ಕಾರವಾರ ತಾಲ್ಲೂಕು ಕೇಂದ್ರದಿಂದ 70 ಕಿಲೋ ಮೀಟರ್ ದೂರವಿರುವ ಕಮರಗಾಂವ್ ದಟ್ಟಾರಣ್ಯದ ನಡುವೆ ಇದೆ. ಅಲ್ಲಿ ಇಂಟರ್ನೆಟ್ ಇರಲಿ, ವಿದ್ಯುತ್ ಪೂರೈಕೆ ಕೂಡ ಇಲ್ಲಾ. ಗ್ರಾಮ ಪಂಚಾಯಿತಿ ಕೇಂದ್ರವಾದ ಘೋಟೆಗಾಳಿ ಗ್ರಾಮ ಕೂಡ 16 ಕಿ.ಮೀ. ದೂರವಿದೆ. ಅಲ್ಲಿಗೆ ರಸ್ತೆಯೂ ಸರಿಯಾಗಿಲ್ಲ. ತಾಲೂಕು ಕೇಂದ್ರ ಕಾರವಾರಕ್ಕೆ ಬರಬೇಕು ಎಂದರೆ ಗೋವಾ ರಾಜ್ಯದ ಮೂಲಕ 125 ಕಿ.ಮೀ. ಪ್ರಯಾಣಿಸಿ ಬರಬೇಕು. ಇದು ಕಮರಗಾಂವ ಗ್ರಾಮಸ್ಥರ ನಿತ್ಯದ ಗೋಳು. ಇವರಿಗೆ ಗೋವಾ ರಾಜ್ಯದ ಊರುಗಳೇ ಸಮೀಪ.
ಹಾಗಾಗಿ ಸಮೀಪವಿರುವ ಗೋವಾ ರಾಜ್ಯದ ನೇತ್ರಾವಳಿಯಲ್ಲಿ ಸೋಮವಾರ ಸಮೀಕ್ಷೆಯ ಶಿಬಿರ ಆಯೋಜಿಸಲಾಗಿದೆ ಗೋವಾದಲ್ಲಿ ನಡೆಯುವ ಶಿಬಿರಕ್ಕೆ ಸಿಬ್ಬಂದಿ ಜತೆ ಜಿಲ್ಲಾ ಪಂಚಾಯಿತಿ ಸಿಇಒ ಡಾ. ದಿಲೀಷ ಶಶಿ, ತಹಸೀಲ್ದಾರ ನಿಶ್ಚಲ ನರೋನಾ ಕೂಡ ತೆರಳಲಿದ್ದಾರೆ. ಹಾಗೂ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ಹೆಸ್ಕಾಂ ಸಿಬ್ಬಂದಿ ಯುಎಚ್ ಐಡಿ ಅಂಟಿಸಿದ್ದಾರೆ. ಶನಿವಾರ ಕಾಡು ದಾರಿಯ ಮೂಲಕವೇ ಕಂದಾಯ ಇಲಾಖೆಯ ಅಧಿಕಾರಿಗಳು ಹೋಗಿ ಯುಎಚ್ ಐಡಿ ಇರುವ ಮನೆ ವಿವರ ಹಾಗೂ ವಿದ್ಯುತ್ ಸಂಪರ್ಕ ಇಲ್ಲದೇ ಇರುವ ಮನೆಗಳ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಹಾಗೂ ಸಮೀಕ್ಷೆ ಮಾಡುವಾಗ ಜಿಗಣೆ ಕಾಟದಿಂದ ನರಳಿದ್ದು ಹಾಗೂ ವಿದ್ಯುತ್ ಇಲ್ಲದೆ ಇರುವುದರಿಂದ ಚಾರ್ಜಿಂಗ್ ಬಲ್ಬ್ ಹಿಡಿದು ಸಮೀಕ್ಷೆ ಮಾಡಿದ್ದು ಕಂಡುಬಂದಿದೆ.
ಒಟ್ಟು 32 ಮನೆ ಗ್ರಾಮದಲ್ಲಿರುವುದು. ಮತ ಪಟ್ಟಿಯಲ್ಲಿ ಇರುವವರ ಸಂಖ್ಯೆ 130
ಕಮರಗಾಂವ ಗ್ರಾಮದ ಎಲ್ಲಾ ಮನೆಗಳ ದಾಖಲೆ ಸಂಗ್ರಹ ಮಾಡಲಾಗಿದೆ. ಗ್ರಾಮದಿಂದ ಗೋವಾದ ನೇತ್ರಾವಳಿಗೆ ವಾಹನದ ವ್ಯವಸ್ಥೆ ಮಾಡಿದ್ದು ಅಲ್ಲಿಯೂ ಸಮೀಕ್ಷೆ ಶಿಬಿರ ಆರಂಭಿಸಲ್ಲಿದ್ದೆವೆ ಎಂದು ಕಾರವಾರ ತಹಶಿಲ್ದಾರ ನಿಶ್ಚಲ ನರೋನಾ ಅವರು ತಿಳಿಸಿದರು.