ಇಂಡಿ ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳಿಗೆ, ಕೃಷಿ ಜಮೀನುಗಳಿಗೆ ಶಾಸಕ ಯಶವಂತರಾಯ ಗೌಡ ಪಾಟೀಲ್ ಭೇಟಿ ನೀಡಿ ಭೀಮಾನದಿ ಪ್ರವಾಹಕ್ಕೆ ತುತ್ತಾದ ಸಂತ್ರಸ್ತರಿಗೆ ಆತ್ಮಸ್ಥರ್ಯ ತುಂಬಿದ್ದಾರೆ. ಧಾರಾಕಾರ ಮಳೆಯಿಂದ ಭೀಮಾನದಿ ತುಂಬಿ ಹರಿಯುತ್ತಿದ್ದು, ವಿಜಯಪುರದ ಹಲವು ಗ್ರಾಮಗಳ ಕೃಷಿ ಜಮೀನುಗಳಿಗೆ, ಹಲವು ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಗೊಳಗಾಗಿವೆ.
ಮಹಾರಾಷ್ಟ್ರದ ಸೀನಾ ನದಿಯ ನೀರು ಹಾಗೂ ವಾಡಿಕೆಗಿಂತ ಅಧಿಕ ಮಳೆ ಅವಾಂತರವೇ ಪ್ರವಾಹಕ್ಕೆ ಕಾರಣ ಎನ್ನಲಾಗಿದ್ದು, ಸಾಕಷ್ಟು ಜನರಿಗೆ ಪ್ರವಾಹದಿಂದ ಹಾಗೂ ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಕೆಲ ಗ್ರಾಮಗಳಲ್ಲಿ ಮನೆ ಕಟ್ಟಡಗಳು ಕುಸಿದು ಬಿದ್ದು ಕುಟುಂಬಗಳು ಬೀದಿ ಪಾಲಾಗಿವೆ.


“ನದಿ ದಂಡೆಯ ಮೇಲೆ ಹುಟ್ಟಿರುವ ಕಾರಣಕ್ಕೆ ಮೂರು ನಾಲ್ಕು ವರ್ಷಗಳಿಗೊಮ್ಮೆ ನಮ್ಮ ಬದುಕು ಕೊಚ್ಚಿಕೊಂಡು ಹೋಗುತ್ತದೆ. ಭಗವಂತ ಈ ಭಾಗದಲ್ಲಿ ಗಾಯದ ಮೇಲೆ ಬರೆ ಎಳದಂತೆ ಮಾಡಿದ್ದಾನೆ. ನಾನು ಕೂಡ ನಿಮ್ಮ ದುಃಖದಲ್ಲಿ ಕಷ್ಟದಲ್ಲಿ ಭಾಗಿಯಾಗಿರುವೆ. ಈಗಾಗಲೇ ಮುಖ್ಯಮಂತ್ರಿಗಳ ಹಾಗೂ ಸಚಿವರುಗಳೊಂದಿಗೆ ಈ ಭಾಗದ ಸಮಸ್ಯೆಗಳ ಕುರಿತು ಪತ್ರ ಬರೆದು ಅವರ ಗಮನಕ್ಕೆ ತಂದಿದ್ದೇನೆ. ಕೂಡಲೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯ, ಪರಿಹಾರವನ್ನು ಪ್ರಮಾಣಿಕವಾಗಿ ಒದಗಿಸಸಲಾಗುವುದು” ಎಂದು ಶಾಸಕ ಭರವಸೆ ನೀಡಿದರು.
ಇದನ್ನು ಓದಿ: ಇಂಡಿ | ಕಾರ್ಖಾನೆಗೆ ಆರ್ಥಿಕ ಸಹಾಯ ನೀಡುವಂತೆ ಸರ್ಕಾರಕ್ಕೆ ಮನವಿ: ಶಾಸಕ ಯಶವಂತರಾಯಗೌಡ ಪಾಟೀಲ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಪ್ಪ ಚನ್ನಗೊಂಡ, ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಸಿ ಸಾಹುಕಾರ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕೌಲಗಿ, ಗ್ಯಾರಂಟಿ ಅಧ್ಯಕ್ಷ ಪ್ರಶಾಂತ ಕಾಳೆ, ಜಿಲ್ಲಾ ಗ್ಯಾರೆಂಟಿ ಅಧ್ಯಕ್ಷ ಇಲಿಯಾಸ್ ಬೋರಮಣಿ, ಜಾವೆದ್ ಮೊಮೀನ್, ತಹಶೀಲ್ದಾರ ಬಿಎಸ್ ಕಡಕಬಾವಿ, ಡಿ ವೈ ಎಸ್ ಪಿ ಜಗದೀಶ, ತಾಲೂಕು ಪಂಚಾಯಿತಿ ಅಧಿಕಾರಿ ಭೀಮ ಶಂಕರ, ಅಶೋಕ ಪ್ಯಾಟಿ, ಸುಭಾಸ ಇಟ್ನಳ್ಳಿ, ತಾಲೂಕು ಕೃಷಿ ಅಧಿಕಾರಿ ಮಹದೇವಪ್ಪ ಏವೂರ, ತೋಟಗಾರಿಕಾ ಅಧಿಕಾರಿ ಎಚ್ ಎಸ್ ಪಾಟೀಲ, ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ, ಲೋಕಪಯೋಗಿ ಇಲಾಖೆ ಅಧಿಕಾರಿ ದಯಾನಂದ ಮಠ, ಜಿಲ್ಲಾ ಪಂಚಾಯಿತಿ ಎಇಇ ಶಿವಾಜಿ ದಯಾನಂದ ಮಠ, ಜಿಲ್ಲಾ ಪಂಚಾಯತಿ ಎ ಇ ಇ ಶ್ರೀಮತಿ ಮಜಾವರ,ಪುರಸಭೆ ಅಧಿಕಾರಿ ಸಿದ್ದರಾಮಯ್ಯ ಕಟ್ಟಿಮನಿ, ಪ್ರವಾಹ ಪೀಡಿತ ಪ್ರದೇಶದಲ್ಲಿ ತಾಲೂಕ ಅಧಿಕಾರಿಗಳು ಹಾಜರಿದ್ದರು.