ಮಹಾರಾಷ್ಟ್ರ ರಾಜ್ಯದ ನಾಗಪುರದ ದೀಕ್ಷಾ ಭೂಮಿಗೆ ಅಶೋಕ್ ವಿಜಯ ದಶಮಿ, ಧಮ್ಮ ಚಕ್ರ ಪರಿವರ್ತನ ದಿನಕ್ಕೆ ತೆರಳಲು ರೈಲಿನ ವ್ಯವಸ್ಥೆ ಮಾಡಬೇಕು ಎಂದು ದಲಿತ್ ಯೂನಿಟಿ ಮೂವ್ಮೆಂಟ್ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ನಾಗರಪುರದ ದೀಕ್ಷಾ ಭೂಮಿ ಭಗವಾನ್ ಬುದ್ಧ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಪವಿತ್ರ ಸ್ಥಳಗಳಾಗಿವೆ. ಜಿಲ್ಲೆಯಿಂದ ಅಪಾರ ಸಂಖ್ಯೆಯಲ್ಲಿ ಅಂಬೇಡ್ಕರ್ ಅವರ ಅನುಯಾಯಿಗಳು ಪ್ರತಿ ವರ್ಷ ತೆರಳುತ್ತಾರೆ. ಹೀಗಾಗಿ ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸಿ ಅನುಕೂಲ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಲಿತ್ ಯೂನಿಟಿ ಮೂವ್ಮೆಂಟ್ ರಾಜ್ಯ ಸಂಘಟನಾ ಸಂಚಾಲಕ ಗೌತಮ್ ಡಾಕುಳಗಿ, ಜಿಲ್ಲಾಧ್ಯಕ್ಷ ವಿನೀತ್ ಗಿರಿ ಹಾಗು ಮುಖಂಡರಾದ ಉತ್ತಮ್ ಕೆಂಪೆ, ರಾಜಶೇಖರ್ ಸೇರಿಕಾರ್ ಇದ್ದರು.
ಇದನ್ನೂ ಓದಿ : ಬೀದರ್ | ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಿ ತುರ್ತು ಪರಿಹಾರ ಘೋಷಿಸಲಿ : ಬಿ.ವೈ.ವಿಜಯೇಂದ್ರ