“ಮಾದಕ ವಸ್ತುಗಳ ಸೇವನೆ ಹಾಗೂ ಡಿಜಿಟಲ್ ವ್ಯಸನದಿಂದ ಯುವಕರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಯುವಕರಲ್ಲಿ ಜಾಗೃತಿ ಮೂಡಿಸಲು ‘ಮಾದಕ ಮುಕ್ತ ಸಮಾಜ ಮತ್ತು ಡಿಜಿಟಲ್ ಸ್ವಾತಂತ್ರ್ಯ’ ಕುರಿತು ಜಿಲ್ಲಾ ಮಟ್ಟದ ಯುವ ಸಮಾವೇಶವನ್ನು ನಾಳೆ(ಅಕ್ಟೊಬರ್ 3) ದಿನ ರಾಣಿಬೆನ್ನೂರ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ” ಎಂದು ಸೊಲಿಡಾರಿಟಿ ಯೂತ್ ಮೂವಮೆಂಟ್ ಯುವ ಮುಖಂಡರು ಜೇಬ್ರೇನ್ ಖಾನ್ ಅವರು ಹೇಳಿದರು.
ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದ ಜಮಾತೆ ಇಸ್ಲಾಮಿಕ್ ಹಿಂದ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಈ ಯುವ ಸಮಾವೇಶವು ನಾಳೆ ಸಂಜೆ 5ಕ್ಕೆ ರಾಣಿಬೆನ್ನೂರು ಪಟ್ಟಣದ ಟಿಪ್ಪು ಸುಲ್ತಾನ್ ಭವನದಲ್ಲಿ ನಡೆಯಲಿದೆ.

“ಉದ್ಘಾಟಕರಾಗಿ ಸರ್ಕಾರಿ ಮುಖ್ಯ ಸಚೇತಕರು ಹಾಗೂ ಕರ್ನಾಟಕ ವಿಧಾನ ಪರಿಷತ್ತು ಸದಸ್ಯರು ಸಲೀಂ ಅಹ್ಮದ್, ಮುಖ್ಯ ಅತಿಥಿಗಳು ಮನೋವೈದ್ಯ ಸಲಹೆಗಾರರು ಡಾ ಅಫ್ತಾಬ್ ಮಾಲ್ದಾರ್, ರಿಫಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷರು ಹಾಗೂ ಮುಖ್ಯ ಭಾಷಣಕಾರರು ಸೈಯದ್ ಮುಮ್ತಾಜ್ ಮನ್ಸೂರಿ ಹಾಗೂ ಸೊಲಿಡಾರಿಟಿ ಯೂತ್ ಮೂವಮೆಂಟ್ ರಾಜ್ಯಾಧ್ಯಕ್ಷರು ಡಾ. ನಸೀಮ್ ಅಹ್ಮದ್ ಭಾಗವಹಿಸಲಿದ್ದಾರೆ” ಎಂದು ಹೇಳಿದರು.
“ಈ ಯುವ ಸಮಾವೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಯ ಎಲ್ಲ ಯುವಕರು ಭಾಗವಹಿಸಬೇಕು” ಎಂದು ಕರೆ ನೀಡಿದರು.