ರತಿಜ್ಞಾವಿಧಿಯನ್ನು ಬೋಧಿಸಿದರು, ಕುಮಾರಿ ಮಾಬುನ್ನಿ ದಫೇದಾರ ನಿರೂಪಿಸಿದರು.