ಕೊಡಗು | ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ; ಪೊಲೀಸರಿಂದ ‘ಬಿ’ ರಿಪೋರ್ಟ್ ಸಲ್ಲಿಕೆ

Date:

Advertisements

ಕೊಡಗು ಮೂಲದ ಬಿಜಿಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕಾರಣಕ್ಕೆ ಸಂಭಂದಿಸಿದಂತೆ ತನಿಖಾ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದು, ಸದರಿ ಪ್ರಕರಣದಲ್ಲಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾರವರ ಯಾವ ಪಾತ್ರವು ಇರುವುದಿಲ್ಲ ಎಂದು ಬೆಂಗಳೂರಿನ ಹೆಣ್ಣೂರು ಪೋಲೀಸರಿಂದ ‘ಬಿ’ ರಿಪೋರ್ಟ್ ಸಲ್ಲಿಕೆಯಾಗಿದೆ.

ಇದೇ ವರ್ಷ ಏಪ್ರಿಲ್.4 ರಂದು ಬೆಂಗಳೂರಿನ ನಾಗಾವಾರದ ಕೋಣೆಯೊಂದರಲ್ಲಿ ಕೊಡಗು ಮೂಲದ ಬೆಂಗಳೂರಿನ ನಿವಾಸಿ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಶರಣಾಗಿದ್ದು. ವಾಟ್ಸಾಪ್ ನಲ್ಲಿ ತನ್ನ ಸಾವಿಗೆ ಕಾಂಗ್ರೆಸ್ ಮುಖಂಡರಾದ ತೆನ್ನಿರ ಮೈನಾ, ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಕಾರಣ ಎಂದು ಸಂದೇಶ ಕಳಿಸಿರುವುದಾಗಿ, ವಿನಯ್ ಸಹೋದರ ಜೀವನ್ ಎಂಬುವವರು ಹೆಣ್ಣೂರು ಠಾಣೆಯಲ್ಲಿ ದೂರು ಸಲ್ಲಿಸುತ್ತಾರೆ.

ದೂರಿನ ಅನ್ವಯ ಹೆಣ್ಣೂರು ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 352 (ಶಾಂತಿ ಭಂಗ), 351 (ಅಪರಾಧಿಕ ಬೆದರಿಕೆ), 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೋಲೀಸರು ಬೆಳಿಗ್ಗೆ 10-30 ರ ಸುಮಾರಿನಲ್ಲಿ ಸ್ಥಳಕ್ಕೆ ಭೇಟಿ ನೀಡಿ 12-00 ಗಂಟೆಯವರೆಗೆ ಪಂಚನಾಮೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುತ್ತಾರೆ.

ಶವಗಾರದ ಮುಂದೆ ಏಪ್ರಿಲ್.5 ರಂದು ಪ್ರತಿಭಟನೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ಹಾಗೂ ಇನ್ನಿತರ ಬಿಜೆಪಿ ಮುಖಂಡರು ಶಾಸಕರಾದ ಎ.ಎಸ್.ಪೊನ್ನಣ್ಣ ಮತ್ತು ಡಾ.ಮಂತರ್ ಗೌಡ ರವರ ಹೆಸರನ್ನು ಸೇರಿಸಿಕೊಂಡು ತನಿಖೆ ನಡೆಸಬೇಕೆಂದು ಮತ್ತೊಂದು ದೂರು ನೀಡಿದ್ದರು.

ವಿನಯ್ ಸೋಮಯ್ಯ ಅವರಿಗೆ ಸೇರಿದ ಮೊಬೈಲ್, ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆದು ಎಫ್ ಎಸ್ ಎಲ್ ಪರೀಕ್ಷೆಗೆ ಕಳುಹಿಸಿ, ಆರೋಪಿಗಳ ಕರೆ ದಾಖಲೆ ವಿವರ (ಸಿಡಿಆರ್) ವಿವರಗಳನ್ನು ವಿಧಿ ವಿಜ್ಞಾನ ವಿಶ್ಲೇಷಣೆ ಮೂಲಕ ಪೋಲೀಸರು ತನಿಖೆ ಆರಂಭಿಸಿದ್ದರು. ವಿನಯ್ ಸೋಮಯ್ಯ ನವರ ಪೋನ್ ಕರೆಗಳು, ಸಂದೇಶಗಳು, ವಾಟ್ಸಾಪ್ ಕರೆಗಳು ಸೇರಿದಂತೆ ಒಂದು ವರ್ಷ ದಾಖಲೆಗಳನ್ನು ಕಲೆ ಹಾಕಿದ್ದಾರೆ. ದಿನಾಂಕ-06-05-2025 ರಂದು ತೆನ್ನಿರ ಮೈನಾ, ದಿನಾಂಕ- 22-05-2025 ರಂದು ವಿನಯ್ ಪತ್ನಿ ಶೋಭಿತ, ದಿನಾಂಕ-21-07-2025 ರಂದು ಎ.ಎಸ್.ಪೊನ್ನಣ್ಣ, ದಿನಾಂಕ-31-7-2025 ರಂದು ಡಾ. ಮಂತರ್ ಗೌಡರವರನ್ನು ಪೊಲೀಸರು ವಿಚಾರಣೆ ನಡೆಸಿರುತ್ತಾರೆ. ಮೃತಪಟ್ಟ ವ್ಯಕ್ತಿಗೆ ಯಾವುದೇ ಬೆದರಿಕೆಗಳು ಬಂದಿರುವುದಿಲ್ಲ ಎನ್ನುವುದನ್ನು ಪತ್ತೆ ಹಚ್ಚಲಾಗಿಲ್ಲ.

ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ, ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರಿಗೆ ವಿನಯ್ ಸೋಮಯ್ಯ ಪರಿಚಯ ಇಲ್ಲದಿರುವುದು ತನಿಖೆಯಿಂದ ತಿಳಿದು ಬಂದಿದೆ. ವಿನಯ್ ಪತ್ನಿಯವರು ಸಹ ಮೇಲ್ಕಂಡ ಮೂವರು ತನಗೂ ಮತ್ತು ತನ್ನ ಪತಿ ವಿನಯ್ ಗೆ ಅಪರಿಚಿತರು ಪರಿಚಿತರಲ್ಲ ಎಂದು ಹೇಳಿಕೆ ನೀಡುತ್ತಾರೆ.

ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ ಪೋಲೀಸರು ವಿನಯ್ ಪತ್ನಿ ಹೇಳಿಕೆ, ದೂರುದಾರರು ನೀಡಿದ ದೂರಿಗೆ ಸಂಭಂದಿಸಿದಂತೆ ಯಾವುದೇ ಸಾಕ್ಷ್ಯಗಳನ್ನು ನೀಡದೇ ಇರುವುದು, ವಿನಯ್ ಸಾವಿಗೂ ಮುನ್ನಾ ಒಂದು ವರ್ಷದ ಹಿಂದಿನ ಎಲ್ಲಾ ಚಟುವಟಿಕೆಗಳು, ಆತನ ಆಂಡ್ರಾಯ್ಡ್ ಮೊಬೈಲ್ ಮತ್ತು ಲ್ಯಾಪ್ ಟಾಪ್ ಗಳ ಎಫ್.ಎಸ್.ಎಲ್ ವರದಿಗಳು ಮತ್ತು ಇತರ ತನಿಖೆಯಲ್ಲಿ ಕಂಡು ಬಂದ ವಿಷಯಗಳ ಆಧಾರದಲ್ಲಿ ಸುಳ್ಳು ಆರೋಪ ಸಲ್ಲಿಸಲಾಗಿದೆ ಎಂದು ಆಗಸ್ಟ್.11 ರಂದು ದೂರುದಾರ ಜೀವನ್ ರವರಿಗೆ ‘ಬಿ’ ರಿಪೋರ್ಟ್ ಸಲ್ಲಿಸುವ ಕುರಿತು ‌ನೋಟೀಸ್ ಜಾರಿ ಮಾಡಿ ಆಕ್ಷೇಪಣೆಯಿದ್ದಲ್ಲಿ ವಾರದ ಕಾಲಾವಕಾಶದಲ್ಲಿ ಸಲ್ಲಿಸಲು ಸೂಚಿಸುತ್ತಾರೆ.

ದೂರುದಾರರು ಯಾವುದೇ ಆಕ್ಷೇಪಣೆ ಸಲ್ಲಿಸದ ಹಿನ್ನಲೆಯಲ್ಲಿ ಪೊಲೀಸರು ಘನ ನ್ಯಾಯಾಲಯಕ್ಕೆ ಅಂತಿಮ ‘ಬಿ’ ರಿಪೋರ್ಟ್ ಸಲ್ಲಿಸುತ್ತಾರೆ.

ಈ ಸುದ್ದಿ ಓದಿದ್ದೀರಾ? ಕೊಡಗು | ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ : ಶಾಸಕ ಎ ಎಸ್ ಪೊನ್ನಣ್ಣ

ಶಾಸಕರಾದ ಎ. ಎಸ್. ಪೊನ್ನಣ್ಣ ರಾಜಕೀಯ ಕಾರಣಕ್ಕಾಗಿ ತಮ್ಮ ಮೇಲೆ, ಡಾ. ಮಂತರ್ ಗೌಡ ಹಾಗೂ ತೆನ್ನಿರ ಮೈನಾ ರವರ ಮೇಲೆ ಅಪಪ್ರಚಾರ ಮಾಡಿ, ಸುಳ್ಳು ಮಾಹಿತಿ ಮೂಲಕ ದೂರು ನೀಡಿದ ಬಿಜೆಪಿಯ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸೇರಿದಂತೆ ಈ ಕುತಂತ್ರದಲ್ಲಿ ಭಾಗಿಯಾದ ಎಲ್ಲಾ ಬಿಜೆಪಿ ನಾಯಕರು ಕ್ಷಮೆಯಾಚನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

Download Eedina App Android / iOS

X