“ಪತ್ರಿಕಾ ವರದಿಗೆ ಉತ್ತಮ ಓದು, ಬರವಣಿಗೆಯ ಕೌಶಲ್ಯ, ಮತ್ತು ಸರಳ ಭಾಷೆಯಲ್ಲಿ ಬಳಸುವ ಕಲೆ ರೂಡಿಸಿಕೊಳ್ಳಬೇಕು” ಎಂದು ಜಿಲ್ಲಾ ಮಟ್ಟದ ಪತ್ರಿಕಾ ಬರವಣಿಗೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಶರಣಪ್ಪ ಸಂಗನಾಳ ಹೇಳಿದರು.
ಗದಗ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಿನ್ನೆ ಸೋಮವಾರ ಆಯ್.ಕ್ಯೂ.ಎ.ಸಿ, ಎನ್.ಎಸ್.ಎಸ್ ಮತ್ತು ಈದಿನ.ಕಾಮ್ ಮಾಧ್ಯಮದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ಬರಹ ಕಾರ್ಯಗಾರವು ಪ್ರಾಂಶುಪಾಲರು ಪ್ರೊ. ಖಲಿಲ್ ಅಹಮ್ಮದ್ ಚಿಕ್ಕೇರೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
“ಪ್ರತಿಭೆ ಯಾರ ಸೂತ್ತು ಅಲ್ಲ. ವಿದ್ಯಾರ್ಥಿಗಳು ಪಾಠ ಆಲಿಸುವಿಕೆ, ಸೃಜನಶೀಲ, ಕ್ರಿಯಾಶೀಲ ಮನಸ್ಸು ಯಾವಾಗಲು ಹೊಸ ಹುಡುಕಾಟದಲ್ಲಿ ಇರುತ್ತದೆ. ಸಂವಹನ ಕಲೆ ಬಹಳ ಮುಖ್ಯ. ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಪತ್ರಕೆ ಉತ್ತಮ ಸಾಧನವಾಗಿದ್ದು, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ” ಎಂದು ಶರಣಪ್ಪ ಸಂಗನಾಳ ಹೇಳಿದರು.
ಧಾರವಾಡ ಜಿಲ್ಲಾ ವರದಿಗಾರರು ಶರಣಪ್ಪ ಗೋಲ್ಲರ ಮಾತನಾಡಿ, “ನಮಗೆ ಪತ್ರಿಕಾ ಕ್ಷೇತ್ರದಲ್ಲಿ ಬರವಣಿಗೆ ಮೂಲಕ ಅನೇಕರು ಬದಲಾವಣೆ ತಂದವರು ಸಾಕಷ್ಟು ಪತ್ರಕರ್ತರು ಇದ್ದಾರೆ. ಅಂತವರು ನಮಗೆ ಮಾದರಿ. ಪ್ರತಿಯೂಬ್ಬರು ಸಮಾಜದ ಏಳ್ಗೆಯಲ್ಲಿ ಪತ್ರಿಕೆ ಪಾತ್ರ ದೂಡ್ಡದು” ಎಂದು ಹೇಳಿದರು.
ಆಯ್.ಕ್ಯೂ ಎ.ಸಿ.ಸಂಯೋಜಕರು ಡಾ. ಶಿವಪ್ಪ ಎಂ ಕುರಿ ಅವರು ವಿದ್ಯಾರ್ಥಿಗಳಿಗೆ ಉದ್ದೇಶಿಸಿ. ವಿದ್ಯಾರ್ಥಿಗಳಿಗೆ ನಿಮ್ಮ ಓದುವ ಹವ್ಯಾಸ, ಬರವಣಿಗೆಯ ಕಲೆ ಮತ್ತು ಅಭಿವ್ಯಕ್ತಿ ಕ್ರಮವನ್ನು ಉನ್ನತ ಮಟ್ಟಕ್ಕೆ ಒಯುತ್ತದೆ. ಹಾಗಾಗಿ ನಿರಂತರ ಓದು ಅತ್ಯವಶ್ಯ” ಎಂದು ಹೇಳಿದರು.
ಡಾ. ಮಹದೇವ ವಡೇಕರ ಅವರು ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮತ್ತು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, “ವಿದ್ಯಾರ್ಥಿಗಳು ಭವಿಷ್ಯದ ರೂವಾರಿಗಳು. ನೀವು ಬರವಣಿಗೆ ಮೂಲಕ ಸಮಾಜಕ್ಕೆ ಕನ್ನಡಿಯಾದರೆ ನಿಮ್ಮಿಂದ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ” ಎಂದು ಹೇಳಿದರು.
ಕಾರ್ಯಕ್ರಮ ಆರಂಭದಲ್ಲಿ ಕು.ಸಂಧ್ಯಾ ಪ್ರಾರ್ಥನೆ ಹೇಳಿದರು. ಕಾರ್ಯಕ್ರಮದ ಅಧಿಕಾರಿಗಳಾದ ಡಾ. ಕಸ್ತೂರಿ ದಳವಾಯಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಡಾ.ರಾಮಚಂದ್ರ ಹೆಗಡೆ ವಂದನಾರ್ಪಣೆ ಹೇಳಿದರು. ಡಾ. ತಿಪ್ಪಣ್ಣಾ ಕೋಲ್ಕಾರ, ಶ್ರೀಮತಿ ಉಮಾದೇವಿ ಕಣವಿ, ಡಾ. ಕವಿತಾ ಜಂಗವಾಡ, ಡಾ. ಪ್ರಭುರಾಜ ಕ್ಯಾರಕೂಪ್ಪ, ಡಾ. ತಿಪ್ಪೇಸ್ವಾಮಿ ಉಪಸ್ಥತರಿದ್ದರು.ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಯಾಯಿತು.