ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ ಮೂಲಕ ಯುವಜನರು ಹಾಗೂ ರೈತರ ಏಳಿಗೆಯೇ ರಾಜ್ಯದ ಏಳಿಗೆ ಎಂಬುದನ್ನು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಲು ಬೀದರ್‌ನಿಂದ ಬೆಂಗಳೂರು ವಿಧಾನಸೌಧದವರೆಗೂ 1,200 ಕಿಮೀ ದೂರ ಯುವಪರಿವರ್ತನೆ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಯಲ್ಲಪ್ಪ ಹೆಗಡೆ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬಿದರಿ ಗ್ರಾಮದ ಸಿದ್ರಾಮೇಶ್ವರ ದೇವಸ್ಥಾನದಲ್ಲಿ ಪರಮ ಪೂಜ್ಯ ಮಾದುಲಿಂಗ ಮಹಾರಾಜರು, ಲಕ್ಕಪ್ಪ ಮಹಾರಾಜರು, ರೈತ ಮುಖಂಡರಾದ ಮುತ್ತಪ್ಪ ಕೋಮಾರ, ಸಿದ್ದಪ್ಪ ಬಳಗಾನೂರ ಕಾರ್ಮಿಕ ಮುಖಂಡರಾದ ಈರನಗೌಡ ಪಾಟೀಲ, ಪ್ರಕಾಶ ಕಬ್ಬೂರ, ಮುಖಂಡರಾದ ಯಮನಪ್ಪ ಹೊರಟ್ಟಿ, ಈರನಗೌಡ ಪಾಟೀಲ, ರಮೇಶ ಜೀರಗಾಳ, ಮಲ್ಲಪ್ಪ ಸಿಂಗಾಡಿ, ಹೊನ್ನಪ್ಪ ಬಿರಡಿ, ಸುರೇಶ ಕಿವಡಿ, ರಮೇಶ ಹುಣಶಿಕಟ್ಟಿ ನೇತೃತ್ವದಲ್ಲಿ ಯುವ ಪರಿವರ್ತನೆ ಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದರು.
“ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಸರ್ಕಾರದ ಗಮನಕ್ಕೆ ತರಲು ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ, ಸರ್ವಧರ್ಮದ ಸರ್ವರೂ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಜಾಥಾ ಹಮ್ಮಿಕೊಂಡು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸರ್ಕಾರದ ಗಮನ ಸೆಳೆಯುವುದು ಯುವಪರಿವರ್ತನೆ ಯಾತ್ರೆಯ ಉದ್ದೇಶವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಪ್ರವಾದಿ ಮಹಮ್ಮದ್ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್
ಪೂಜ್ಯ ಮಾದುಲಿಂಗ ಮಹಾರಾಜರು ಮತ್ತು ಲಕ್ಕಪ್ಪ ಮಹಾರಾಜರು ಈ ಯಾತ್ರೆ ಯಶಸ್ವಿಯಾಗಲಿ ಎಂದು ಆರ್ಶೀವದಿಸಿದರು.
ಈ ಯಾತ್ರೆಯ ಚಾಲನೆಯಲ್ಲಿ ಭೀಮ್ ಆರ್ಮಿ ಮುಖಂಡರಾದ ಶೇಖರ್ ಕಾಂಬಳೆ, ಆಸ್ಕರ್ ಸರಕಾವಸ್, ಅಡಿವೆಪ್ಪ ದಳವಾಯಿ, ಇಸ್ಮಾಯಿಲ್ ಕರೋಲ್, ಸದಾಶಿವ ಆಗೋಜಿ, ರಂಗಪ್ಪ ಪಾಟೀಲ್, ಮಹಾಲಿಂಗ ಮಾಯನ್ನವರ, ಸಂಜು ಹಡಕರ ಸೇರಿದಂತೆ ಇತರ ಮುಖಂಡರು ಇದ್ದರು.