ಜಿಲ್ಲಾ ಮ್ಯಾನೇಜರ್ (ಡಿ.ಎಂ.) ರವರು ತಮ್ಮ ಕುಟುಂಬಕ್ಕಾಗಿ ಖಾಸಗಿ ಉಪಯೋಗಕ್ಕೆ ಸರಕಾರಿ ವಾಹನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅಧಿಕಾರಿ ವಿರುದ್ಧ ಕ್ರಮ ಜರುಗಿಸಿ ಅಮಾನತು ಮಾಡಬೇಕು ಎಂದು ಅಖಿಲ ಭಾರತ ಡಾ. ಬಿ ಆರ್ ಅಂಬೇಡ್ಕರ್ ಸೈನ್ಯ ಸಂಘಟನೆ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಾಕ್ಷಿಗಳ ಪ್ರಕಾರ, ರಜೆ ದಿನವಾದ 4ನೇ ಶನಿವಾರ, ರಾಯಚೂರು ನಗರದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕೆಎ–32 ಎಫ್ 2760 ಸಂಖ್ಯೆಯ ಮಹೇಂದ್ರ ಬೊಲೆರೋ ಸರ್ಕಾರಿ ವಾಹನವನ್ನು ಡಿ.ಎಂ. ರವರು ತಮ್ಮ ಕುಟುಂಬ ಸದಸ್ಯರೊಂದಿಗೆ ಮೀರಾಜ್ ಸಿನೆಮಾಗೆ ತೆರಳಲು ಉಪಯೋಗಿಸಿದ್ದಾರೆ ಎಂದು ಆರೋಪಿಸಿದರು.
ಸರ್ಕಾರವು ಉನ್ನತ ಅಧಿಕಾರಿಗಳಿಗೆ ಅಧಿಕೃತ ಕರ್ತವ್ಯ ನಿರ್ವಹಣೆಗೆ ವಾಹನ ಸೌಲಭ್ಯ ಒದಗಿಸುತ್ತಿದ್ದರೂ, ಅದನ್ನು ವೈಯಕ್ತಿಕ ಮನರಂಜನೆಗಾಗಿ ಬಳಸಿರುವುದು ಸರ್ಕಾರದ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಂಘಟನಾ ಕಾರ್ಯಕರ್ತರು ಆಕ್ರೋಶಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಮೀಕ್ಷೆಗೆ ಗೈರು: 57 ಸಿಬ್ಬಂದಿಗೆ ನೋಟಿಸ್; 6 ಜನ ಅಂಗನವಾಡಿ ಕಾರ್ಯಕರ್ತೆಯರ ಅಮಾನತು
ಸರ್ಕಾರಿ ಸೌಲಭ್ಯಗಳನ್ನು ಸ್ವಂತ ಕುಟುಂಬಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿರುವ ಅಧಿಕಾರಿಗಳ ವಿರುದ್ಧ ಸಂಬಂಧಿಸಿದ ಉನ್ನತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ಅವರನ್ನು ಅಮಾನತ್ತು ಮಾಡಬೇಕು” ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.
ಈ ವೇಳೆ ವಿಭಾಗೀಯ ಅಧ್ಯಕ್ಷ ಹನುಮಂತ, ಗೋವಿಂದ, ನಾಗರಾಜ, ಜಂಬಯ್ಯ, ರಂಗಪ್ಪ ಇನ್ನಿತರರು ಹಾಜರಿದ್ದರು.
