ವಿದ್ಯಾರ್ಥಿ ಕಣ್ಣಲ್ಲಿ ಗಾಂಧೀಜಿ ಬಯಸಿದ ನ್ಯಾಯಸಮ್ಮತ ತತ್ವದ ರಾಜಕೀಯ ವ್ಯವಸ್ಥೆ

Date:

Advertisements
ಸ್ವಾತಂತ್ರ್ಯೋತರ ಭಾರತ ಹೇಗಿರಬೇಕು ಎಂಬುದರ ಕುರಿತು ಗಾಂಧೀಜಿಯ ಕನಸು ವಿಭಿನ್ನವಾಗಿದ್ದು, ರಾಜಕೀಯವು ಶುದ್ಧತೆ, ಪಾರದರ್ಶಕತೆ ಮತ್ತು ನೈತಿಕತೆಯ ಆಧಾರದ ಮೇಲೆ ಸಾಗಬೇಕೆಂದು ಅವರು ಬಯಸಿದ್ದರು. ಈ ಕನಸಿನ ಹೃದಯ ಭಾಗವೇ ನ್ಯಾಯಸಮ್ಮತ ತತ್ವ.

ಮಹಾತ್ಮ ಗಾಂಧೀಜಿಯವರದು ಭಾರತದ ಇತಿಹಾಸದಲ್ಲಿ ಅಮರ ವ್ಯಕ್ತಿತ್ವ. ಅವರು ನೈತಿಕ ಮೌಲ್ಯಗಳ ಬೋಧಕ, ಸಮಾಜ ಸುಧಾರಕ ಮತ್ತು ಶಾಂತಿಯ ಸಂಕೇತ. ಗಾಂಧಿ ರಾಜಕೀಯವನ್ನು ಸ್ವಾರ್ಥ ಸಾಧನೆಯ ಸಾಧನವನ್ನಾಗಿ ಕಾಣಲಿಲ್ಲ. ಬದಲಿಗೆ ಜನಸೇವೆಯ ಸತ್ಯ ಸಂಗತಿಯ ಮತ್ತು ಅಹಿಂಸೆಯ ಮಾರ್ಗವಾಗಿ ಕಂಡವರು. ಸ್ವಾತಂತ್ರ್ಯೋತರ ಭಾರತ ಹೇಗಿರಬೇಕು ಎಂಬುದರ ಕುರಿತು ಗಾಂಧೀಜಿಯ ಕನಸು ವಿಭಿನ್ನವಾಗಿದ್ದು, ರಾಜಕೀಯವು ಶುದ್ಧತೆ, ಪಾರದರ್ಶಕತೆ ಮತ್ತು ನೈತಿಕತೆಯ ಆಧಾರದ ಮೇಲೆ ಸಾಗಬೇಕೆಂದು ಅವರು ಬಯಸಿದವರು. ಈ ಕನಸಿನ ಹೃದಯ ಭಾಗವೇ ನ್ಯಾಯಸಮ್ಮತ ತತ್ವ.
ಟ್ರಸ್ಟಿಶಿಪ್ ಎಂದರೆ ನ್ಯಾಯಸಮ್ಮತ ತತ್ವ. ಈ ತತ್ವದ ಪ್ರಕಾರ ಶ್ರೀಮಂತರ ಆಸ್ತಿ ಮತ್ತು ಸಂಪತ್ತು ಅವರಿಗೆ ಮಾತ್ರವಲ್ಲ, ಸಂಪೂರ್ಣ ಸಮಾಜಕ್ಕೆ ಸೇರಿದಂತದ್ದು. ಶ್ರೀಮಂತರು ಕೇವಲ ನ್ಯಾಸಿಗಳು ಅಂದರೆ ಆಸ್ತಿಯ ನಿರ್ವಾಹಕರು. ಅದನ್ನು ತಮ್ಮ ಸ್ವಾರ್ಥಕ್ಕಾಗಿ ಅಲ್ಲ, ಬಡವರ ಮತ್ತು ಸಮಾಜದ ಹಿತಕ್ಕಾಗಿ ಬಳಸುವವರಾಗಿರಬೇಕು.

ಗಾಂಧೀಜಿಯವರ ದೃಷ್ಟಿಯಲ್ಲಿ ಆಸ್ತಿ ಎಂದರೆ ದೇವರಿಂದ ದೊರೆತ ವರ. ಅದನ್ನು ಸ್ವಂತ ಸುಖಕ್ಕಾಗಿ ಮಾತ್ರ ಬಳಸಿದರೆ ಅದು ದುರುಪಯೋಗ ಎನಿಸಿಕೊಳ್ಳುತ್ತದೆ. ಶ್ರೀಮಂತರು ತಮ್ಮ ಆಸ್ತಿಯನ್ನು ಬಡವರ ಹಿತಕ್ಕಾಗಿ ಬಳಸುವ ಜವಾಬ್ದಾರಿ ಹೊಂದಿದ್ದರೆ, ಅದರಿಂದ ಆರ್ಥಿಕ ಅಸಮಾನತೆಯ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಬಹುದೆಂಬ ನಂಬಿಕೆಯನ್ನು ಗಾಂಧಿ ಅವರು ಹೊಂದಿದ್ದರು. ಶ್ರೀಮಂತರ ಮನಸ್ಸಿನ ಪರಿವರ್ತನೆಯ ಮೂಲಕ ಸಮಾನತೆಯನ್ನು ಸಾಧಿಸಬಹುದೆಂದು ಅವರು ನಂಬಿದ್ದರು.

ಸತ್ಯ ಮತ್ತು ಅಹಿಂಸೆ: ಗಾಂಧೀಜಿಯವರ ಅಭಿಪ್ರಾಯದಲ್ಲಿ ರಾಜಕೀಯವು ಸುಳ್ಳು, ಮೋಸ, ಕುತಂತ್ರ, ಹಿಂಸೆ ಇವುಗಳಿಂದ ಮುಕ್ತವಾಗಿರಬೇಕು. ರಾಜಕೀಯ ಎಂದರೆ ಜನರ ಸೇವೆ ಮಾಡುವುದು ಎಂದಾಗಿದೆ. ಸತ್ಯ ಮತ್ತು ಅಹಿಂಸೆಯ ಆಧಾರದ ಮೇಲೆ ನಡೆಯುವ ರಾಜಕೀಯ ಮಾತ್ರ ಶಾಶ್ವತ ಶಾಂತಿ ತರುವುದು.

Advertisements

ಜನರ ಪಾಲ್ಗೊಳ್ಳುವಿಕೆ: ರಾಜಕೀಯ ಜನರಿಂದ ದೂರವಿರಬಾರದು, ಜನರಿಂದ ಜನರಿಗಾಗಿ ಜನರ ಆಡಳಿತ ಎಂಬ ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನೇ ಗಾಂಧೀಜಿಯವರು ಬೋಧಿಸಿದರು.

ನೈತಿಕತೆ ಆಧಾರಿತ ನಾಯಕತ್ವ: ಜನರಿಂದ ದೊರೆತ ಅಧಿಕಾರವನ್ನು ಅವರ ಒಳಿತಿಗಾಗಿ ಬಳಸಬೇಕು. ಅಧಿಕಾರ ಇದ್ದರೆ ಹೊಣೆಗಾರಿಕೆ ಸ್ವಾರ್ಥವಲ್ಲ ಎಂಬ ನಿಲುವನ್ನು ಗಾಂಧೀಜಿಯವರು ಬೋಧಿಸಿದರು.

ಆರ್ಥಿಕ ಸಮಾನತೆ: ಸಮಾಜದಲ್ಲಿ ಅತಿಯಾಗಿ ಶ್ರೀಮಂತರಾಗುವುದು ಒಂದು ಕಡೆಯಾದರೆ, ಬಡತನದಲ್ಲಿ ನರಳುವುದು ಇನ್ನೊಂದು ಕಡೆ. ಈ ಅಸಮಾನತೆಯನ್ನು ಗಾಂಧೀಜಿಯವರು ಅಸಹ್ಯ ಎಂದು ಕರೆದರು.

ಗ್ರಾಮ ಸ್ವರಾಜ್ಯ: ಭಾರತದ ಆತ್ಮವು ಗ್ರಾಮಗಳಲ್ಲಿ ನೆಲೆಸಿದೆ ಎಂದು ಗಾಂಧೀಜಿ ಹೇಳಿದರು. ಅವರ ಕನಸಿನ ಭಾರತದಲ್ಲಿ ಪ್ರತಿ ಗ್ರಾಮವು ಸ್ವಾವಲಂಬಿ ಘಟಕವಾಗಿರಬೇಕೆಂದು ಬಯಸಿದರು.

ಇಂದಿನ ಸಮಾಜದಲ್ಲಿ ಆರ್ಥಿಕ ಅಸಮಾನತೆ ಭ್ರಷ್ಟಾಚಾರ ಅಧಿಕಾರ ದುರುಪಯೋಗ ಪಕ್ಷಪಾತವು ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಒಬ್ಬರ ಕೈಯಲ್ಲಿ ಕೋಟಿ ಆಸ್ತಿ ಕೇಂದ್ರೀಕರಿಸಿದರೆ ಇನ್ನೊಬ್ಬರು ಅನ್ನವಿಲ್ಲದೆ ನರಳುತ್ತಿರುವುದು ದುರಂತ. ಇಂದಿನ corporate social responsibility ಎಂಬ ಕಲ್ಪನೆ ಗಾಂಧೀಜಿಯವರ ನ್ಯಾಯಸಮ್ಮತ ತತ್ವದ ಪ್ರತಿಫಲವಾಗಿದೆ. ಉದ್ಯಮಿಗಳು ತಮ್ಮ ಲಾಭದ ಒಂದು ಭಾಗವನ್ನು ಶಿಕ್ಷಣ ಆರೋಗ್ಯ ಪರಿಸರ ಸಂರಕ್ಷಣೆ ಮುಂತಾದ ಸಾರ್ವಜನಿಕ ಹಿತಕ್ಕಾಗಿ ಮೀಸಲಿಡಬೇಕು ಎನ್ನುವುದನ್ನು ಹೇಳುತ್ತದೆ.

ಇದನ್ನು ಓದಿದ್ದೀರಾ?: ಬಾಪೂ ಎಂಬ ಪವಾಡದ ಅನ್ವೇಷಣೆ…

ಗಾಂಧೀಜಿಯವರ ಕನಸು ನನಸಾಗಲು ಕೆಲವು ಅಡೆತಡೆಗಳಿವೆ. ನೈತಿಕ ಮೌಲ್ಯಗಳ ಕೊರತೆ. ಹಣ ಮತ್ತು ಅಧಿಕಾರದ ಲಾಲಸೆಯ ಆಳ್ವಿಕೆ. ಭ್ರಷ್ಟಾಚಾರದ ಜಾಲ. ಪಕ್ಷಪಾತ ಜಾತಿ ಮತದ ಭೇದ. ಗ್ರಾಮ ಸ್ವರಾಜ್ಯದ ಕನಸು ಇನ್ನೂ ಸಾಕಾರ ಆಗದಿರುವುದು.

ಗಾಂಧೀಜಿಯವರ ರಾಜಕೀಯ ಶೈಲಿ ಇತರ ನಾಯಕರಿಗಿಂತ ಸಂಪೂರ್ಣ ವಿಭಿನ್ನವಾಗಿದ್ದು, ರಾಜಕೀಯವನ್ನು ಕೇವಲ ಅಧಿಕಾರ ಪಡೆಯುವ ಸಾಧನವೆಂದು ನೋಡದೆ ಜನರ ದೈನಂದಿನ ಜೀವನದೊಂದಿಗೆ ಜೋಡಿಸಿದರು. ಖಾದಿ ನೂಲು ನೇಯುವುದು, ವಿದೇಶಿ ಸರಕುಗಳನ್ನು ಬಹಿಷ್ಕರಿಸುವುದು, ಉಪ್ಪು ತಯಾರಿಸುವುದು ಮುಂತಾದ ಸರಳ ಕ್ರಿಯೆಗಳ ಮೂಲಕ ಜನರನ್ನು ಹೋರಾಟಕ್ಕೆ ಕರೆದೊಯ್ದಿದ್ದರು. ಇದರಿಂದ ಸಾಮಾನ್ಯ ರೈತ ಕಾರ್ಮಿಕ ಮಹಿಳೆ ವಿದ್ಯಾರ್ಥಿ ಎಲ್ಲರೂ ರಾಜಕೀಯ ಚಳವಳಿಯ ಭಾಗವಾಗಲು ಸಾಧ್ಯವಾಯಿತು. ಹೀಗಾಗಿ ರಾಜಕೀಯವು ಶ್ರೀಮಂತ ವರ್ಗದ ಮಿತಿಯಿಂದ ಹೊರಬಂದು ನಿಜವಾದ ಜನ ಚಳವಳಿಯಾಗಿ ಬೆಳೆದಿತ್ತು.

ಗಾಂಧೀಜಿಯ ಸಾಮಾಜಿಕ ಸುಧಾರಣೆ ಮತ್ತು ರಾಜಕೀಯವು ಅಸ್ಪೃಶ್ಯತೆ ವಿರುದ್ಧದ ಹೋರಾಟವಾಗಿತ್ತು. ಹರಿಜನ ಸೇವೆ ಎಂದು ಹೆಸರು ಕೊಟ್ಟು ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನ ಪಟ್ಟರು. ಮಹಿಳೆಯರನ್ನು ಹೋರಾಟದಲ್ಲಿ ಮುಂಚೂಣಿಗೆ ತಂದರು.

ಅಂತಾರಾಷ್ಟ್ರೀಯ ಪ್ರಭಾವ: ಗಾಂಧೀಜಿಯವರ ನ್ಯಾಯ ಸಮ್ಮತ ರಾಜಕೀಯವು ಜಗತ್ತಿನ ಗಮನ ಸೆಳೆದಿತ್ತು. ಅವರ ಅಹಿಂಸಾತ್ಮಕ ಹೋರಾಟಕ್ಕೆ ಅಮೆರಿಕಾದ ಮಾರ್ಟಿನ್ ಲೂಥರ್ ಕಿಂಗ್, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಮುಂತಾದ ನಾಯಕರು ಪ್ರೇರಣೆಯಾದರು. ಹೀಗಾಗಿ ಗಾಂಧೀಜಿಯವರ ರಾಜಕೀಯವು ಕೇವಲ ಭಾರತದಷ್ಟೇ ಅಲ್ಲ, ವಿಶ್ವದಾದ್ಯಂತ ಶಾಂತಿಯುತ ಹೋರಾಟಕ್ಕೆ ದಾರಿ ತೋರಿಸಿತು.

ಗಾಂಧೀಜಿಯವರ ನ್ಯಾಯಸಮ್ಮತ ತತ್ವ ರಾಜಕೀಯ ವ್ಯವಸ್ಥೆ ಸಾಕಾರಗೊಳ್ಳಲು ಯುವಕರ ಪಾತ್ರ ಅತ್ಯಂತ ಮುಖ್ಯ. ಅವರ ತತ್ವಗಳನ್ನು ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಜಕೀಯದಲ್ಲಿ ಶುದ್ಧತೆ ನೈತಿಕತೆ ಪಾರದರ್ಶಕತೆ ತರಲು ತೊಡಗಿಸಿಕೊಳ್ಳಬೇಕು. ಸಮಾಜ ಸೇವೆ ಸ್ವಯಂ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಗಾಂಧೀಜಿಯವರ ತತ್ವವನ್ನು ಬದುಕಿನಲ್ಲಿ ತೋರಿಸಬೇಕು. ದೇಶದ ಭವಿಷ್ಯವನ್ನು ನಿರ್ಮಿಸುವ ಶಕ್ತಿಯು ಯುವಕರಲ್ಲಿದೆ.

ಇದನ್ನು ಓದಿದ್ದೀರಾ?: ದೆಹಲಿ ಶಾಲೆಗಳಲ್ಲಿ RSS ಬೋಧನೆ: ಮಕ್ಕಳ ಎಳೆ ಮನಸ್ಸಲ್ಲಿ ಕೋಮುದ್ವೇಷ ಬಿತ್ತುವ ಹುನ್ನಾರ!

ಗಾಂಧೀಜಿಯವರ ನ್ಯಾಯಸಮ್ಮತ ರಾಜಕೀಯ ವ್ಯವಸ್ಥೆ ಇದ್ದರೆ ಮಾತ್ರ ಸತ್ಯ ಅಹಿಂಸೆ ನೈತಿಕತೆ ಸಮಾನತೆ ಮತ್ತು ಜನಸೇವೆ ಆಧಾರಿತ ರಾಜಕೀಯ ಸಾಧ್ಯ. ಇಂತಹ ವ್ಯವಸ್ಥೆಯ ಮೂಲಕ ಮಾತ್ರ ಸಮಾಜದಲ್ಲಿ ಶಾಂತಿ ನ್ಯಾಯ ಮತ್ತು ಸಮಾನತೆ ನೆಲೆಸಬಹುದು. ಮಹಾತ್ಮರು ಹೇಳಿದಂತೆ “ಭೂಮಿಯು ಎಲ್ಲರ ಅಗತ್ಯಗಳನ್ನು ಪೂರೈಸಲು ಸಾಕು. ಆದರೆ ಸ್ವಾರ್ಥವನ್ನು ತೃಪ್ತಿಪಡಿಸಲು ಅಲ್ಲ”. ಈ ಮಾತು ನ್ಯಾಯಸಮ್ಮತ ತತ್ವದ ಸಾರ. ಇಂದಿನ ರಾಜಕೀಯಕ್ಕೆ ನೈತಿಕತೆ ನೀಡುವ ದಾರಿ ದೀಪವೇ ಗಾಂಧೀಜಿಯವರ ತತ್ವಗಳು. ನಮ್ಮ ಸಮಾಜ ನಮ್ಮ ದೇಶ ಗಾಂಧೀಜಿಯವರ ಕನಸಿನ ಭಾರತವಾಗಬೇಕಾದರೆ ನ್ಯಾಯಸಮ್ಮತ ತತ್ವದ ರಾಜಕೀಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲೇ ಬೇಕಾಗಿದೆ.

-ಮಾಷಿತಾ, ಪ್ರಥಮ ಬಿ.ಸಿ.ಎ ‘ಸಿ’ ವಿಭಾಗ, ಎನ್.ಇ.ಎಸ್ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡಿಸ್, ಶಿವಮೊಗ್ಗ

ಮಾಷಿತಾ
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಪುಷ್ಪಾರ್ಚನೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವಿರೋಧಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ....

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ...

Download Eedina App Android / iOS

X