ಧಾರವಾಡ | ಅನಕ್ಷರತೆಯಿಂದ ಹೊರಬಂದು ಶಿಕ್ಷಣ ಕಲಿಯಿರಿ : ಗಿರೀಶಗೌಡ ಪಾಟೀಲ್‌

Date:

Advertisements

ಕುಂದಗೋಳ ಕ್ಷೇತ್ರದ ಅನಕ್ಷರಸ್ಥ ಜನರು ಶಿಕ್ಷಣ ಕಲಿಕೆಗೆ ಮುಂದೆ ಬಂದು ಸಮಾಜದಲ್ಲಿ ಸಂವಿಧಾನಾತ್ಮಕವಾದ ಶಿಕ್ಷಣದ ಹಕ್ಕನ್ನು ಪಡೆಯುವ ಮನೋಭಾವ ಹೊಂದಬೇಕು ಮತ್ತು ಅನಕ್ಷರತೆಯಿಂದ ಹೊರಬಂದು ಶಿಕ್ಷಣ ಕಲಿಯಬೇಕಿದೆ ಎಂದು ತಾಲೂಕಿನ ಸಂಶಿ ಗ್ರಾಪಂ ಸಭಾಭವನದಲ್ಲಿ ನಡೆದ “ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ, ಸಾಕ್ಷರತಾ ಸಪ್ತಾಹ” ನಿಮಿತ್ತ ಆಯೋಜಿಸಿದ್ದ ಬೀದಿ ಕರಪತ್ರಗಳ ಬಿಡುಗಡೆ ಮಾಡಿ ಮಾತನಾಡಿದರು.

ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ 5 ವರ್ಷಗಳ ಅವಧಿಯ 15 ವರ್ಷ ಮೇಲ್ಪಟ್ಟ ವಯಸ್ಕರಿಗೆ ರಾಜ್ಯ ಸರ್ಕಾರವು ಶಿಕ್ಷಣ ಕಲಿಕೆಗೆ ದಿಟ್ಟ ಹೆಜ್ಜೆ ಇಟ್ಟು ಸಾಕ್ಷರತೆಗೊಳಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಗ್ರಾಪಂ ಸದಸ್ಯ ಹನಮಂತ ಎಸ್. ಲಕ್ಷ್ಮೇಶ್ವರ ಮಾತನಾಡಿ, ಕುಂದಗೋಳ ತಾಲೂಕು ಕ್ಷೇತ್ರದ ಸಂಶಿ, ಶಿರೂರ, ಮಳಲಿ ಮುಂತಾದ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಿಲ್ಲಾ ಶಿಕ್ಷಣ ಇಲಾಖೆಯು ಸ್ಥಳೀಯ ಎನ್.ಜಿ.ಒ. ಮೂಲಕ ಸಾಮಾಜಿಕವಾಗಿ ಹಿಂದುಳಿದವರಿಗೆ ಸಾಕ್ಷರತಾ ಶಿಕ್ಷಣ, ಬೀದಿ ನಾಟಕ ಹಾಗೂ ಜಾನಪದ ಕರಪತ್ರಗಳ ಮೂಲಕ ಅರಿವು ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ವಿಷಯ ಎಂದರು.

ಧಾರವಾಡ ಜಿಲ್ಲಾ ಸಾಕ್ಷರತಾ ಮತ್ತು ವಯಸ್ಕರ ಶಿಕ್ಷಣಾಧಿಕಾರಿ ಜಯಶ್ರೀ ಮಾತನಾಡಿ, ಸ್ಪರ್ಧಾತ್ಮಕ ಡಿಜಿಟಲ್‌ ಯುಗದಲ್ಲಿ ಅನಕ್ಷರಸ್ಥರನ್ನು ಸಾಕ್ಷರತೆ ಶಿಕ್ಷಣಕ್ಕೆ ಉತ್ತೇಜನ ನೀಡುವುದು ಪ್ರಮುಖ ಗುರಿಯಾಗಿದ್ದು, ಸಂಶಿಯ ಎನ್.ಜಿ.ಒ. ಸಂಸ್ಥೆಯ ಕಲಾ ತಂಡದಿಂದ ಆಯ್ಕೆಯಾದ ಗ್ರಾಮಗಳಲ್ಲಿ ಅಪೂರ್ಣ ಅಥವಾ ಶಿಕ್ಷಣ ಅಕ್ಷರ ಕಲಿಕೆ ಇಲ್ಲದ ಜನರನ್ನು ಗುರುತಿಸಿ, ಸಂಪೂರ್ಣ ಸಾಕ್ಷರತಾ ಶಿಕ್ಷಣ ನೀಡುವುದಕ್ಕೆ ಇಲಾಖೆಯು ಪ್ರಥಮ ಆದ್ಯತೆ ನೀಡಿದೆ. ಸಾಕ್ಷರತಾ ಇಲಾಖೆಯಿಂದ ಪ್ರತಿಯೊಬ್ಬ ಅನಕ್ಷರಸ್ಥರಿಗೂ ಓದು, ಬರಹ ಮತ್ತು ಲೆಕ್ಕಾಚಾರ ಬೋಧನೆ ಮತ್ತು ಮೌಲ್ಯಮಾಪನ ನಡೆಸಿ, ಆ ಜನರನ್ನು ಸಮಾಜ ಮುಖಿಯಾಗಿ ಶಿಕ್ಷಣ ಕಲಿಕೆಗೆ ಪ್ರೋತ್ಸಾಹಿಸಲು ರಾಜ್ಯ ಸರ್ಕಾರವು ಇಲಾಖೆಯಿಂದ ನೆರವು ನೀಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ಲೀಲಾವತಿ ಸೂಲದ, ಸದಸ್ಯ ಫಕ್ಕೀರೇಶ ಪಶುಪತಿಹಾಳ, ಎನ್.ಜಿ.ಒ. ಮುಖ್ಯಸ್ಥ ಎಚ್.ಎಸ್. ಹಿರೇಗೌಡ್ರ, ಮುತ್ತು ಸೊರಟಿ, ಜಗದೀಶ ದ್ಯಾವನೂರ, ಶಿವು ಕುರಟ್ಟಿ, ಮಂಜುನಾಥ ಪಡತೇರ, ಸಂತೋಷ ನಾಯ್ಕರ, ಪಕ್ಕೀರೇಶ ಮುಡ್ಸಿಬಣ, ಹರೀಶ ಸಾಳುಂಕೆ, ಮಲ್ಲಿಕಾರ್ಜುನ ಹಡಪದ ಇನ್ನಿತರರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಸರಕಾರ ದೇವದಾಸಿ ಮಹಿಳೆಯರ ಕುಟುಂಬ ಸದಸ್ಯರನ್ನು ಗಣತಿ ಪಟ್ಟಿಗೆ ಸೇರಿಸುವ ಕ್ರಮ ಸ್ವಾಗತ

"ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ...

ಗದಗ | ತಹಸೀಲ್ದಾರ ಕಚೇರಿಗಳಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ

"ಜಿಲ್ಲೆಯ ಎಲ್ಲಾ ತಾಲೂಕ ತಹಶೀಲ್ದಾರ್ ಕಚೇರಿ ಹಾಗೂ ಹೋಬಳಿಗಳಲ್ಲಿ ವೃಧ್ಯಾಪ್ಯ ವೇತನ,...

ಜನಮನ ಗೆದ್ದ ತುಮಕೂರು ದಸರಾ ಉತ್ಸವ : ಡಾ. ಜಿ.ಪರಮೇಶ್ವರ

 ತುಮಕೂರು ದಸರಾ ಉತ್ಸವವು ನಾಡಿನಾದ್ಯಂತ ಜನರ ಮನಸ್ಸನ್ನು ಗೆಲ್ಲುವ ಮೂಲಕ ಐತಿಹಾಸಿಕ...

Download Eedina App Android / iOS

X