ಅಕ್ಟೋಬರ್ 2 ರಂದು ನಡೆಯುವ ಕರ್ನಾಟಕದ ನಾಡ ಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮತ್ತು ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರದರ್ಶನ ಕೊಡಲು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಿರ್ತಿಯ ಅಂಕದಮನೆ ಜಾನಪದ ಕಲಾ ತಂಡ ಆಯ್ಕೆ ಆಗಿದೆ.
ಸುಮಾರು ಹದಿನೈದು ಜನರನ್ನೊಳಗೊಂಡ ಕರಾವಳಿ ಜಿಲ್ಲೆಯ ಜಾನಪದ ಪ್ರಕಾರಗಳಲ್ಲಿ ಒಂದಾದ “ಕಂಗೀಲು ನ್ರತ್ಯ” ವನ್ನು ಜಂಬೂಸವಾರಿ ಮೆರವಣಿಗೆಯಲ್ಲಿ ಹಲವಾರು ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿಗಳನ್ನು ಗಳಿಸಿದ ಅಂಕದಮನೆ ತೆಂಕು ಬಿರ್ತಿ ಬ್ರಹ್ಮಾವರ ತಂಡ ಪ್ರಸ್ತುತ ಪಡಿಸಲಿದೆ.
