ವಿವಾದಾತ್ಮಕ ಎಸ್‌ಐಆರ್ ನಂತರ ಬಿಹಾರದ ಅಂತಿಮ ಮತದಾರರ ಪಟ್ಟಿ ಪ್ರಕಟ

Date:

Advertisements

ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಮಂಗಳವಾರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. 22 ವರ್ಷಗಳ ಬಳಿಕ ನಡೆಸಲಾದ ‘ವಿಶೇಷ ತೀವ್ರ ಪರಿಷ್ಕರಣೆ ‘(ಎಸ್‌ಐಆರ್) ಯೋಜನೆ ನಂತರ ಬಿಡುಗಡೆಗೊಂಡ ಈ ಪಟ್ಟಿಯು ಕರಡು ಪಟ್ಟಿಗೆ ಹೋಲಿಸಿದರೆ ಅಂತಿಮ ಮತದಾರರ ಪಟ್ಟಿಯಲ್ಲಿ ನೋಂದಾಯಿತ ಮತದಾರರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

ಪಾಟ್ನಾ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಈಗ 48,15,294ಕ್ಕೆ ಏರಿಕೆಯಾಗಿದೆ. ಆಗಸ್ಟ್ 1ರಂದು ಪ್ರಕಟಗೊಂಡ ಕರಡು ಪಟ್ಟಿಯಲ್ಲಿ 46,51,694 ಹೆಸರುಗಳಿದ್ದು, ಆಕ್ಷೇಪ–ದಾವೆ ಪ್ರಕ್ರಿಯೆ ಬಳಿಕ 1,63,600 ಹೊಸ ಹೆಸರುಗಳು ಸೇರ್ಪಡೆಯಾಗಿವೆ.

ರಾಜ್ಯ ಮಟ್ಟದ ಕರಡು ಪಟ್ಟಿಯಲ್ಲಿ 7.24 ಕೋಟಿ ಹೆಸರುಗಳಿದ್ದು, ಹಿಂದಿನ 7.89 ಕೋಟಿಗೆ ಹೋಲಿಸಿದರೆ 65.63 ಲಕ್ಷ ಹೆಸರುಗಳು ತೆಗೆದುಹಾಕಲ್ಪಟ್ಟಿದ್ದವು. ಆಕ್ಷೇಪ ಅವಧಿಯಲ್ಲಿ 16.93 ಲಕ್ಷ ಜನರು ಸೇರಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದು, 2.17 ಲಕ್ಷ ಜನರು ತಮ್ಮ ಹೆಸರು ತೆಗೆದುಹಾಕಲು ಮನವಿ ಮಾಡಿದ್ದಾರೆ. ಕೇವಲ ಆಗಸ್ಟ್ 1ರಿಂದ ಸೆಪ್ಟೆಂಬರ್ 1ರೊಳಗೆ 16.56 ಲಕ್ಷ ಜನರು ಹೊಸ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ.

ಚುನಾವಣಾ ಆಯೋಗದ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮತದಾರರು ತಮ್ಮ ವಿವರಗಳನ್ನು ಆಯೋಗದ ಅಧಿಕೃತ ಜಾಲತಾಣದಲ್ಲಿ ಪರಿಶೀಲಿಸಬಹುದು ಎಂದು ತಿಳಿಸಿದ್ದಾರೆ. ನಿಯಮಾನುಸಾರ ನಾಮಪತ್ರ ಸಲ್ಲಿಕೆಯ ಅಂತಿಮ ದಿನಾಂಕಕ್ಕಿಂತ 10 ದಿನಗಳವರೆಗೆ ಹೊಸ ಹೆಸರುಗಳನ್ನು ಸೇರಿಸಿಕೊಳ್ಳಲು ಅವಕಾಶವಿದ್ದು, ಅಂತಹ ಹೆಸರುಗಳನ್ನು ಪೂರಕ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ತೇಲುತ್ತಿರುವ ಉತ್ತರ ಕರ್ನಾಟಕ; ಹಾರಾಡುತ್ತಿರುವ ಅಧಿಕಾರಸ್ಥರು

ಈ ಯೋಜನೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿದ್ದು, ಬಡವರು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಸಾಮೂಹಿಕವಾಗಿ ಮತದಾರರ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಆರ್‌ಜೆಡಿಯ ತೇಜಸ್ವಿ ಯಾದವ್ “ಮತದಾರ ಹಕ್ಕು ಯಾತ್ರೆ” ನಡೆಸಿ ಇದನ್ನು “ಮತ ಕಳ್ಳತನ” ಎಂದು ಕರೆದಿದ್ದಾರೆ.

ಪ್ರಕರಣ ಸುಪ್ರೀಂ ಕೋರ್ಟ್‌ಗೂ ತಲುಪಿದ್ದು, ಅಕ್ರಮಗಳು ಕಂಡುಬಂದರೆ ಮತದಾರರ ಪಟ್ಟಿಯನ್ನೇ ರದ್ದುಪಡಿಸಲು ಹಿಂಜರಿಯುವುದಿಲ್ಲ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.

ಬಿಹಾರ ವಿಧಾನಸಭೆಯ ಅವಧಿ ನವೆಂಬರ್ 22ರಂದು ಮುಕ್ತಾಯವಾಗಲಿದ್ದು, ಅಂತಿಮ ಮತದಾರರ ಪಟ್ಟಿ ಹೊರಬಂದಿರುವ ಹಿನ್ನಲೆಯಲ್ಲಿ ಚುನಾವಣಾ ವೇಳಾಪಟ್ಟಿ ಅಕ್ಟೋಬರ್ 6 ಅಥವಾ 7ರಂದು ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೆಪೋ ದರ ಶೇ. 5.5 ಕ್ಕೆ ಸ್ಥಿರವಾಗಿರಿಸಿದ ಆರ್‌ಬಿಐ; ಸತತ ಎರಡನೇ ಬಾರಿಯೂ ಯಥಾಸ್ಥಿತಿ

ಶೇ.5.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

ಎಲ್ಲರ ತಾಯಿ ಸಾಯುತ್ತಾರೆ; ರಜೆ ಕೇಳಿದ್ದಕ್ಕೆ ಮೇಲಧಿಕಾರಿಯ ಉಡಾಫೆಯ ಉತ್ತರ

ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ರಜೆ ಕೇಳಿದ ಬ್ಯಾಂಕ್ ಉದ್ಯೋಗಿಗೆ, “ಎಲ್ಲರ ತಾಯಿ...

ಕಾಂಗ್ರೆಸ್‌ನ ‘ಎಕ್ಸ್’ ಖಾತೆಯಲ್ಲಿ ಪ್ರಚೋದನಕಾರಿ ಪೋಸ್ಟ್ – ಆರೋಪ; ಎಫ್‌ಐಆರ್ ದಾಖಲು

ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್‌ನ ಅಧಿಕೃತ 'ಎಕ್ಸ್‌' ಖಾತೆಯಲ್ಲಿ ಆಕ್ಷೇಪಾರ್ಯ ಪೋಸ್ಟ್‌ ಮಾಡಲಾಗಿತ್ತು...

Download Eedina App Android / iOS

X