ಉಡುಪಿ ನಗರದಲ್ಲಿ ಇಂದು ನಡೆದ ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಖಾಸಗಿ ಬಸ್ ವ್ಯವಹಾರ ನಡೆಸುತ್ತಿದ್ದ ಸೈಫುದ್ದೀನ್ ಹತ್ಯೆ ಪ್ರಕರಣದಲ್ಲಿ ಇದೀಗ ಮೃತರ ಮಗ ಪೊಲೀಸರಿಗೆ ದೂರು ನೀಡಿದ್ದಾರೆ.
ಶನಿವಾರ ಬೆಳಗ್ಗೆ ಮಲ್ಪೆ ಕೊಡವೂರು ರಸ್ತೆಯ ನಿವಾಸದಲ್ಲಿ ಸೈಫುದ್ದೀನ್ ಹತ್ಯೆಯಾಗಿತ್ತು. ಮಚ್ಚಿನಿಂದ ಹತ್ಯೆ ಮಾಡಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಮೂವರು ಈ ಕೃತ್ಯ ನಡೆಸಿದ್ದು, ಸೈಫುದ್ದೀನ್ ಸಂಸ್ಥೆಯ ಬಸ್ ಚಾಲಕರು ಈ ಕೃತ್ಯ ನಡೆಸಿರಬಹುದು ಎಂದು ಜಿಲ್ಲಾ ಎಸ್ ಪಿ ಹರಿರಾಮ್ ಶಂಕರ್ ಹೇಳಿದ್ದರು.
ಈ ಬಗ್ಗೆ ಸೈಫುದ್ದೀನ್ ಪುತ್ರ ದೂರು ನೀಡಿದ್ದು, ಇಬ್ಬರ ಬಗ್ಗೆ ಉಲ್ಲೇಖಿಸಿದ್ದಾರೆ. ಸೈಫುದ್ದೀನ್ ಸ್ನೇಹಿತರಾದ ಉಡುಪಿ ಕುಕ್ಕಿಕಟ್ಟೆಯ ನಿವಾಸಿ ಫೈಜಲ್ ಖಾನ್ ಮನೆಗೆ ಬಂದು ಬಸ್ ವಿಚಾರದ ಬಗ್ಗೆ ಮಾತನಾಡಲು ಕರೆದಿದ್ದ. ಹೀಗಾಗಿ ಫೈಜಲ್ ನ ಕಾರಿನಲ್ಲಿ ಸೈಫುದ್ದೀನ್ ತೆರಳಿದ್ದರು. ಮಣಿಪಾಲದಿಂದ ಕೊಡವೂರಿಗೆ ತೆರಳಿ, ಅಲ್ಲಿ ಫೈಜಲ್ ಖಾನ್ ಮತ್ತು ದೊಡ್ಡಣಗುಡ್ಡೆ ನಿವಾಸಿ ಶರೀಫ್ ಮತ್ತು ಇತರರು ಸೇರಿ ಸೈಫುದ್ದೀನ್ ಮೇಲೆ ಮಚ್ಚಿನಿಂದ ತಲೆಗೆ ಮತ್ತು ಬೆನ್ನಿಗೆ ಕೊಚ್ಚಿ ಕೊಲೆ ಮಾಡಿ, ಕಾರಿನಲ್ಲಿ ಪರಾರಿಯಾಗಿದ್ದಾರೆ.